ತಮ್ಮನಿಗೆ ಅಪ್ಪ ಬೈಯುತ್ತಿದ್ದನ್ನು ಸಹಿಸದ ಅಕ್ಕ, ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದಾಳೆ. ಈ ಮುದ್ದಾದ ಜಗಳದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಕ-ತಮ್ಮನ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಅಣ್ಣ ತಮ್ಮಂದಿರ ಮೇಲೆ ಅಕ್ಕ ತಂಗಿಯರಿಗೆ ಇರುವ ಪ್ರೀತಿಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಜುಟ್ಟು ಜುಟ್ಟು ಹಿಡಿದು ಕಿತ್ತಾಡಿಕೊಂಡರೂ ಸ್ವಲ್ಪ ಸಮಯದಲ್ಲಿ ಮತ್ತೆ ಒಂದಾಗುವ ಈ ಒಡಹುಟ್ಟಿದವರ ಪ್ರೀತಿಯ ಬಗ್ಗೆ ಅನೇಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಅಣ್ಣನಿಗೆ ಕಿರಿಕಿರಿ ಮಾಡಿದರೆ ತಂಗಿಗೆ ಅದೇನೋ ಸಮಾಧಾನ. ತಂಗಿ ಜುಟ್ಟು ಹಿಡಿದು ಎಳೆದಾಡಿ ತಲೆಗೆ ಒಂದು ಕುಟ್ಟಿ ಹಾಕಿದ್ರೆನೇ ಅಣ್ಣನಿಗೆ ಅದೇನೋ ಖುಷಿ. ಹೀಗಿರುವಾಗ ಅಣ್ಣ ತಂಗಿಯ ಸಂಬಂಧವನ್ನು ಅಭಿವ್ಯಕ್ತಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮೊದಲೆಲ್ಲಾ ಬಾಲ್ಯದಲ್ಲಿ ನಾವು ಅಣ್ಣ ತಂಗಿ ಕಿತ್ತಾಟ ನಡೆಸುತ್ತಿದ್ದೇವೆ ಹೊರತು ಪರಸ್ಪರ ಸಹಾಯಕ್ಕೆ ಬರುತ್ತಿದ್ದಿದ್ದು, ಒಗಟ್ಟಾಗಿ ಪೋಷಕರಿಗೆ ತಿರುಗಿನಿಂತ ಪ್ರಕರಣಗಳೇ ಇಲ್ಲ. ಅಪ್ಪ ಅಮ್ಮನ ಕೈಲ್ಲಿ ಜೊತೆಗಿದ್ದ ನಮ್ಮ ಅಣ್ಣ ಅಕ್ಕ ಅಥವಾ ತಂಗಿ ತಮ್ಮನಿಗೆ ಎರಡೇಟು ಬಿದ್ದರೆನೇ ನಮಗೇನೋ ಖುಷಿ. ಅಪ್ಪ ಅಮ್ಮನ ಮುಂದೆ ಅವರನ್ನು ಕಾಪಾಡುವ ಪ್ರಶ್ನೆಯೇ ಇಲ್ಲ. ಅದೇನಿದ್ದರೂ ತುಸು ಬುದ್ಧಿ ಬಂದು ದೊಡ್ಡವರಾದ ಮೇಲೆ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಮದುವೆಯಾಗಿ ಹೋದ ಮೇಲೆಯೇ. ಆದರೆ ಈಗ ಕಾಲ ಬದಲಾಗಿದೆ ನೋಡಿ ಪುಟ್ಟ ಮಕ್ಕಳು ತಮ್ಮ ತಂಗಿಗೂ ತಮ್ಮನಿಗೂ ಪೋಷಕರು ಬೈದರೆ ಇಬ್ಬರು ಒಟ್ಟಾಗಿ ಬಿಡುತ್ತಾರೆ. ಒಂದಾಗಿ ಪೋಷಕರಿಗೆ ಜೋರು ಮಾಡುತ್ತಾರೆ ಅಂತಹ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮನಿಗೆ ಬೈದಿದ್ದಕ್ಕೆ ಅಪ್ಪನ ವಿರುದ್ಧವೇ ತಿರುಗಿ ಬಿದ್ದ ಸೋದರಿ
ವೀಡಿಯೋದಲ್ಲಿ ತಮ್ಮನನ್ನು ಜೋರು ಮಾಡುತ್ತಿರುವ ಅಪ್ಪನ ವಿರುದ್ಧವೇ ಪುಟ್ಟ ಬಾಲಕಿಯೊಬ್ಬಳು ತಿರುಗಿ ಬಿದ್ದಿದ್ದು ಅವರ ವೀಡಿಯೋ ಭಾರಿ ವೈರಲ್ ಆಗಿದೆ. 6 ವರ್ಷದ ಬಾಲಕಿ ಅನನ್ಯಾ ಶರ್ಮಾ ಎಂಬಾಕೆ ತನ್ನ ತಮ್ಮನಿಗೆ ಅಪ್ಪ ಬೈಯುತ್ತಿರುವುದನ್ನು ಸಹಿಸಿಕೊಳ್ಳದೇ ಅಪ್ಪನಿಗೆ ತಿರುಗಿ ಬೈಯುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ಪುಟ್ಟ ಹುಡುಗಿ ತನ್ನ ತಮ್ಮನನ್ನು ಸಮರ್ಥಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಅಕ್ಕ ತಮ್ಮನ ಪ್ರೀತಿಯ ವೀಡಿಯೋ ಭಾರಿ ವೈರಲ್
ಮುಂಬೈ ಮೂಲದ ಈ ಬಾಲಕಿ ತನ್ನ ಕಿರಿಯ ಸೋದರ ಆರವ್‌ಗೆ ಆತನ ತಂದೆ ಬೈದಾಗ ಆಕೆ ಆತನನ್ನು ಸಮರ್ಥಿಕೊಳ್ಳುತ್ತಿದ್ದಾಳೆ. ನಿಮ್ಮದು ಸ್ವಲ್ಪ ಜಾಸ್ತಿ ಆಗ್ತಿಲ್ವಾ ಎಂದು ಆಕೆ ತನ್ನ ತಂದೆಯನ್ನು ಕೇಳಿದ್ದಾರೆ. ಮುಂಬೈನ ಬಂದ್ರಾದಲ್ಲಿ ಜುಲೈ 20 ರಂದು ರೆಕಾರ್ಡ್ ಆದ ವೀಡಿಯೋ ಇದಾಗಿದೆ. ಈಕೆಯ ತಾಯಿ ಪ್ರಿಯಾ ಶರ್ಮಾ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 6 ವರ್ಷದ ಬಾಲಕಿ ಅನನ್ಯಾ ಶರ್ಮಾ, ಅಪ್ಪ ತನ್ನ ತಮ್ಮನಿಗೆ ಬೈತಿದ್ರೆ ಆತನನ್ನು ಈಕೆ ತಬ್ಬಿ ಹಿಡಿದುಕೊಂಡು ಯಾಕೆ ಆತನನ್ನು ಬೈತಿದ್ದೀರಾ ಎಂದು ಪ್ರಶ್ನೆ ಮಾಡ್ತಿದ್ದಾಳೆ. ಹೋಮ್ ವರ್ಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಪ ತನ್ನ ಮಗನಿಗೆ ಬೈಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ನೆಟ್ಟಿಗರಿಂದಲೂ ವೀಡಿಯೋಗೆ ಭಾರಿ ಮೆಚ್ಚುಗೆ
ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ಈ ಪ್ರೀತಿ ಯೌವ್ವನದಲ್ಲೂ ಹೀಗೆ ಇರಬೇಕು ಎಂದು ನಾನು ಬಯಸುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರೀತಿ ಎಂದರೆ ಇದು, ಇವರ ಪ್ರೀತಿ ಹೀಗೆಯೇ ಇರಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಿರಿಯ ಸೋದರಿ ಎಂದರೆ ಸೋದರನಿಗೆ 2ನೇ ತಾಯಿ ಇದ್ದಂತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಬೇರೆಯವರ ಮಕ್ಕಳ ಬಾವಿಗೆ ತಳ್ಳಿ ಐಷಾರಾಮಿ ಮನೆ ಕಟ್ಕೊಂಡಿದ್ದ ಡ್ರಗ್ ಪೆಡ್ಲರ್ ಮನೆ ಧ್ವಂಸ
ಇದನ್ನೂ ಓದಿ: ಚಿಕನ್‌ಗಾಗಿ ಕ್ರೂಸ್ ಶಿಪ್‌ನಲ್ಲಿ ಮುಖ ಮೂತಿ ಒಡೆಯೋ ತರ ಬಡಿದಾಡ್ಕೊಂಡ ಜನ
