ಚಾಮರಾಜನಗರ ಜಿಲ್ಲೆಯ ಎಂಟಳ್ಳಿ ಗ್ರಾಮದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬಂಡಹಳ್ಳಿ ದೊಡ್ಡಮಠದಲ್ಲಿ ನಡೆಯಲಿದೆ.

ಚಾಮರಾಜನಗರ (ಸೆ.15): ಚಾಮರಾಜನಗರ ಜಿಲ್ಲೆಯ ಎಂಟಳ್ಳಿ ಗ್ರಾಮದ ಬಂಡಹಳ್ಳಿ ದೊಡ್ಡಮಠದ ಪೀಠಾಧಿಪತಿ ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ (64) ಅವರು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಕಳೆದ ರಾತ್ರಿ ಎದೆನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಯವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಈ ದುಃಖದ ಸುದ್ದಿ ಜಿಲ್ಲೆಯಾದ್ಯಂತ ಭಕ್ತರಲ್ಲಿ ಆಘಾತ ಮೂಡಿಸಿದೆ. ಶ್ರೀ ಪ್ರಭುದೇವ ಸ್ವಾಮೀಜಿಯವರು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ಅಪಾರ ಭಕ್ತರನ್ನ ಹೊಂದಿದ್ದರು. ಇದೀಗ ಅವರು ದಿಡೀರ ಹೃದಯಾಘಾತದಿಂದ ಲಿಂಗೈಕ್ಯರಾಗಿರುವುದು ಭಕ್ತರು ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು!

ಇಂದು ಮಧ್ಯಾಹ್ನ ಅಂತ್ಯಕ್ರಿಯೆ:

ಶ್ರೀ ಪ್ರಭುದೇವ ಸ್ವಾಮೀಜಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬಂಡಹಳ್ಳಿ ದೊಡ್ಡಮಠದಲ್ಲಿ ನಡೆಯಲಿದೆ. ಸ್ಥಳೀಯ ಭಕ್ತರು ಮತ್ತು ಗಣ್ಯರು ಸ್ವಾಮೀಜಿಯವರ ಅಂತಿಮ ದರ್ಶನ ಪಡೆಯಲು ಮಠಕ್ಕೆ ಆಗಮಿಸುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಳ ಆತಂಕ:

ಕರ್ನಾಟಕದಲ್ಲಿ ಕೋವಿಡ್ ನಂತರ ಹೃದಯಾಘಾತದ ಸಂಖ್ತೆ ಏರಿಕೆಯಾಗಿದ್ದು, ಜೀವನಶೈಲಿ ಬದಲಾವಣೆಗಳು ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ತಂಬಾಕು, ಮದ್ಯಪಾನ ಒತ್ತಡ ಆಹಾರಾಭ್ಯಾಸಗಳು ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗಿವೆ. ಆರೋಗ್ಯಕರ ಜೀವನಶೈಲಿ, ನಿಯಮಿತವಾಗಿ ಹೃದಯ ತಪಾಸಣೆ ಮೂಲಕ ಹೃದಯಾಘಾತವನ್ನು ತಪ್ಪಿಸಬಹುದಾಗಿದೆ.