ಬಿಗ್​ಬಾಸ್​ ಮೂಲಕ ಸಕತ್​ ಫೇಮಸ್​​ ಆಗಿರೋ, ಸತ್ಯ ಸೀರಿಯಲ್​ ಸತ್ಯಾ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ಏನದು ನೋಡಿ... 

'ಬಿಗ್ ಬಾಸ್‌' ಕನ್ನಡ ಸೀಸನ್ 11 ಮೂಲಕ ಫೇಮಸ್​ ಆಗಿರೋ ಸತ್ಯ ಸೀರಿಯಲ್​ ರಗಡ್​ ಸತ್ಯಾ ಉರ್ಫ್​ ಗೌತಮಿ ಜಾದವ್​ ಅವರನ್ನು ಸದ್ಯ ಜನರು ಮರೆತಂತಿದೆ. ಸತ್ಯ ಸೀರಿಯಲ್​ ಬಳಿಕ, ಬಿಗ್​ಬಾಸ್​ನಲ್ಲಿ ಫೇಮಸ್​ ಆಗಿದ್ದರೂ, ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಗೌತಮಿ ಜಾದವ್ ಅಷ್ಟೊಂದು ಸುದ್ದಿ ಮಾಡುತ್ತಿರಲಿಲ್ಲ. ಆದರೆ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಭಾರ್ಗವಿ ಎಲ್‌ಎಲ್‌ಬಿ' ಎಂಬ ಧಾರಾವಾಹಿಯಲ್ಲಿ ಗೆಸ್ಟ್​ ಅಪಿಯರೆನ್ಸ್​ ಆಗಿ ಕಾಣಿಸಿಕೊಂಡಿದ್ದ ನಟಿ, ಇದೀಗ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ಕಿರುತೆರೆಯಿಂದ ನಟಿ ಹಿರಿತೆರೆಗೆ ಮತ್ತೆ ಕಾಲಿಟ್ಟಿದ್ದಾರೆ. ಇದಾಗಲೇ ನಟಿ 'ಲೂಟಿ', 'ಆದ್ಯಾ', 'ಕಿನಾರೆ' ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಸಹಜ ನಟನೆಗೆ ಹೆಸರಾದ ಈಕೆಗೆ ಸಿನಿಮಾ ಯಾಕೋ ಕೈ ಹಿಡೀಲಿಲ್ಲ. ಸೀರಿಯಲ್ ಜಗತ್ತು ಕೈ ಬಿಡಲಿಲ್ಲ. ಸತ್ಯಾ ಮೂಲಕ ಸಕತ್​ ಮಿಂಚಿದರು.

ಮತ್ತೆ 'ಮಂಗಳಾಪುರಂ' ಎಂಬ ಸಿನಿಮಾದ ಮೂಲಕ ಹಿರಿತೆರೆಗೆ ಮರಳಿದ್ದಾರೆ. ಅದರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಸುಕನ್ಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಾಗಿದೆ. "ಆಸ್ತಿಕರ ನಾಡಿಗೆ ನಾಸ್ತಿಕ‌ನ ಮಡದಿ ಸುಕನ್ಯಾಳಾಗಿ ಬರುತ್ತಿದ್ದೇನೆ.. ನಿಮ್ಮೆಲ್ಲರ ಪ್ರೋತ್ಸಾಹವಿರಲಿ" ಎಂದು ಪಾತ್ರದ ಪರಿಚಯ ಮಾಡಿಕೊಂಡಿದ್ದಾರೆ ಗೌತಮಿ. ರಂಜಿತ್ ರಾಜ್ ಸುವರ್ಣ ನಿರ್ದೇಶನದಲ್ಲಿ 'ಮಂಗಳಾಪುರಂ' ಸಿನಿಮಾ ಬರುತ್ತಿದ್ದು, 'ಕವಲುದಾರಿ' ಖ್ಯಾತಿಯ ರಿಷಿ ನಾಯಕ ಆಗಿದ್ದಾರೆ. ಜೊತೆಗೆ ನಟ ಕಾಶಿನಾಥ್ ಪುತ್ರ ಅಭಿಮನ್ಯು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

'ಮಂಗಳಾಪುರಂ' ಎಂಬ ಒಂದು ಊರಿನಲ್ಲಿ ನಡೆಯೋ ಕೊ*ಲೆ ಸುತ್ತ ಈ ಚಿತ್ರ ಸುತ್ತುತ್ತದೆ. ಮೂಢನಂಬಿಕೆ, ಪವಾಡ ಮುಂತಾದ ವಿಚಾರಗಳು ಇವೆ ಎನ್ನುವುದು ಫಸ್ಟ್ ಲುಕ್ ರಿಲೀಸ್ ಮಾಡಿದ ಬಳಿಕ ಗೊತ್ತಾಗಿದೆ. ಬೆಂಗಳೂರು ಸೇರಿದಂತೆ ಕಾರ್ಕಳ, ತೀರ್ಥಹಳ್ಳಿ‌, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡುತ್ತಿದೆ. ಈ ಚಿತ್ರಕ್ಕೆ ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿದ್ವಾನ್ ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ‌ ರಾಮ್ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನವಿದೆ.

ಇನ್ನು ನಟಿಯ ರಿಯಲ್​ ಲೈಫ್​ ಕುರಿತು ಹೇಳುವುದಾದರೆ, ಇವರ ಪತಿ ಅಭಿಷೇಕ್​ ಕಾಸರಗೋಡು ಕ್ಯಾಮರಾಮನ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ನಟಿಯಾಗಿದ್ದೆ, ಅವರು ಕ್ಯಾಮೆರಾಮನ್​ ಆಗಿದ್ರು... ಅಲ್ಲಿಂದಲೇ ಶುರುವಾಯ್ತು ನಮ್ಮ ಲವ್​ ಪಯಣ ಎಂದು ಗೌತಮಿ ಹೇಳಿದ್ದರು. ಅಂದಹಾಗೆ, ಇವರ ಲವ್​ ಶುರುವಾಗಿದ್ದು ಕಿನಾರೆ ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ.

View post on Instagram