- Home
- Entertainment
- TV Talk
- Karna Serial: ಭರ್ಜರಿ ಟ್ವಿಸ್ಟ್; ನಿತ್ಯಾ, ನಿಧಿ ನಡುವೆ ಕರ್ಣ ಮದುವೆ ಆಗೋದು ಯಾರನ್ನು?
Karna Serial: ಭರ್ಜರಿ ಟ್ವಿಸ್ಟ್; ನಿತ್ಯಾ, ನಿಧಿ ನಡುವೆ ಕರ್ಣ ಮದುವೆ ಆಗೋದು ಯಾರನ್ನು?
‘ಕರ್ಣ’ ಧಾರಾವಾಹಿಯಲ್ಲಿ ಕರ್ಣನನ್ನು ಯಾರು ಮದುವೆ ಆಗ್ತಾರೆ ಎಂಬ ಕುತೂಹಲ ಶುರುವಾಗಿದೆ. ನಿತ್ಯಾ, ತೇಜಸ್ ಮದುವೆ ಆಗೋದು ಡೌಟ್ ಆಗಿದೆ. ಇನ್ನೊಂದು ಕಡೆ ಅವಕಾಶ ಸಿಕ್ಕಾಗೆಲ್ಲ ನಿಧಿಯನ್ನು ಕರ್ಣನ ತಂದೆ ಅವಮಾನಿಸುತ್ತಾರೆ.

ತೇಜಸ್ ಹಾಗೂ ನಿತ್ಯಾ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪಾಲಕರಿಗೆ ತಿಳಿಸದೆ ತೇಜಸ್ ಉಂಗುರ ಬದಲಾಯಿಸಿಕೊಂಡಿದ್ದನು. ಇನ್ನೊಂದು ಕಡೆ ಇವನ ಮನೆಯವರು ಕೂಡ ನಿತ್ಯಾಗೆ ಬಾಯಿಗೆ ಬಂದಹಾಗೆ ಬೈದಿದ್ದರು. ನಿನಗೆ ಯೋಗ್ಯತೆ ಇಲ್ಲ, ಗತಿಗೆಟ್ಟವಳು, ನಮ್ಮ ಮನೆಗೆ ಬಂದು ಕುಟುಂಬ ಹಾಳೋ ಮಾಡೋದು ಬೇಡ ಅಂತೆಲ್ಲ ಬೈದಿದ್ದರು.
ಅಪ್ಪ-ಅಮ್ಮನನ್ನು ಕಳೆದುಕೊಂಡಿರೋ ನಿತ್ಯಾಗೆ ಅತ್ತೆ-ಮಾವನ ಪ್ರೀತಿ ಸಿಗಬೇಕು ಎನ್ನೋದಿತ್ತು. ಇನ್ನೊಂದು ಕಡೆ ತೇಜಸ್ ತಂದೆ-ತಾಯಿ ಇಷ್ಟೆಲ್ಲ ಹೀನಾಯವಾಗಿ ಮಾತನಾಡಿದಾಗ ನಾನು ಹೇಗೆ ಮದುವೆ ಆಗಲಿ ಅಂತ ನಿತ್ಯಾಗೆ ಸಂಶಯ ಶುರುವಾಗಿದೆ.
ಕರ್ಣ ಮದುವೆ ಆಗಬಾರದು ಅಂತ ಅವನ ತಂದೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಈಗ ಅಜ್ಜಿ ಈ ಒಪ್ಪಂದವನ್ನು ಮುರಿದಿದ್ದಾರೆ. ಕರ್ಣ ಮದುವೆ ಆಗದಿದ್ರೆ ಸಾಯೋದಾಗಿ ಬೆದರಿಕೆ ಕೂಡ ಹಾಕಿದ್ದಳು. ಹೀಗಾಗಿ ಕರ್ಣ ಮದುವೆ ಆಗಲು ರೆಡಿ ಆಗಿದ್ದಾನೆ.
ಕರ್ಣನನ್ನು ಕಂಡರೆ ನಿಧಿಗೆ ತುಂಬ ಇಷ್ಟ. ಯಾವಾಗಲೂ ಕರ್ಣ ಸರ್ ಎಂದು ಓಡುವ ಅವಳು, ಅವನನ್ನು ಮದುವೆ ಆಗೋ ಕನಸು ಕಾಣುತ್ತಿರುತ್ತಾಳೆ. ಇನ್ನೂ ಅವಳು ಕರ್ಣನ ಮುಂದೆ ಪ್ರೀತಿಯನ್ನು ಹೇಳಿಕೊಂಡಿಲ್ಲ. ಹಾಗಾದರೆ ಮುಂದೆ ಏನಾಗುವುದು?
ಈಗ ನಿತ್ಯಾಗೆ ಏನೇ ಸಮಸ್ಯೆ ಬಂದರೂ ಕೂಡ ಅದನ್ನು ಕರ್ಣ ಪರಿಹಾರ ಮಾಡ್ತಾನೆ. ಅವಳನ್ನು ಅಪಾಯದಿಂದ ಬಚಾವ್ ಮಾಡಿರೋ ಕರ್ಣ ಕೊನೆಗೆ ನಿತ್ಯಾಳನ್ನೇ ಮದುವೆ ಆಗ್ತಾನಾ? ಹೀಗೊಂದು ಸಂಶಯ ಶುರುವಾಗಿದೆ.
ಈ ಧಾರಾವಾಹಿಯಲ್ಲಿ ಕರ್ಣನಿಗೆ ಇಬ್ಬರು ಹೀರೋಯಿನ್. ಯಾವಾಗಲೂ ಸೀರಿಯಲ್‌ನಲ್ಲಿ ಟ್ವಿಸ್ಟ್ ಇದ್ದೇ ಇರುತ್ತದೆ. ಹೀಗಾಗಿ ನಿಧಿಗೆ ತಾನು ಪ್ರೀತಿಸಿದ ಹುಡುಗ ಸಿಗೋದು ಡೌಟ್. ಕರ್ಣನನ್ನು ಕಂಡರೆ ನಿತ್ಯಾಗೆ ಇಷ್ಟವಿಲ್ಲ. ಇವರಿಬ್ಬರು ಮದುವೆ ಆಗೋ ಸಂದರ್ಭ ಬಂದರೂ ಬರಬಹುದು. ಆಮೇಲೆ ಕರ್ಣನ ಮೇಲೆ ನಿತ್ಯಾಗೆ ಲವ್ ಆಗಲೂಬಹುದು.