Karna Kannada Serial Today Episode: ‘ಕರ್ಣ’ ಧಾರಾವಾಹಿಯಲ್ಲಿ ಕರ್ಣ ಯಾರನ್ನು ಮದುವೆ ಆಗ್ತಾನೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಈ ಪ್ರಶ್ನೆಗೆ ಸೀರಿಯಲ್‌ನಲ್ಲಿ ಉತ್ತರ ಸಿಕ್ಕಿದೆ.
‘ಕರ್ಣ’ ಧಾರಾವಾಹಿಯಲ್ಲಿ ( Karna Serial ) ಕರ್ಣ, ನಿತ್ಯಾ, ನಿಧಿ ಎಲ್ಲರೂ ಮಾರಿಗುಡಿಗೆ ಹೊರಟಿದ್ದಾರೆ. ಅಲ್ಲಿ ಒಂದಿಷ್ಟು ರೌಡಿಗಳು ಅವರನ್ನು ತಡೆದು, ನಿತ್ಯಾಳನ್ನು ಕಿಡ್ನ್ಯಾಪ್ ಮಾಡಲು ನೋಡಿದ್ದಾರೆ. ಆಗ ಕರ್ಣ ಫೈಟ್ ಮಾಡಿದ್ದಾನೆ. ಆ ಫೈಟ್‌ನಲ್ಲಿ ಕರ್ಣ ಯಾರನ್ನು ಮದುವೆ ಆಗ್ತಾನೆ ಎನ್ನೋದಕ್ಕೆ ಸೂಚನೆ ಸಿಕ್ಕಿದೆ.
ತೇಜಸ್, ನಿತ್ಯಾ ಮದುವೆ ಕ್ಯಾನ್ಸಲ್ ಆಗತ್ತೆ!
ಕರ್ಣ ಈಗ ನಿಧಿಯನ್ನು ಪ್ರೀತಿ ಮಾಡುತ್ತಿದ್ದಾನೆ, ನಿಧಿಗಂತೂ ಕರ್ಣ ಅಂದರೆ ಜೀವ. ಆದರೆ ಇವರಿಬ್ಬರೂ ಇನ್ನೂ ಪ್ರೀತಿಯನ್ನು ಹೇಳಿಕೊಂಡಿಲ್ಲ. ತೇಜಸ್ ಹಾಗೂ ನಿತ್ಯಾ ಲವ್ ಮಾಡಿ ಮದುವೆ ಆಗುತ್ತಿದ್ದಾರೆ, ಇವರಿಬ್ಬರ ನಿಶ್ಚಿತಾರ್ಥ ಕೂಡ ಆಗಿದೆ. ಆದರೆ ತೇಜಸ್ ಮನೆಯವರಿಗೆ ನಿತ್ಯಾ ತಮ್ಮ ಮನೆ ಸೊಸೆ ಆಗೋದು ಇಷ್ಟ ಇರಲಿಲ್ಲ. ತೇಜಸ್ ಮನೆಯವರನ್ನು ನೋಡಿದರೆ ಕೊನೆ ಗಳಿಗೆಯಲ್ಲಿ ಏನಾದರೊಂದು ಸಮಸ್ಯೆ ಆಗಿ ಅವರಿಬ್ಬರ ಮದುವೆ ಕ್ಯಾನ್ಸಲ್ ಆಗುವಂತೆ ಕಾಣುತ್ತಿದೆ.
ಕರ್ಣ ಮದುವೆ ಆಗೋದು ಯಾರನ್ನು?
ಈ ಫೈಟ್ ನಡುವೆ ಏಕಕಾಲಕ್ಕೆ ಅರಿಷಿಣ ಹಾಗೂ ಕುಂಕುಮ ಅಕ್ಕ-ತಂಗಿಯರ ಮೇಲೆ ಬಿದ್ದಿದೆ. ನಿಧಿ ಮೇಲೆ ಅರಿಷಿಣ, ನಿತ್ಯಾ ಮೇಲೆ ಕುಂಕುಮ ಬಿದ್ದಿದೆ. ಹೀಗಾಗಿ ಕರ್ಣ ನಿತ್ಯಾಳನ್ನು ಮದುವೆ ಆಗೋ ಚಾನ್ಸ್ ಜಾಸ್ತಿ ಇದೆ ಅಥವಾ ಇವರಿಬ್ಬರನ್ನು ಕರ್ಣ ಮದುವೆ ಆಗುವ ಹಾಗೆ ಕಾಣ್ತಿದೆ. ಆದರೆ ಕನ್ನಡ ಧಾರಾವಾಹಿಗಳಲ್ಲಿ ಏಕಕಾಲಕ್ಕೆ ಇಬ್ಬರನ್ನು ಮದುವೆ ಆಗೋದು ಡೌಟ್. ನಿಧಿ ಹಾಗೂ ಕರ್ಣ ಮದುವೆ ಆಗಲಿ ಅಂತ ವೀಕ್ಷಕರಿಗೆ ಆಸೆ ಇದೆ, ಆದರೆ ಆ ರೀತಿ ಮಾತ್ರ ಆಗೋದಿಲ್ಲ. ಇನ್ನೊಂದು ಕಡೆ ಫೈಟ್ ಮಾಡುವಾಗ ಇನ್ನೇನು ರೌಡಿಗಳು ಕರ್ಣನಿಗೆ ಚೂರಿ ಹಾಕುತ್ತಿದ್ದರು ಎನ್ನೋವಾಗ ನಿಧಿ, ಸರ್ ಎಂದು ಕೂಗಿ ಅವರನ್ನು ಎಚ್ಚರಿಸಿದಳು. ಆದರೆ ಅದೇ ಟೈಮ್‌ಗೆ ನಿತ್ಯಾ ಹೋಗಿ ಆ ಚಾಕುವನ್ನು ಕೈನಿಂದಲೇ ಹಿಡಿದುಕೊಂಡಳು.
ಕರ್ಣನನ್ನು ಕಂಡರೆ ನಿತ್ಯಾಗೆ ಕಾಳಜಿ
ಕರ್ಣನಿಗೆ ಏನೋ ಆಗತ್ತೆ ಅಂತ ನಿತ್ಯಾ ತನ್ನ ಮೇಲೆ ಅಪಾಯ ಎಳೆದುಕೊಂಡಳು. ತನ್ನಿಂದ ಹೀಗಾಯ್ತು ಅಂತ ಕರ್ಣನಿಗೆ ಬೇಸರ ಆದರೆ, ನಾನು ಈ ರೀತಿ ಮಾಡಿಲ್ಲ ಅಂದರೆ ನನಗೆ ಆದ ಗಾಯ ಕರ್ಣನಿಗೆ ಆಗ್ತಿತ್ತು ಅಂತ ನಿತ್ಯಾಗೆ ಕಳವಳ ಆಗಿದೆ. ಒಟ್ಟಿನಲ್ಲಿ ಅಕ್ಕ-ತಂಗಿಗೆ ಕರ್ಣನ ಮೇಲೆ ಪ್ರೀತಿ, ಅಭಿಮಾನ, ಕಾಳಜಿ ಎಲ್ಲವೂ ಇದೆ.
ಮುಂದೆ ಏನಾಗುವುದು?
ಒಟ್ಟಿನಲ್ಲಿ ಕರ್ಣ ನಿತ್ಯಾಳನ್ನು ಮದುವೆ ಆಗೋ ಚಾನ್ಸ್ ಜಾಸ್ತಿ ಇದೆ. ಕರ್ಣ ಹಾಗೂ ನಿತ್ಯಾ ಮದುವೆ ಆದರೂ ಕೂಡ ಅವರಿಬ್ಬರ ಮಧ್ಯೆ ಪ್ರೀತಿ ಇಲ್ಲ. ನಿತ್ಯಾ ಕಾಳಜಿಯಿಂದ ಕರ್ಣನಿಗೆ ಅವಳ ಮೇಲೆ ಲವ್ ಹುಟ್ಟಬಹುದು ಅಥವಾ ಕರ್ಣನ ಒಳ್ಳೆಯ ಗುಣದಿಂದ ಅವಳ ಮೇಲೆ ಕರ್ಣನಿಗೆ ಲವ್ ಆಗಬಹುದು. ಸದ್ಯ ವೀಕ್ಷಕರಿಗೆ ವಿಶ್ಯುವಲ್ ಟ್ರೀಟ್ ಕೊಡ್ತಿರುವ ಈ ಸೀರಿಯಲ್ ನಿಜಕ್ಕೂ ಕಳೆದ ಎಂಟು ವಾರಗಳ ಕಾಲ ಟಿಆರ್‌ಪಿಯಲ್ಲಿ ನಂ 1 ಸ್ಥಾನ ಪಡೆದಿತ್ತು.
ಈ ಧಾರಾವಾಹಿ ಕಥೆ ಏನು?
ಈ ಧಾರಾವಾಹಿಯಲ್ಲಿ ಕರ್ಣ ಡಾಕ್ಟರ್. ಅವನ ಮನೆಯಲ್ಲಿ ಅವನೇ ಅನಾಥ ಆಗಿದ್ದಾನೆ. ತೊಟ್ಟಿಯಲ್ಲಿ ಬಿದ್ದಿದ್ದ ಕರ್ಣನನ್ನು ( ಮಗು ) ರಾಮಕೃಷ್ಣ ಎನ್ನುವವರು ಮನೆಗೆ ಕರೆದುಕೊಂಡು ಬಂದು ಸ್ವಂತ ಮೊಮ್ಮಗ ಎನ್ನುವಂತೆ ಸಾಕಿದರು. ಕರ್ಣನ ಅಜ್ಜಿ ಹಾಗೂ ನಿತ್ಯಾ-ನಿಧಿ ಅಜ್ಜಿ ಕೂಡ ಬೆಸ್ಟ್ ಫ್ರೆಂಡ್ಸ್. ಕರ್ಣನ ಮೆಡಿಕಲ್ ಕಾಲೇಜಿನಲ್ಲಿ ನಿಧಿ ಸ್ಟುಡೆಂಟ್. ಹೀಗಾಗಿ ಈ ಎರಡೂ ಕುಟುಂಬಗಳ ನಡುವೆ ಹೆಚ್ಚಿನ ಬಾಂಧವ್ಯ ಇದೆ.
ಪಾತ್ರಧಾರಿಗಳು
ಕರ್ಣ- ಕಿರಣ್ ರಾಜ್
ನಿಧಿ- ಭವ್ಯಾ ಗೌಡ
ನಿತ್ಯಾ- ನಮ್ರತಾ ಗೌಡ
