ಆ ಮನುಷ್ಯ ಪಾತ್ರೆತೊಳೆಯೋಳನ್ನು ಬಿಟ್ಟಿಲ್ಲ; ನರೇಶ್ ವಿರುದ್ಧ ಪತ್ನಿ ರಮ್ಯಾ ಆಕ್ರೋಶ

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಧ್ಯಮದ  ಜೊತೆ ಮಾತನಾಡಿದ ರಮ್ಯಾ 'ಅವಳು ಯಾರು ನನ್ನ ಬಗ್ಗೆ ಕೇಳೋಕೆ. ನಮ್ಮ ಮನೆಗೆ ಬಂದಿದ್ದು ಹೌದು ನಾನು ಅವರಿಗೆ ಊಟ ಬಡಿಸಿದ್ದೀನಿ, ಗೌರವದಿಂದ ನೋಡಿಕೊಂಡಿದ್ದೇನೆ' ಎಂದು ರಮ್ಯಾ ಹೇಳಿದ್ದಾರೆ. 

Shruiti G Krishna  | Published: Jul 2, 2022, 11:11 AM IST

ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಬಾಬು ಪತ್ನಿ ರಮ್ಯಾ ನಡುವಿನ ಕಿತ್ತಾಟ ಮತ್ತೊಂದು ಹಂತಕ್ಕೆ ಹೋಗಿದೆ. ಪವಿತ್ರಾ ಲೋಕೇಶ್ ಮಾತಿಗೆ ನರೇಶ್ ಬಾಬು ಪತ್ನಿ ರಮ್ಯಾ ಸಿಡಿದೆದ್ದಿದ್ದಾರೆ. ಮಾಧ್ಯಮದ  ಜೊತೆ ಮಾತನಾಡಿದ ರಮ್ಯಾ 'ಅವಳು ಯಾರು ನನ್ನ ಬಗ್ಗೆ ಕೇಳೋಕೆ. ನಮ್ಮ ಮನೆಗೆ ಬಂದಿದ್ದು ಹೌದು ನಾನು ಅವರಿಗೆ ಊಟ ಬಡಿಸಿದ್ದೀನಿ, ಗೌರವದಿಂದ ನೋಡಿಕೊಂಡಿದ್ದೇನೆ' ಎಂದು ರಮ್ಯಾ ಹೇಳಿದ್ದಾರೆ. 'ನನ್ನ ಆಸ್ತಿ ಮತ್ತು ಹಣದ ಬಗ್ಗೆ ಮಾತನಾಡಲು ಪವಿತ್ರಾ ಲೋಕೇಶ್ ಯಾರು' ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ. ನನಗೆ ಕುಟುಂಬ ಬೇಕು, ನನಗೆ ವಿಚ್ಚೇದನ ಬೇಡ ಎಂದು ನಾನು ಹೇಳುತ್ತಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ. ನಾನು ಕರ್ನಾಟಕದವಳು, ಇಲ್ಲೇ ಹುಟ್ಟಿ ಬೆಳೆದವಳು, ಇಲ್ಲೇ ಓದಿದವಳು ಇದನ್ನೆಲ್ಲಾ ಕೇಳೋಕೆ ಪವಿತ್ರಾ ಯಾರು, ನಾನು ಎಲ್ಲಿ ಬೇಕಾದರು ಹೋಗುತ್ತೇನೆ ಎಂದು ಹೇಳಿದರು.      
   

Read More...