Karna Serial Today Episode: ಕರ್ಣ ಧಾರಾವಾಹಿಯಲ್ಲಿ ಇನ್ನೇನು ನಿಧಿಗೆ ಕರ್ಣ ಪ್ರೇಮ ನಿವೇದನೆ ಮಾಡಬೇಕು ಎನ್ನುವಾಗ ಅನಾಹುತ ಆಗಲಿದೆಯಾ ಎನ್ನುವ ಪ್ರಶ್ನೆ ಶುರುವಾಗಿದೆ.
ಕರ್ಣ ಧಾರಾವಾಹಿಯಲ್ಲಿ ( Karna Serial ) ಕರ್ಣ ಅನಾಥ. ಆತ ಮಗುವಿದ್ದಾಗ ತೊಟ್ಟಿಯಲ್ಲಿ ಬಿದ್ದಿದ್ದನು. ಅದನ್ನು ನೋಡಿ ರಾಮಕೃಷ್ಣ ಎನ್ನುವ ಆಗರ್ಭ ಶ್ರೀಮಂತ ಮನೆಗೆ ಕರೆತಂದು ಕರ್ಣ ಎಂದು ನಾಮಕರಣ ಮಾಡಿದ್ದಲ್ಲದೆ, ಸ್ವಂತ ಮೊಮ್ಮಗ ಎನ್ನುವಂತೆ ಬೆಳೆಸಿದರು. ಆ ಮನೆಯಲ್ಲಿ ಕರ್ಣನಿಗೆ ತಾತ, ಅಜ್ಜಿ, ತಾಯಿ ಎನ್ನುವವರು ಇದ್ದಾರೆ. ಅವರನ್ನು ಬಿಟ್ಟು ಉಳಿದವರೆಲ್ಲರೂ ಕರ್ಣನನ್ನು ಅನಾಥ, ದಿಕ್ಕಿಲ್ಲದವನು ಎನ್ನುವಂತೆ ನೋಡುತ್ತಾರೆ.
ನಿಧಿ ಅಂದ್ರೆ ಕರ್ಣನಿಗೂ ಇಷ್ಟ
ಕರ್ಣನನ್ನು ಕಂಡರೆ ನಿಧಿಗೆ ತುಂಬ ಇಷ್ಟ. ಅದನ್ನೀಗ ಅವಳು ಬಹಳ ಸಲ ಹೇಳಿದ್ದಾಳೆ. ಇದು ಕರ್ಣನಿಗೂ ಗೊತ್ತಿದೆ. ಕರ್ಣನಿಗೆ ತೊಂದರೆಯಾದಾಗ ಅದನ್ನು ನಿಧಿ ಸರಿ ಮಾಡುತ್ತಾಳೆ ಅಥವಾ ತೊಂದರೆ ಆಗದಂತೆ ತಡೆಯುತ್ತಾಳೆ. ತನಗೆ ಕುಟುಂಬದ ಪ್ರೀತಿಯನ್ನು ಕೊಟ್ಟಿರೋ ನಿಧಿ ಕಂಡರೆ ಕರ್ಣನಿಗೂ ಇಷ್ಟ. ಆದರೆ ಅವನು ಇನ್ನೂ ಅವಳನ್ನು ಒಪ್ಪಿಕೊಂಡಿಲ್ಲ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಕರ್ಣನಿಗೆ ಹೊಟ್ಟೆಕಿಚ್ಚು ಆಗೋದು ಪಕ್ಕಾ!
ಕರ್ಣನ ಒಡೆತನದ ಮೆಡಿಕಲ್ ಕಾಲೇಜಿನಲ್ಲಿ ನಿಧಿ ಜ್ಯೂನಿಯರ್. ಕರ್ಣನ ಅಜ್ಜಿ, ನಿಧಿ ಅಜ್ಜಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ಹೀಗಾಗಿ ಕರ್ಣ, ನಿಧಿ ಆಗಾಗ ಮುಖಾಮುಖಿಯಾಗುತ್ತಾರೆ. ನಿಧಿ ಅಕ್ಕ ನಿತ್ಯಾ, ತೇಜಸ್ ಜೊತೆ ಮದುವೆ ಆಗಲು ರೆಡಿಯಾಗಿದ್ದಾಳೆ. ಹೀಗಾಗಿ ಅವನು ನಿಧಿಗೆ ಇನ್ನಷ್ಟು ಹತ್ತಿರ ಆಗಿದ್ದಾನೆ. ಕರ್ಣನಿಗೆ ನನ್ನ ಕಂಡರೆ ಇಷ್ಟ ಅಂತ ನಿಧಿಗೆ ಗೊತ್ತಿದೆ. ಆದರೆ ಅವನು ಮಾತ್ರ ಬಾಯಿಬಿಟ್ಟು ಹೇಳುತ್ತಿಲ್ಲ. ಇನ್ನೊಂದು ಕಡೆ ನಾನು ಬೇರೆ ಹುಡುಗನ ಬಗ್ಗೆ ಮಾತನಾಡಿದರೆ ಕರ್ಣನಿಗೆ ಹೊಟ್ಟೆಕಿಚ್ಚು ಆಗುವುದು ಅಂತ ಅವಳಿಗೆ ಗೊತ್ತಾಗಿದೆ. ಇವರಿಬ್ಬರು ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳುವ ಮುನ್ನ ಬೇರೆ ಅನಾಹುತ ಆಗೋ ಚಾನ್ಸ್ ಜಾಸ್ತಿ ಇದೆ.
ಕರ್ಣ-ನಿಧಿ ಮದುವೆ ಆಗೋದು ಡೌಟ್
ಕರ್ಣ ಹಾಗೂ ನಿಧಿ ಮದುವೆ ಆಗಬೇಕು ಅಂತ ವೀಕ್ಷಕರು ಬಯಸುತ್ತಿದ್ದಾರೆ. ಆದರೆ ತೇಜಸ್ ಹಾಗೂ ನಿತ್ಯಾ ಮದುವೆ ಆಗೋದು ಸುಳ್ಳು ಎಂದು ಕಾಣುತ್ತಿದೆ. ತೇಜಸ್ ಮನೆಯವರು ನಿತ್ಯಾಳನ್ನು ಒಪ್ಪಿಕೊಂಡಿಲ್ಲ. ಈಗ ಅವಳ ಮನೆಗೆ ತೇಜಸ್ ಅಪ್ಪ-ಅಮ್ಮ ಎಂದು ಹೇಳಿಕೊಂಡು ಇಬ್ಬರು ಬಂದಿದ್ದಾರೆ. ನಿಜಕ್ಕೂ ಅವರು ತೇಜಸ್ ಪಾಲಕರೇ ಎಂಬ ಸಂಶಯ ಬಂದಿದೆ. ಮದುವೆ ಮಂಟಪದಲ್ಲಿ ತೇಜಸ್ ಹಾಗೂ ನಿತ್ಯಾ ಮದುವೆ ನಿಲ್ಲೋದು ಗ್ಯಾರಂಟಿ. ಆಗ ಹಸೆಮಣೆ ಮೇಲೆ ಕೂತ ನಿತ್ಯಾಳನ್ನು ಕಾಪಾಡಲು ಕರ್ಣ ಅವಳನ್ನು ಮದುವೆ ಆಗೋ ಚಾನ್ಸ್ ಜಾಸ್ತಿ ಇದೆ.
ಕರ್ಣ ಹಾಗೂ ನಿತ್ಯಾ ನಡುವೆ ಪ್ರೀತಿ ಇಲ್ಲ. ಕರ್ಣನಿಗೆ ಹೊಂದಾಣಿಕೆ ಮಾಡಿಕೊಂಡು ಗೊತ್ತಿದೆ, ನಿತ್ಯಾಳನ್ನು ಮದುವೆ ಆದರೂ ಕೂಡ ಅವನು ಸಹಿಸಿಕೊಂಡು ಹೋಗಬಹುದು. ಇನ್ನೊಂದು ಕಡೆ ಕರ್ಣನ ಮೇಲೆ ಗೌರವ ಇಟ್ಟುಕೊಂಡಿರೋ ನಿತ್ಯಾ, ಅವನನ್ನು ಪ್ರೀತಿಸಿದರೂ ಕೂಡ ಆಶ್ಚರ್ಯವಿಲ್ಲ.
ಪಾತ್ರಧಾರಿಗಳು
ಕರ್ಣ-ಕಿರಣ್ ರಾಜ್
ನಿಧಿ-ಭವ್ಯಾ ಗೌಡ
ನಿತ್ಯಾ-ನಮ್ರತಾ ಗೌಡ
ಅಂದಹಾಗೆ ಆಶಾರಾಣಿ, ಟಿ ಎಸ್ ನಾಗಾಭರಣ, ಸಿಮ್ರನ್, ವೀಣಾ ರಾವ್, ಗಾಯತ್ರಿ ಪ್ರಭಾಕರ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಈ ಸೀರಿಯಲ್ ಶುರುವಾಗಿ ಎಂಟು ವಾರಗಳು ಕಳೆದಿವೆ. ಎಂಟು ವಾರಗಳಿಂದ ಈ ಸೀರಿಯಲ್ ಟಿಆರ್‌ಪಿಯಲ್ಲಿ ನಂ 1 ಸ್ಥಾನ ಪಡೆದಿದೆ. ನಮ್ರತಾ ಗೌಡ, ಕಿರಣ್ ರಾಜ್, ಭವ್ಯಾ ಗೌಡ ಕಾಂಬಿನೇಶನ್ ಅನೇಕರಿಗೆ ಇಷ್ಟ ಆಗಿದೆ, ಈ ಸೀರಿಯಲ್‌ಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗ್ತಿದೆ.

