Food culture:ಮ್ಯಾನೇಜ್‌ಮೆಂಟ್ ಕೋಚ್ ಒಬ್ಬರು ವಿದ್ಯಾರ್ಥಿಗಳಿಗೆ ಸ್ಪೂನ್ ಮತ್ತು ಫೋರ್ಕ್ ಬಳಸಿ ಸಮೋಸಾ ತಿನ್ನುವುದು ಹೇಗೆಂದು ಕಲಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಮಾಡುವವರಿಗೆ ಅಥವಾ ಅತಿಥ್ಯ ವಲಯದಲ್ಲಿ ಕೆಲಸ ಮಾಡುವವರಿಗೆ ಆಹಾರ ಶಿಷ್ಚಾಚಾರ, ಟೇಬಲ್‌ ಮ್ಯಾನರ್ಸ್‌ ಸೇರಿದಂತೆ ಅತಿಥಿಗಳ ಜೊತೆ ಹೇಗೆ ವರ್ತಿಸಬೇಕು ಎಂಬ ಶಿಷ್ಟಾಚಾರಗಳ ಬಗ್ಗೆ ಕಲಿಸಿ ಕೊಡಲಾಗುತ್ತದೆ. ಈ ಅತಿಥ್ಯ ಲೋಕವೇ ಒಂದು ವಿಶಾಲ ಹಾಗೂ ವೈವಿಧ್ಯಮಯ ಪ್ರಪಂಚವಾಗಿರುವುದರಿಂದ ಇಲ್ಲಿ ಹಲವು ವಿಚಾರಗಳನ್ನು ಅಲ್ಲಿ ಇರುವ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಅದೇ ರೀತಿ ಇಲ್ಲೊಬ್ಬರು ಕೋಚ್ ತಮ್ಮ ವಿದ್ಯಾರ್ಥಿಗಳಿಗೆ ಸಮೋಸಾವನ್ನು ಸ್ಪೂನ್ ಮೂಲಕ ತಿನ್ನುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ.

ಸಮೋಸಾ ಸ್ಪೂನ್‌ನಲ್ಲಿ ತಿನ್ನುವುದು ಹೇಗೆ ಎಂದು ತೋರಿಸಿಕೊಟ್ಟ ಕೋಚ್‌

ಭಾರತದವರು ಬಹುತೇಕ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಾ ಅದರತ್ತ ವಾಲುವುದು ಜಾಸ್ತಿ. ಈ ಹೊಟೇಲ್ ಸಂಸ್ಕೃತಿ ಆಚಾರ ವಿಚಾರಗಳಲ್ಲೂ ನಾವು ಅದನ್ನು ಅಗಾಧವಾಗಿ ಕಾಣಬಹುದು. ಇದಕ್ಕೊಂದು ಉತ್ತಮ ಉದಾಹರಣೆ ಈ ವೀಡಿಯೋ. ವಿದೇಶಿಯರು ಎಲ್ಲವನ್ನೂ ಚಮಚ ಅಥವಾ ಮುಳ್ಳು ಚಮಚ(ಪೋರ್ಕ್) ಬಳಸಿ ಸೇವಿಸುತ್ತಾರೆ. ಆದರೆ ಅವರ ಆಹಾರ ಸಂಸ್ಕೃತಿಗೆ ಅದು ಸೂಟ್ ಆಗುತ್ತದೆ. ಆದರೆ ಭಾರತೀಯರ ಆಹಾರ ಶೈಲಿ ವಿಭಿನ್ನ ಹಾಗೂ ವೈವಿಧ್ಯಮಯವಾಗಿದ್ದು, ಭಾರತೀಯ ಆಹಾರಗಳೆಲ್ಲವನ್ನೂ ವಿದೇಶದ ಆಹಾರಗಳಂತೆ ಚಮಚ ಬಳಸಿ ತಿನ್ನಲಾಗದು. ಬಹುತೇಕ ಭಾರತೀಯರು ಆಹಾರ ಸೇವಿಸುವಾಗ ಕೈಯನ್ನೇ ಬಳಸುತ್ತಾರೆ. ಕೈಯಲ್ಲಿ ತಿಂದರೇನೆ ಬಹುತೇಕರಿಗೆ ಆರಾಮ. ಕೆಲವು ಹೈಕ್ಲಾಸ್ ಸೊಸೈಟಿಗಳ ಜನರು ಮಾತ್ರ ಪ್ರತಿಯೊಂದಕ್ಕೂ ಸ್ಪೂನ್ ಅಥವಾ ಚಮಚ ಬಳಸುತ್ತಾರೆ. ಆದರೂ ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇಲ್ಲಿ ಸಮೋಸಾವನ್ನು ಕೂಡ ಸ್ಪೂನ್ ಬಳಸಿ ತಿನ್ನುವುದು ಹೇಗೆ ಎಂದು ಹೇಳಿ ಕೊಡುತ್ತಿದ್ದು, ಇದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಆಹಾರ ಶಿಷ್ಟಾಚಾರದ ಕೋಚ್ ವೀಡಿಯೋ ಭಾರಿ ವೈರಲ್

ನಾಗ್ಪುರ ಮೂಲದ ಈ ಆಹಾರ ಸಂಸ್ಕೃತಿ ಶಿಷ್ಟಾಚಾರ ಕಲಿಸುವ ಕೋಚ್‌ ಒಬ್ಬರು ಸಮೋಸಾವನ್ನು ಸ್ಪೂನ್‌ನಲ್ಲಿ ಹೇಗೆ ತಿನ್ನುವುದು ಎಂದು ಹೇಳಿಕೊಡುವ ಮೂಲಕ ಟ್ರೋಲ್ ಆಗಿದ್ದಾರೆ. Western Wings Spoken English ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಕೋಚ್ ತಮ್ಮ ವಿದ್ಯಾರ್ಥಿಗಳಿಗೆ ಸಮೋಸಾವನ್ನು ಪೋರ್ಕ್‌ನಿಂದ ಕತ್ತರಿಸಿ ತಿನ್ನುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ.

ವೆಸ್ಟರ್ನ್‌ ವಿಂಗ್ಸ್ ಸ್ಪೋಕನ್ ಇಂಗ್ಲೀಷ್ & ಪರ್ಸನಾಲಿಟಿ ಡೆವಲಪ್‌ಮೆಂಟ್ ಅಕಾಡೆಮಿಯ ಫೌಂಡರ್ ಆಗಿರುವ ಅಮೋಲ್ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನಂತರ ಟ್ವಿಟ್ಟರ್‌ನ್ಲಿ ಪೋಸ್ಟ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ಅವರಿಗೆ ಭಾರತೀಯ ಬೀದಿ ಬದಿ ಆಹಾರವನ್ನು ಪಾಶ್ಚಿಮಾತ್ಯಕರಣಗೊಳಿಸುವ ಮೂಲಕ ಇವರು ಆಹಾರವನ್ನು ಸೇವಿಸುವ ಖುಷಿಯನ್ನು ಕೊಲ್ಲುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಅಮೋಲ್ ಅವರು ಕ್ಲಾಸ್‌ರೂಮ್‌ನಲ್ಲಿ ವಿದ್ಯಾರ್ಥಿಗಳಿಗೆ ಸಮೋಸಾವನ್ನು ಕತ್ತರಿಸಿ ಸ್ಪೂನ್ ಮೂಲಕ ತಿನ್ನೋದು ಹೇಗೆ ಎಂದು ಹೇಳಿ ಕೊಡ್ತಿದ್ದಾರೆ. ಆದರೆ ಇವರ ವೀಡಿಯೋ ನೋಡಿದ ಬಹುತೇಕರು ಆಕ್ರೋಶ ಹೊರ ಹಾಕಿದ್ದಾರೆ. ಇದೊಂದು ಅನಗತ್ಯ ಹಾಗೂ ಆಡಂಬರದ ಡೆಮೋ ಎಂದು ಕಾಮೆಂಟ್ ಮಾಡಿದ್ದಾರೆ.

ನಿಮಗೆ ಈ ರೀತಿ ಸಮೋಸಾ ತಿನ್ನಲು ಹೇಳುತ್ತಾರೆ ಎಂದರೆ ನೀವು ತಪ್ಪಾದ ಕೋಣೆಯಲ್ಲಿ ನಕಲಿ ವ್ಯಕ್ತಿಗಳ ಜೊತೆ ಇದ್ದೀರಾ ಎಂದು ಅರ್ಥ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಲ್ಲಿಂದ ಓಡಿ ಹೋಗಿ ಪಾರಾಗುವಂತೆ ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ದೇಸಿ ಜನ ಹೇಗೆ ಸಮೋಸ ತಿನ್ತಾರೆ ಎಂದು ಕೆಲವರು ಮೀಮ್ಸ್ ಕ್ರಿಯೇಟ್ ಮಾಡಿದ್ದಾರೆ. ಹೀಗೆ ದೇಸೀಯ ಆಹಾರವನ್ನು ಪಾಶ್ಚಿಮಾತೀಕರಣಗೊಳಿಸುವುದು ಇದೇ ಮೊದಲಲ್ಲ, ಕೆಲ ಸಮಯಕ್ಕೂ ಮೊದಲು ದೆಹಲಿಯ ಈ ಆಹಾರ ಶಿಷ್ಟಾಚಾರ ಕಲಿಸುವ ಕೋಚ್ ಪಾನಿಪುರಿಯನ್ನು ಸ್ಪೂನ್‌ನಲ್ಲಿ ತಿನ್ನುವುದು ಹೇಗೆ ಎಂದು ಹೇಳುವ ಮೂಲಕ ಸಖತ್ ಟ್ರೋಲ್ ಆಗಿದ್ದರು.

ಇದನ್ನೂ ಓದಿ: ಮಸೀದಿಯೊಳಗೆ ಚಪ್ಪಲಿ ಹಾಕಿದ್ರಾ ಸೋನಾಕ್ಷಿ: ಟ್ರೋಲರ್ಸ್‌ಗೆ ಹೇಳಿದ್ದೇನು?

ಇದನ್ನೂ ಓದಿ: ಪತಿದೇವನ ಫೋಟೋ ರಿವೀಲ್ ಮಾಡಿದ ಪದ್ಮಾವತಿ..!

View post on Instagram