Samyuktha Hegde on New Reality Show ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ಅವರು 'ರಿಯಾಲಿಟಿ ರಾಣೀಸ್ ಆಫ್ ಜಂಗಲ್' ಎಂಬ ಹೊಸ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಈ ಶೋನಲ್ಲಿ ಪ್ರಾಣಿಗಳ ಹಸಿ ಕಣ್ಣುಗಳನ್ನು ತಿನ್ನುವ ವಿವಾದಾತ್ಮಕ ಟಾಸ್ಕ್ ನೀಡಲಾಗಿದೆ.
- Home
- News
- State
- Karnataka News Live: ಹೊಸ ರಿಯಾಲಿಟಿ ಶೋನಲ್ಲಿ ಹಸಿ ಕಣ್ಣನ್ನು ಗಬಗಬನೆ ತಿಂದ ಸಂಯುಕ್ತಾ ಹೆಗ್ಡೆ, ಪ್ರಾಣಿಗಳ ಕಣ್ಣು ನೋಡಿ ವಾಂತಿ ಮಾಡಿಕೊಂಡ ಸ್ಪರ್ಧಿಗಳು!
Karnataka News Live: ಹೊಸ ರಿಯಾಲಿಟಿ ಶೋನಲ್ಲಿ ಹಸಿ ಕಣ್ಣನ್ನು ಗಬಗಬನೆ ತಿಂದ ಸಂಯುಕ್ತಾ ಹೆಗ್ಡೆ, ಪ್ರಾಣಿಗಳ ಕಣ್ಣು ನೋಡಿ ವಾಂತಿ ಮಾಡಿಕೊಂಡ ಸ್ಪರ್ಧಿಗಳು!

ದಾವಣಗೆರೆ : ಉತ್ತರ ಪ್ರದೇಶದ ಬರೇಲಿಯಲ್ಲಿ ಆರಂಭವಾದ ‘ಐ ಲವ್ ಮೊಹಮ್ಮದ್’ ಭಿತ್ತಿಪತ್ರ ವಿವಾದವು ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಬಳಿಕ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ದಾವಣಗೆರೆಯಲ್ಲಿ ಇದೇ ಪೋಸ್ಟರ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಿಗುವಿನ ಸ್ಥಿತಿ ಇದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿ ಭಿತ್ತಿ ಪತ್ರ ಹಾಕಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಈ ವೇಳೆ, ಒಂದು ಗುಂಪು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಲಾಗಿದೆ.
Karnataka News Live 25th September 2025 ಹೊಸ ರಿಯಾಲಿಟಿ ಶೋನಲ್ಲಿ ಹಸಿ ಕಣ್ಣನ್ನು ಗಬಗಬನೆ ತಿಂದ ಸಂಯುಕ್ತಾ ಹೆಗ್ಡೆ, ಪ್ರಾಣಿಗಳ ಕಣ್ಣು ನೋಡಿ ವಾಂತಿ ಮಾಡಿಕೊಂಡ ಸ್ಪರ್ಧಿಗಳು!
Karnataka News Live 25th September 2025 'ಒಬ್ಬಳು ಮೈನರ್, ಮತ್ತೆಲ್ಲಾ ಆಂಟಿಯ ಜೊತೆಗಿರುವ ವಿಡಿಯೋ..' ಕ್ರಿಕೆಟ್ ಕೋಚ್ ಮ್ಯಾಥ್ಯೂ ಕಾಮ ಪುರಾಣ ಬಿಚ್ಚಿಟ್ಟ ಮಹಿಳೆ!
Bengaluru Cricket Coach explicit videos Scandal ಪ್ರಜ್ವಲ್ ರೇವಣ್ಣ ಮಾದರಿಯಲ್ಲಿ ಸಾವಿರಾರು ಮಹಿಳೆಯರಿಗೆ ಮೋಸ ಮಾಡಿದ ಆರೋಪ ಎದುರಿಸುತ್ತಿರುವ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಮ್ಯಾಥ್ಯೂನ ಕಾಮಕಾಂಡವನ್ನು ಸಂತ್ರಸ್ತೆಯೊಬ್ಬರು ಬಯಲು ಮಾಡಿದ್ದಾರೆ..
Karnataka News Live 25th September 2025 ಗಣೇಶ ಹಬ್ಬಕ್ಕೆ ಒಂದು ಮೈಕ್ ಕಟ್ಟುವುದಕ್ಕೂ ಅವಕಾಶವಿಲ್ಲವೆಂದರೆ ಏನರ್ಥ? - ಪ್ರತಾಪ್ ಸಿಂಹ
ದಾವಣಗೆರೆ ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಇಂದಿರಾ ಗಾಂಧಿ ಮನಸ್ಥಿತಿಯಂತೆ ಡಿ.ಜೆ. ಸೌಂಡ್ ಸಿಸ್ಟಂ ಬಳಕೆಗೆ ನಿರ್ಬಂಧ ಹೇರಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
Karnataka News Live 25th September 2025 ಬಂಗಾಳಿ ಸಮುದಾಯದ ಸಿಂಧನೂರು ದಸರಾ ಉತ್ಸವ - ಕನ್ನಡ-ಬಂಗಾಳಿ ಸೌಹಾರ್ದಕ್ಕೆ ಸೇತುವೆ
ಜಿಲ್ಲೆಯ ಸಿಂಧನೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ತುಂಗಭದ್ರೆಗೆ ಅಂಬಾ ಆರತಿ ಮುಖಾಂತರ ಕಾರ್ಯಕ್ರಮಗಳು ಶುರುವಾಗಿದ್ದು, ಸಿಂಧನೂರು ದಸರಾ ಬಂಗಾಳಿ ಕ್ಯಾಂಪ್ ನಲ್ಲಿ ನಡೆಯಿತು. ಉತ್ಸವವು ಕನ್ನಡ ಭಾಷೆ-ಬಂಗಾಲಿ ಭಾಷೆಗೆ ಸೇತುವೆಯಾದ ಸಂದೇಶ ಸಾರಿತು.
Karnataka News Live 25th September 2025 ನಡುರಸ್ತೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿ, ಬೂಟ್ ಕಾಲಿನಲ್ಲಿ ಒದ್ದ ಬಟ್ಟೆ ಅಂಗಡಿ ಮಾಲೀಕ!
ನಡುರಸ್ತೆಯಲ್ಲೇ ಮಹಿಳೆಗೆ ಮನಬಂದಂತೆ ಥಳಿಸಿ ಬೂಟ್ ಕಾಲಿನಲ್ಲಿ ಒದ್ದು ವಿಕೃತಿ ಮೆರೆದ ಅಮಾನುಷ ಘಟನೆ ನಗರದ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಮಹಿಳೆಯು ನೋವಿನಿಂದ ಅಂಗಲಾಚಿದ್ರು, ಪಾಪಿ ಮಾಲೀಕ ಬಿಡದೇ ಥಳಿಸಿದ್ದಾನೆ.
Karnataka News Live 25th September 2025 ಹಿಂಸೆಯತ್ತ ತಿರುಗಿದ ವಾಂಗ್‌ಚುಕ್ ಸತ್ಯಾಗ್ರಹ, ತ್ರೀ ಈಡಿಯಟ್ಸ್ ಚಿತ್ರದಲ್ಲಿ ಅಮೀರ್ ಖಾನ್ ಪಾತ್ರಕ್ಕೆ ಸ್ಪೂರ್ತಿಯಾದ ವ್ಯಕ್ತಿಯೇ ಲಡಾಖ್ ಗಲಭೆಗೆ ಕಾರಣ?
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವು ಹಿಂಸಾಚಾರಕ್ಕೆ ತಿರುಗಿದೆ. ಲೇಹ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ.
Karnataka News Live 25th September 2025 'ಪುತ್ರರು ಅಂತ್ಯಕ್ರಿಯೆ ಮಾಡುವಂತಿಲ್ಲ, ನನ್ನ ಮಗಳಂತಿರುವ ಸಹನಾಗೆ ಅವಕಾಶ ನೀಡಿ..' ಸಾವಿಗೂ ಮುನ್ನ ವಿಲ್ ಬರೆದಿರುವ ಎಸ್‌ಎಲ್ ಭೈರಪ್ಪ!
SL Bhyrappas Will Goes Viral ಸಾಹಿತಿ ಎಸ್.ಎಲ್. ಭೈರಪ್ಪ ಅವರು ಬರೆದಿದ್ದಾರೆ ಎನ್ನಲಾದ ವಿಲ್ ವೈರಲ್ ಆಗಿದ್ದು, ತಮ್ಮ ಅಂತ್ಯಸಂಸ್ಕಾರವನ್ನು ಮಕ್ಕಳು ಮಾಡಬಾರದೆಂದು ಉಲ್ಲೇಖಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿದೆ.
Karnataka News Live 25th September 2025 ದಸರಾ ಚಿತ್ರೋತ್ಸವ.. ಸಿನಿಮಾ ಜಾತಿ, ಧರ್ಮಗಳಿಂದ ಮುಕ್ತವಾಗಲಿ - ಸಚಿವ ಮಧು ಬಂಗಾರಪ್ಪ
ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ಹರಡಿಕೊಂಡಿದೆ. ಇಂತಹ ಕಳಂಕಗಳಿಂದ ಚಿತ್ರರಂಗ ಹೊರಬಂದು ಮನೋರಂಜನೆಯ ಜತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
Karnataka News Live 25th September 2025 ಗೆಳತಿಗಾಗಿ ಅಳುವ ಹುಡುಗರೇ, ನೀವು ಆತನನ್ನು ಫಾಲೋ ಮಾಡಿ; ಆಮೀರ್ ಖಾನ್ ಕಾಲೆಳೆದ ಸಲ್ಮಾನ್ ಖಾನ್!
ಸಲ್ಮಾನ್ ಅವರ ಈ ತಮಾಷೆಯು ಅಮೀರ್ ಅವರ ಇತ್ತೀಚಿನ ಖಾಸಗಿ ಜೀವನ ಮತ್ತು ಪ್ರಣಯದ ಸುತ್ತ ಸುತ್ತುತ್ತಿರುವ ಸುದ್ದಿಗಳಿಗೆ ಸ್ಪಷ್ಟವಾದ ಒಪ್ಪಿಗೆಯಾಗಿತ್ತು. ಕಿರಣ್ ರಾವ್ ಅವರಿಂದ ಬೇರೆಯಾದ ಹಲವು ವರ್ಷಗಳ ನಂತರ, ಅಮೀರ್ ಇತ್ತೀಚೆಗೆ ಗೌರಿ ಸ್ಪ್ರ್ಯಾಟ್ ಅವರೊಂದಿಗಿನ ತಮ್ಮ ಪ್ರಣಯವನ್ನು ಬಹಿರಂಗಪಡಿಸಿದ್ದಾರೆ.
Karnataka News Live 25th September 2025 ದಸರಾ ಸಂಭ್ರಮದಲ್ಲಿ ಕರಾವಳಿಗೆ ರೈಲ್ವೆ ಇಲಾಖೆಯ ವಿಶೇಷ ಕೊಡುಗೆ, ಟಿಕೆಟ್ ಈಗಲೇ ಬುಕ್ ಮಾಡಿ
Karnataka News Live 25th September 2025 ಪ್ರಚೋದನಕಾರಿ ಹೇಳಿಕೆ.. ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಬೇಡ - ಹೈಕೋರ್ಟ್
ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧಿಸಿದ್ದ ದಾವಣಗೆರೆ ಜಿಲ್ಲಾಡಳಿತದ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.
Karnataka News Live 25th September 2025 ಯಡಿಯೂರಪ್ಪ ಅವಧಿಯ ಅನುದಾನ ಬಳಸಿ - ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?
ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ರು. ಅನುದಾನ ನೀಡಲಾಗಿದ್ದು, ಅಧಿಕಾರಿಗಳ ಜತೆ ಸಾರ್ವಜನಿಕರು ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
Karnataka News Live 25th September 2025 ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ - ಸಚಿವ ಶರಣ್ ಪ್ರಕಾಶ್ ಪಾಟೀಲ್
ರಾಜ್ಯದ ಪ್ರಗತಿಗೆ ಅತ್ಯಂತ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, 2032 ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಹೊಂದಲಾಗಿದ್ದು, ಇದನ್ನು ಸಾಕಾರಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Karnataka News Live 25th September 2025 ವಿಪ್ರೋ ಕ್ಯಾಂಪಸ್‌ಗಿಲ್ಲ ಪ್ರವೇಶ, ರಾಜ್ಯ ಸರ್ಕಾರದ ಮನವಿ ತಿರಸ್ಕರಿಸಿದ ಅಜೀಂ ಪ್ರೇಮ್‌ಜೀ
ಬೆಂಗಳೂರಿನ ಹೊರವರ್ತುಲ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲು, ವಿಪ್ರೋ ಸರ್ಜಾಪುರ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ಅಜೀಂ ಪ್ರೇಮ್‌ಜಿ ತಿರಸ್ಕರಿಸಿದ್ದಾರೆ.
Karnataka News Live 25th September 2025 ಮುಸ್ಲಿಂ, ಕ್ರಿಶ್ಚಿಯನ್, ಜೈನರಿಗೆ ಸಾಲ ಬೇಕೇ? ಈಗಲೇ ಸರ್ಕಾರದ ಯೋಜನೆಗೆ ಅರ್ಜಿ ಹಾಕಿ!
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26ನೇ ಸಾಲಿಗಾಗಿ ವಿವಿಧ ಸಾಲ ಯೋಜನೆಗಳನ್ನು ಪ್ರಕಟಿಸಿದೆ. ಮತೀಯ ಅಲ್ಪಸಂಖ್ಯಾತ ಸಮುದಾಯದವರು ವೃತ್ತಿ ಪ್ರೋತ್ಸಾಹ, ಸ್ವಾವಲಂಭಿ ಸಾರಥಿ, ಶ್ರಮಶಕ್ತಿ, ವ್ಯಾಪಾರ, ಮತ್ತು ವಿದೇಶಿ ಶಿಕ್ಷಣ ಸಾಲಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Karnataka News Live 25th September 2025 ಹಿಂದುಳಿದ ವರ್ಗಗಳಿಗೆ ಸರಿಯಾದ ಮೀಸಲಾತಿ ಸಿಗಬೇಕು - ಮಾಜಿ ಸಿಎಂ ವೀರಪ್ಪ ಮೊಯ್ಲಿ
ಈ ದಿನ ಐತಿಹಾಸಿಕ ಸಭೆ ನಡೆದಿದೆ. ಹಿಂದುಳಿದ ವರ್ಗ ಎಂದು ಗುರುತಿಸಿಕೊಂಡ ಸಚಿವರು, ಶಾಸಕರು ಬಂದಿದ್ದಾರೆ. ಈ ಸಭೆ ಮೊದಲೇ ಆಗಬೇಕಿತ್ತು. ಸಾಮಾಜಿಕ, ಶೈಕ್ಷಣಿಕ ಹಕ್ಕನ್ನ ಕಸಿಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
Karnataka News Live 25th September 2025 'ಏನ್ ಬೇಕಾದ್ರೂ ಏರುಪೇರಾಗತ್ತೆ' ಎನ್ನುತ್ತಲೇ Bigg Boss ಸ್ಪರ್ಧಿಗಳಿಗೆ Tanisha Kuppanda ಕೊಟ್ಟ ಎಚ್ಚರಿಕೆ ನೋಡಿ
ಬಿಗ್ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ, ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಸ್ಪರ್ಧಿಗಳಿಗೆ ಕಿವಿಮಾತು ಹಾಗೂ ಎಚ್ಚರಿಕೆ ಕೊಟ್ಟಿದ್ದಾರೆ. ಇದಾಗಲೇ ಅವರು, ವರ್ತೂರು ಸಂತೋಷ್ ಜೊತೆಗಿನ ಮದುವೆ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Karnataka News Live 25th September 2025 ಮಂಗಳೂರಿನಲ್ಲಿ ಅತಿದೊಡ್ಡ ಟೆಕ್‌ಪಾರ್ಕ್‌ಗೆ ಶೀಘ್ರ ಅನುಮೋದನೆ - ಸಚಿವ ಪ್ರಿಯಾಂಕ್ ಖರ್ಗೆ
ಮಂಗಳೂರಿನಲ್ಲಿ ಅತಿದೊಡ್ಡ ಟೆಕ್ ಪಾರ್ಕ್‌ನ ಪ್ರಸ್ತಾವನೆಯು ಅನುಮೋದನೆಗಾಗಿ ರಾಜ್ಯ ಸಚಿವ ಸಂಪುಟದ ಮುಂದೆ ಬರಲಿದೆ. ಇನ್ನೊಂದು ವಾರದೊಳಗೆ ಇದಕ್ಕೆ ಅನುಮೋದನೆ ನೀಡುವ ಕೆಲಸ ಆಗಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Karnataka News Live 25th September 2025 ಅಸಂಖ್ಯಾತ ಮನೆಗಳಲ್ಲಿ ಜ್ಞಾನದ ಬೆಳಕನ್ನು ಬಿತ್ತಿರಿಸುತ್ತಿವುದು ಶ್ರೀಮಠ - ಗೃಹ ಸಚಿವ ಪರಮೇಶ್ವರ್
ಕಲೆಗೆ ಜಾತಿ ಧರ್ಮದ ಭೇದ ಭಾವವಿಲ್ಲ. ಆದಿಚುಂಚನಗಿರಿ ಮಠವು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಸಂಖ್ಯಾತ ಮನೆಗಳಲ್ಲಿ ಜ್ಞಾನದ ಬೆಳಕನ್ನು ಬಿತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಣ್ಣಿಸಿದರು.
Karnataka News Live 25th September 2025 ಧರ್ಮಸ್ಥಳ ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರ ಮೂಲ ಪತ್ತೆ; ತುಮಕೂರು ಬಾರ್ ಕ್ಯಾಶಿಯರ್ ಸುಳಿವು ಕೊಟ್ಟ ಡಿಎಲ್!
ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ಪತ್ತೆಯಾದ ಅಸ್ಥಿಪಂಜರದ ಬಳಿ ಸಿಕ್ಕ ಚಾಲನ ಪರವಾನಿಗೆಯು, 2013ರಲ್ಲಿ ನಾಪತ್ತೆಯಾಗಿದ್ದ ತುಮಕೂರಿನ ಆದಿಶೇಷ ನಾರಾಯಣ ಎಂಬ ಯುವಕನದ್ದೆಂದು ಶಂಕಿಸಲಾಗಿದೆ. ಈ ಸುಳಿವಿನ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ಆತನ ಕುಟುಂಬವನ್ನು ವಿಚಾರಣೆ ನಡೆಸಿದೆ.