- Home
- Entertainment
- TV Talk
- Bigg Bossಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾ ಇದ್ದಾರಾ ಸುಧಾರಾಣಿ? ನಟಿ ಹೇಳಿದ್ದೇನು ಕೇಳಿ...
Bigg Bossಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾ ಇದ್ದಾರಾ ಸುಧಾರಾಣಿ? ನಟಿ ಹೇಳಿದ್ದೇನು ಕೇಳಿ...
ಬಿಗ್‌ಬಾಸ್ ಕನ್ನಡ ಸೀಸನ್ 12 ಅದ್ದೂರಿಯಾಗಿ ಆರಂಭವಾಗಿದ್ದು, ಸ್ಪರ್ಧಿಗಳ ಕುರಿತಾದ ಊಹಾಪೋಹಗಳಿಗೆ ತೆರೆಬಿದ್ದಿದೆ. ನಟಿ ಸುಧಾರಾಣಿ ಪ್ರವೇಶದ ಸುದ್ದಿ ಸುಳ್ಳಾಗಿದ್ದು, ಅಚ್ಚರಿಯ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿಗಳ ಕುತೂಹಲಕ್ಕೆ ತೆರೆ
ಬಿಗ್‌ಬಾಸ್ ಪ್ರೇಮಿಗಳ ಬಹುನಿರೀಕ್ಷಿತ Bigg Boss 12 ಕೊನೆಗೂ ಆರಂಭವಾಗಿವೆ. ಈ ದೊಡ್ಮನೆಗೆ ಯಾರು ಹೋಗುತ್ತಾರೆ ಎನ್ನುವ ಬಗ್ಗೆ ಕಳೆದ ಒಂದು ತಿಂಗಳಿನಿಂದ ಸಕತ್ ಕುತೂಹಲವಿತ್ತು. ಅವರು ಹೋಗ್ತಾರೆ, ಇವರು ಹೋಗ್ತಾರೆ ಎಂದೆಲ್ಲಾ ಸುದ್ದಿ ಸದ್ದು ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಹೆಸರುಗಳ ಪೈಕಿ ಹಲವರು ಬಿಗ್‌ಬಾಸ್‌ಗೆ ಹೋಗಿಲ್ಲ. ಈಗ ಮನೆ ಪ್ರವೇಶಿಸಿರುವವರ ಪೈಕಿ ಹಲವರ ಹೆಸರು ಎಲ್ಲಿಯೂ ಸುಳಿದೇ ಇರಲಿಲ್ಲ.
ಸುಧಾರಾಣಿ ಹೆಸರು ಮುನ್ನೆಲೆಗೆ
Bigg Boss Kannada Season 12ಗೆ ಹೋಗುತ್ತಾರೆ ಎನ್ನಲಾದವರ ಪೈಕಿ ನಟಿ ಸುಧಾರಾಣಿ ಅವರ ಹೆಸರು ಮೊದಲ ಸ್ಥಾನದಲ್ಲಿತ್ತು. ಇವರ ಹೆಸರು ಸಾಕಷ್ಟು ವೈರಲ್ ಆಗಿತ್ತು. ಇದಕ್ಕೆ ಕಾರಣವೂ ಇತ್ತು. ಅದೇನೆಂದರೆ ನಟಿ ಸುಧಾರಾಣಿ ಅವರು ತುಳಸಿಯಾಗಿ ನಟಿಸುತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್ ಅಂತ್ಯಕಂಡಿದ್ದು.
ಡೈಲಾಗ್ ಮೂಲಕ ರಿಪ್ಲೈ
ಕೊನೆಗೆ ತಮ್ಮದೇ ಸಿನಿಮಾದ ಡೈಲಾಗ್ ಮೂಲಕ ಹೀಗೆ ಸುದ್ದಿ ಹರಿಡುತ್ತಿರುವವರಿಗೆ ತಿರುಗೇಟು ನೀಡಿದ್ದರು ಸುದಾರಾಣಿ. ತಮ್ಮದೇ ಡೈಲಾಗ್ ಮೂಲಕ ಸ್ಪಷ್ಟನೆ ನೀಡಿದ್ದ ಅವರು, ಯಾರ್ ಹೇಳಿದ್ದು? ಯಾವ್ ಬೋ***ಎಂಬ ತಮ್ಮ ಸಿನಿಮಾದ ಕಾಮಿಡಿ ವಿಡಿಯೋ ಶೇರ್ ಮಾಡಿದ್ದರು. ಈ ಮೂಲಕ ಬಿಗ್‌ಬಾಸ್‌ಗೆ ಹೋಗ್ತಿಲ್ಲ ಎಂದು ಸುಧಾರಾಣಿ ಕ್ಲಾರಿಟಿ ಕೊಟ್ಟಿದ್ದರು.
ವೈಲ್ಡ್‌ಕಾರ್ಡ್ ಎಂಟ್ರಿ ಕೊಡ್ತಾರಾ ಸುಧಾರಾಣಿ?
ಈಗ ನಟಿ ಕಾಣಿಸಿಕೊಂಡಿದ್ದು, ಈಗಲಾದ್ರೂ ನೋಡ್ರಪ್ಪ. ನಾನು ಇಲ್ಲೇ ಇದ್ದೇನೆ. ಬಿಗ್‌ಬಾಸ್‌ಗೂ ಹೋಗಿಲ್ಲ, ಎಲ್ಲಿಯೂ ಹೋಗಿಲ್ಲ. ಗೊತ್ತಾಯ್ತಾ ಎಂದು ತಮಾಷೆಯಿಂದ ನಕ್ಕಿದ್ದಾರೆ. ಆದರೂ ಅಲ್ಲಿದ್ದವರು ನಟಿಯನ್ನು ಬಿಡಲಿಲ್ಲ. Bigg Boss Wild Card Entry ಆಗಿ ಹೋಗ್ತಿದ್ದೀರಾ ಎಂದು ಕೇಳಿದ್ದಾರೆ.
ವೈಲ್ಡ್‌ಕಾರ್ಡ್ ಎಂಟ್ರಿಯ ಮೇಲೆ ಚಿತ್ತ
ಇದಕ್ಕೆ ಸುಧಾರಾಣಿ ಅವರು ಇಲ್ಲ ಎನ್ನುವ ಮೂಲಕ ಉತ್ತರ ಕೊಟ್ಟಿದ್ದಾರೆ. ಇದೇ ಇನ್ನಷ್ಟು ವೈರಲ್ ಆದರೆ, ಮತ್ಯಾವ ಡೈಲಾಗ್ ಮೂಲಕ ನಟಿ ಹೇಳ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಟ್ಟಾಗಿತ್ತು. ಈಗ ಎಲ್ಲರ ಚಿತ್ತ ವೈಲ್ಡ್‌ಕಾರ್ಡ್ ಎಂಟ್ರಿಯ ಮೇಲಿದೆ!
ಕಲರ್‌ಫುಲ್ ಓಪನಿಂಗ್
ಬಿಗ್‌ಬಾಸ್ 12 ಗ್ರ್ಯಾಂಡ್ ಓಪನಿಂಗ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿತ್ತು. ಮುಂದೆ 100 ದಿನಗಳ ಕಾಲ ದೊಡ್ಮನೆ ಒಳಗೆ ಆಟ ಮುಂದುವರೆಯಲಿದೆ. ಕೆಲವರು ನೇಮು ಫೇಮು ಬೇಕು ಎಂದು ಬಿಗ್‌ಬಾಸ್ ಶೋಗೆ ಬಂದಿದ್ದಾರೆ. ಕೆಲವರಿಗೆ ಹೆಸರು ಬೇಕಂತೆ, 50 ಲಕ್ಷ ರೂ. ಬಹುಮಾನದ ಮೇಲೆ ಕೆಲವರು ಕಣ್ಣಿಟ್ಟಿದ್ದಾರೆ. ಯಾರು ಕೊನೆಯವರೆಗೂ ಉಳಿದುಕೊಳ್ತಾರೆ? ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಸಂಸ್ಕೃತಿಯ ಬಿಗ್‌ಬಾಸ್
ಬಾರಿ ಬಿಗ್‌ಬಾಸ್ ಮನೆಯೂ ಕೂಡ ವಿಭಿನ್ನವಾಗಿದ್ದು, ಕರ್ನಾಟಕದ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಿದೆ. ಕರ್ನಾಟಕದ ಪ್ರಾದೇಶಿಕತೆ, ಇತಿಹಾಸ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಜೊತೆಗೆ ಈ ಬಾರಿ ಮನೆಯೂ ವಿಭಿನ್ನವಾಗಿದ್ದು, ಎರಡು ಬೆಡ್ ರೂಮ್, ಎರಡು ಡೈನಿಂಗ್ ಟೇಬಲ್ ಕಾಣಿಸಿಕೊಂಡಿದೆ. ಅಲ್ಲದೇ ಪ್ರಾರಂಭದಲ್ಲಿಯೇ ಒಂಟಿ-ಜಂಟಿ ಎಂಬ ಆಟ ಇನ್ನಷ್ಟು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ.
ಸ್ಪರ್ಧಿಗಳು ಯಾರ್‍ಯಾರು?
ಕಾಕ್ರೋಚ್ ಸುಧಿ, ಕಾವ್ಯಾ, ಡಾಗ್ , ಗಿಲ್ಲಿ, ಜಾನ್ಹವಿ, ನಟ ಧನುಷ್, ಗಿಚ್ಚಿ-ಗಿಲಿಗಿಲಿ ವಿಜೇತ ಚಂದ್ರಪ್ರಭಾ, ಸಿಲ್ಲಿ-ಲಲ್ಲಿ ಧಾರಾವಾಹಿ ಖ್ಯಾತಿಯ ಮಂಜು ಭಾಷಿಣಿ ಕಾಲಿಟ್ಟಿದ್ದಾರೆ. ರಾಶಿಕಾ ಶೆಟ್ಟಿ, ಅಭಿಷೇಕ್, ಮಲ್ಲಮ್ಮ, ನಟಿ ಅಶ್ವಿನಿ, ಧ್ರುವಂತ್, ಯೂಟ್ಯೂಬರ್ ರಕ್ಷಿತಾ ಶೆಟ್ಟಿ, ಬಾಡಿ ಬಿಲ್ಡರ್ ಕರಿಬಸಪ್ಪ, ಗಾಯಕ ಮಾಳು ನಿಪನಾಳ, ನಟಿ ಸ್ಪಂದನ, ಖ್ಯಾತ ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಆರ್‌ಜೆ ಅಮಿತ್ ಎಂಟ್ರಿ ಕೊಟ್ಟಿದ್ದಾರೆ.