ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ರೂ ಅವ್ರ ವಿಡಿಯೋಗಳು ಹೊರಗೆ ವೈರಲ್ ಆಗ್ತಿವೆ. ರಕ್ಷಿತಾ ಶೆಟ್ಟಿ ಬಗ್ಗೆ ಗೊತ್ತಿಲ್ಲದ ವೀಕ್ಷಕರು ಇನ್ಸ್ಟಾ ಸರ್ಚ್ ಮಾಡೋಕೆ ಶುರು ಮಾಡಿದ್ದಾರೆ. ಇನ್ನು ಅವ್ರ ಮಾತುಗಳೆಲ್ಲ ಸಾಂಗ್ ಆಗ್ತಿವೆ.
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12)ರ ಸ್ಪರ್ಧಿ ರಕ್ಷಿತಾ ಶೆಟ್ಟಿ (Rakshita Shetty), ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಶೋ ಶುರುವಾದ ಮೊದಲ ದಿನವೇ ಮನೆಯಿಂದ ಹೊರ ಹೋಗಿದ್ದ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ ಸೇರಿದ್ರು. ವೀಕೆಂಡ್ ನಲ್ಲಿ ಹೊರಗೆ ಬಂದ ರಕ್ಷಿತಾ, ಬಾಂಬ್ ನಂತೆ ಸಿಡಿಯುತ್ತಿದ್ದಾರೆ. ರಾಕ್ಷಸ ಸುಧಿ ಸೇರಿದಂತೆ ಯಾರನ್ನೂ ರಕ್ಷಿತಾ ಶೆಟ್ಟಿ ಬಿಡ್ತಿಲ್ಲ. ಅಶ್ವಿನಿಗೆ ಸ್ವಲ್ಪ ಹತ್ತಿರ ಆಗಿರೋ ರಕ್ಷಿತಾ ಶೆಟ್ಟಿ, ಸೀಕ್ರೆಟ್ ರೂಮ್ ಸೇರ್ತಿದ್ದಂತೆ ಫ್ಯಾನ್ಸ್ ಅವರನ್ನು ಮಿಸ್ ಮಾಡ್ಕೊಂಡಿದ್ರು. ರಕ್ಷಿತಾ ವಾಪಸ್ ಬರ್ಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಈಗ ರಕ್ಷಿತಾ ವಾಪಸ್ ಆಗ್ತಿದ್ದಂತೆ ಮನೆಯವರೆಲ್ಲ ಹೊರಗೆ ಹೋಗಿದ್ರು. ಇದನ್ನು ನೋಡಿದ ವೀಕ್ಷಕರು, ರಕ್ಷಿತಾ ಶೆಟ್ಟಿ ಕಾಲಿಟ್ಟ ಗಳಿಗೆ ಚೆನ್ನಾಗಿಲ್ಲ ಅಂತ ಕಮೆಂಟ್ ಮಾಡಿದ್ದೇ ಮಾಡಿದ್ದು. ಅದ್ಯಾವುದೂ ಗೊತ್ತಿಲ್ಲದ ರಕ್ಷಿತಾ, ಬಿಗ್ ಬಾಸ್ ಮನೆಯಲ್ಲಿ ಸದ್ಯ ಎಲ್ಲರ ಕಣ್ಣಿಗೆ ಕಾಣಿಸಿಕೊಳ್ತಿದ್ದಾರೆ. ಅಡುಗೆಗೆ ಟೀ ಪುಡಿ ಸೇರಿಸಿದ ವಿಷ್ಯಕ್ಕೆ ದೊಡ್ಡ ರಂಪಾಟವೇ ನಡೆದಿದೆ. ಬಿಗ್ ಬಾಸ್ ಮನೆಯ ಪುಟ್ಟಿ ಕಣ್ಣೀರಿಟ್ಟಿದ್ದೂ ಆಗಿದೆ. ರಕ್ಷಿತಾ ಹವಾ ಬರೀ ಒಳಗೆ ಮಾತ್ರವಲ್ಲ ಹೊರಗೂ ಮುಂದುವರೆದಿದೆ.
ರಕ್ಷಿತಾ ಶೆಟ್ಟಿ ರಸಗುಲ್ಲಾ ಸಾಂಗ್ ವೈರಲ್ :
ರಕ್ಷಿತಾ ಶೆಟ್ಟಿ, ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿಗೆ ಬಂದವರು. ಒಂದಷ್ಟು ದಿನ ಮುಂಬೈ, ಒಂದಷ್ಟು ದಿನ ಅಜ್ಜಿ ಮನೆ ಉಡುಪಿಯಲ್ಲಿರುವ ಅವರು, ಹಳ್ಳಿ ಸ್ಟೈಲ್ ನಲ್ಲಿ ಅಡುಗೆ ಮಾಡೋದ್ರಲ್ಲಿ ಫೇಮಸ್. ಅವ್ರ ಅಡುಗೆಗಿಂತ ಅವ್ರ ಮಾತು, ಆಕ್ಟಿಂಗ್ ನೋಡೋ ವೀಕ್ಷಕರ ಸಂಖ್ಯೆಯೇ ಹೆಚ್ಚು. ರಕ್ಷಿತಾ ಪೋಸ್ಟ್ ಮಾಡಿರುವ ವಿಡಿಯೋ ಪ್ರಕಾರ ಅವರು ಪ್ರತಿ ಬಾರಿ ಮುಂಬೈನಿಂದ ಬರ್ತಾ ಒಂದಿಷ್ಟು ಆಹಾರವನ್ನು ಅಜ್ಜಿ ಮನೆಗೆ ತರ್ತಾರೆ. ಅದ್ರಲ್ಲಿ ರಸಗುಲ್ಲಾ ಕೂಡ ಸೇರಿದೆ. ರಕ್ಷಿತಾ ಮನೆಯಲ್ಲಿ ರಸಗುಲ್ಲಾ ಇದ್ದೇ ಇರುತ್ತೆ. ರಕ್ಷಿತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ರಸಗುಲ್ಲಾ ತಿನ್ನುವ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಬೇರೆ ಬೇರೆ ಬ್ರ್ಯಾಂಡ್ ರಸಗುಲ್ಲಾ ತಿನ್ನುವಾಗ ರಕ್ಷಿತಾ ಮಾಡುವ ಕಮೆಂಟ್, ರಿಯಾಕ್ಷನ್ ಭಿನ್ನವಾಗಿರುತ್ತೆ. ಈಗ ರಕ್ಷಿತಾ ರಸಗುಲ್ಲಾ ತಿನ್ನುವಾಗ ಮಾಡಿದ ಸೌಂಡ್ ಬಳಸಿಕೊಂಡು ಸಾಂಗ್ ಮಾಡಲಾಗಿದೆ.
ಅಸುರನ ಹುಚ್ಚು ಬಿಡಿಸಿದ ಬಿಗ್ ಮನೆಯ ಪುಟ್ಟಿ: ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ
Todays beats ಹೆಸರಿನ ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಖಾತೆಯಲ್ಲಿ ರಕ್ಷಿತಾ ರಸಗುಲ್ಲಾ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇನ್ಸ್ಟಾನ್ ಫೆರ್ನಾಂಡಿಸ್, ವಿಡಿಯೋಕ್ಕೆ ಬೀಟ್ಸ್ ನೀಡಿ ಅದನ್ನು ಸಾಂಗ್ ಮಾಡ್ತಾರೆ. 2024ರಲ್ಲಿ ರಕ್ಷಿತಾ ಶೆಟ್ಟಿ ಒಂದು ವಿಡಿಯೋ ಪೋಸ್ಟ್ ಮಾಡಿದ್ರು. ಆ ವಿಡಿಯೋದಲ್ಲಿ ರಕ್ಷಿತಾ ರಸಗುಲ್ಲಾ ಕೈನಲ್ಲಿ ಹಿಡಿದು, ರಸಗುಲ್ಲಾ ನೋಡಿ ಎಮೋಷನಲ್ ಆದೆ ಅಂತಾರೆ. ಅದೇ ವಿಡಿಯೋದ ಡೈಲಾಗ್ ಸಾಂಗ್ ಮಾಡಿದ್ದಾರೆ ಇನ್ಸ್ಟಾನ್ ಫೆರ್ನಾಂಡಿಸ್. ಅವ್ರ ಈ ವಿಡಿಯೋ ವೈರಲ್ ಆಗಿದೆ. ಜನರು ಇನ್ಸ್ಟಾನ್ ಫೆರ್ನಾಂಡಿಸ್ ಕ್ರಿಯೇಟಿವಿಟಿ ಮೆಚ್ಚಿಕೊಂಡಿದ್ದಾರೆ.
ಕಾಂತಾರ ಚಿತ್ರ ನೋಡಿ ಥಿಯೇಟರ್ನಲ್ಲಿ ಹುಚ್ಚಾಟ: ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ ಎಂದ ದೈವ!
ಒಂದೇ ದಿನದಲ್ಲಿ ಅನೇಕ ಕಂಟೆಂಟ್ ಕ್ರಿಯೇಟರ್ಸ್ ಈ ಸಾಂಗ್ ಬಳಸಿಕೊಂಡು ವಿಡಿಯೋ ಮಾಡ್ತಿದ್ದಾರೆ. ರಕ್ಷಿತಾ ಶೆಟ್ಟಿ ರಸಗುಲ್ಲಾ ಸಾಂಗ್ ಈಗ ಟ್ರೆಂಡ್ ಆಗ್ತಿದೆ. ಬಿಗ್ ಬಾಸ್ ಮನೆಯೊಳಗಿರುವ ರಕ್ಷಿತಾ, Rakshita Talks ಯೂಟ್ಯೂಬ್ ಹಾಗೂ ಇನ್ಸ್ಟಾ ಖಾತೆ ಹೊಂದಿದ್ದು, ಯೂಟ್ಯೂಬ್ ನಲ್ಲಿ 262K ಸಬ್ಸ್ಕ್ರೈಬರ್ ಹಾಗೂ ಇನ್ಸ್ಟಾದಲ್ಲಿ 382K ಫಾಲೋವರ್ಸ್ ಹೊಂದಿದ್ದಾರೆ. ಮೊದಲ ದಿನ ಇವರ್ಯಾರು ಅಂದ್ಕೊಂಡಿದ್ದ ಸ್ಪರ್ಧಿಗಳಿಗೆ ಈಗ ರಕ್ಷಿತಾ ಬೆವರಿಳಿಸ್ತಿದ್ದಾರೆ.
