Karna Serial Today Episode: ‘ಕರ್ಣ’ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಆದರೆ ವೀಕ್ಷಕರು ಅಂದುಕೊಂಡ ಹಾಗೆ ಆಗೋದು ಕಷ್ಟ ಇದೆ. 

‘ಕರ್ಣ’ ಧಾರಾವಾಹಿಯಲ್ಲಿ ಮಾರಿಗುಡಿಯಲ್ಲಿ ಕೊನೆಗೂ ನಿಧಿ ಹಾಗೂ ಕರ್ಣ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ, ಇವರಿಬ್ಬರು ಪ್ರೀತಿ ಹೇಳಿಕೊಳ್ಳಲಿ, ಒಂದಾಗಲಿ ಎಂದು ವೀಕ್ಷಕರು ಬಯಸುತ್ತಿದ್ದರು, ಅದೀಗ ನಿಜವಾಗಿದೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ.

ನಿಧಿ, ಕರ್ಣ ನಡುವಿನ ಸಂಭಾಷಣೆ ಏನು?

ನಿಧಿ: ನಿಜ ಹೇಳಬೇಕು, ನಿಮಗೆ ನಾನೇನು?

ಕರ್ಣ: ನನ್ನ ಹಾರ್ಟ್‌ ಅನ್ನೋ ಶಿಪ್‌ಗೆ ಕ್ಯಾಪ್ಟನ್‌ ಆಗಬೇಕು. ಇವನು ಇದಾನಲ್ಲ ಅವನು ಕಳ್ಳ ಕಣ್ರೀ, ನನಗೋಸ್ಕರ ಲಬ್‌ ಡಬ್‌ ಎನ್ನುತ್ತಿದ್ದನು, ಈಗ ನಿಮ್ಮನ್ನು ಸೇರಿಸಿ ಎರಡು ಸಲ ಲಬ್‌ ಡಬ್‌ ಹೇಳುತ್ತಿದ್ದಾನೆ. ಐ ಲವ್‌ ಯು ನಿಧಿ

ನಿಧಿ: ಐ ಲವ್‌ ಯು ಮುದ್ದು, ಥ್ಯಾಂಕ್‌ ಯು ಸೋ ಮಚ್‌

ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಏನು ಹೇಳಿದರು?

ಇವರಿಬ್ಬರನ್ನು ದೂರ ಮಾಡಿದ್ರೆ, ಜನರ ಗುಂಪು ಮಾಡಿಕೊಂಡು ಬರ್ತೀವಿ ಡೈರೆಕ್ಟ್ ಕೊಲೆ ಮಾಡೋದಿಕ್ಕೆ. ಅಮೃತಧಾರೆ ಬಿಟ್ರೆ ಇದೆ ಸೀರಿಯಲ್ ತುಂಬಾ ಚನ್ನಾಗಿರೋದು. ಪ್ಲೀಸ್ ಇವ್ರೇ ಜೋಡಿಯಾಗಬೇಕು, ನಿತ್ಯ, ಕರ್ಣ ಜೋಡಿಯಾದ್ರೆ ಯಾರು ಸೀರಿಯಲ್ ನೋಡಲ್ಲ, ಬೋರ್ ಆಗತ್ತೆ

ಪ್ರೀತಿ ಕೊಡುವುದು ಕಲಿತು ಪಡೆಯುವುದನ್ನು ಮರೆತ ಮುಗ್ಧನವನು, ರಚ್ಚೆ ಹಿಡಿದು ಹುಚ್ಚಿಯಂತೆ ಪ್ರೀತಿ ಮಾಡುವ ಹುಡುಗಿ ಇವಳು,ಮೂಡಿತೊಂದು ಯುಗಳಗೀತೆ ಕನಸು ನನಸುಗಳ ನಡುವೆ, ಕೇಳಿದಳವಳು ಅವನಿಗೆ ಹೃದಯದ "ಕರ್ಣ"ದಿಂದ ನನ್ನ ಪ್ರೀತಿಯ ಕೇಳುವೆಯೇ? ಅದಕುತ್ತರಿಸಿದನವನು "ಇದು ಒಂದು ಪ್ರಶ್ನೆಯೇ" ನೀನು ನನಗೆ ದೊರೆತ ಅಮೂಲ್ಯ"ನಿಧಿ"ಯೇ

ಈ ಎಪಿಸೋಡ್‌ನಲ್ಲಿ ಚೆನ್ನಾಗಿ ಬರಲಿಲ್ಲ ಅಂದರೆ ಜನ ನಿಮ್ಮ ಗ್ರಹಚಾರ ಬಿಡಿಸಿ ಬಿಡುತ್ತಾರೆ ಅಷ್ಟೇ.

ಇವರ ದೂರ ಮಾಡ್ಬಾರ್ದು, ಕರ್ಣ ನಿಧಿಯನ್ನು ಮದುವೆ ಆಗ್ಬೇಕು, ಅಷ್ಟೇ ಇಲ್ಲ ಅಂದ್ರೆ.. ವೀಕ್ಷಕರು ತುಂಬ ಇಷ್ಟಪಟ್ಟು ನಿಮ್ಮ ಧಾರಾವಾಹಿಯನ್ನು ನೋಡುತ್ತಾರೆ, ಇಲ್ಲ ಅಂದರೆ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ನಿಮ್ಮ ಸೀರಿಯಲ್ ಹೆಚ್ಚು ದಿನ ಓಡ್ಬೇಕು ಅಂದ್ರೆ ಜನ ಇಷ್ಟ ಪಟ್ಟು ನೋಡ್ಬೇಕು ಅಂದ್ರೆ ಮುಂದಿನ ಎಪಿಸೋಡ್‌ಗಳಲ್ಲಿ ಕರ್ಣ ನಿಧಿನೇ ಒಂದಾಗಬೇಕು... ದಯವಿಟ್ಟು ಡೈರೆಕ್ಟರ್ ಸರ್. ಇವರಿಬ್ಬರನ್ನ ಒಂದು ಮಾಡಿ ವೀಕ್ಷಕರಿಗೆ ಖುಷಿ ಆಗುತ್ತೇ ಇನ್ನು ಹೆಚ್ಚಿನ ಜನ ನೋಡ್ತಾರೆ.

ಬೆಳಿಗ್ಗೆ ಎದ್ದು ರಾಮಂಗು ಸೀತೆಗೂ ಏನ್ ಸಂಬಂಧ ಅನ್ನಲ್ಲ ತಾನೇ

ಕರ್ಣ ಮುದ್ದು ಮುದ್ದಾಗಿ ಕಾಣ್ತಿದ್ದಾರೆ, ಮುದ್ದಣ್ಣ ಮನೋರಮೆ ಕಥೆ ಆದರೆ ಕಷ್ಟ

ಡೈರೆಕ್ಟರ್ ಅವರೇ, ಸ್ನೇಹ ಕಂಠಿ ಜೋಡಿ ದೂರ ಮಾಡ್ದಂಗೆ ಕರ್ಣ-ನಿಧಿ ಜೋಡಿಯನ್ನು ದೂರ ಮಾಡ್ಬೇಡಿ ಈ ಜೋಡಿ ಅಂದ್ರೆ ತುಂಬಾ ಇಷ್ಟ

ಮುಂದೆ ಏನಾಗುವುದು?

ನಿಧಿ ಹಾಗೂ ಕರ್ಣ ಪ್ರೀತಿ ಮಾಡುತ್ತಿದ್ದು, ಈಗ ಮತ್ತಿನ ಅಮಲಿನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದಕೂಡಲೇ ಪ್ರೀತಿ ವಿಚಾರ ಹೇಳಿಕೊಂಡಿರೋದು ಇವರಿಬ್ಬರಿಗೂ ನೆನಪಿರುತ್ತದೆಯೋ ಇಲ್ಲವೋ. ಎಲ್ಲರೂ ನಿಧಿ ಹಾಗೂ ಕರ್ಣನಿಗೆ ಮದುವೆ ಆಗಲಿ ಅಂತ ಬಯಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ರೀತಿ ಆಗೋದು ಡೌಟ್.‌ ಸೀರಿಯಲ್‌ನಲ್ಲಿ ಕರ್ಣ ಫೈಟ್‌ ಮಾಡುವಾಗ, ಅವನ ಕೈನಿಂದ ಕುಂಕುಮವು ನಿತ್ಯಾ ಮೈಮೇಲೆ ಬೀಳುತ್ತದೆ.

ಕಥೆ ಏನು?

ಡಾಕ್ಟರ್‌ ಕರ್ಣನ ಆಸ್ಪತ್ರೆಯಲ್ಲಿ ನಿಧಿ ಜ್ಯೂನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕರ್ಣನ ಅಜ್ಜಿ ಹಾಗೂ ನಿಧಿ-ನಿತ್ಯಾ ಅಜ್ಜಿ ಕೂಡ ಸ್ನೇಹಿತರು. ಹೀಗಾಗಿ ಈ ಕುಟುಂಬದ ಮಧ್ಯೆ ಆತ್ಮೀಯತೆ ಇದೆ.

ಪಾತ್ರಧಾರಿಗಳು

ಕರ್ಣ- ಕಿರಣ್‌ ರಾಜ್‌

ನಿಧಿ- ಭವ್ಯಾ ಗೌಡ

ನಿತ್ಯಾ- ನಮ್ರತಾ ಗೌಡ