ಮಸೀದಿಯೊಳಗೆ ಚಪ್ಪಲಿ ಹಾಕಿದ್ರಾ ಸೋನಾಕ್ಷಿ: ಟ್ರೋಲರ್ಸ್‌ಗೆ ಹೇಳಿದ್ದೇನು?
Sonakshi Sinha Zaheer Iqbal: ಜಹೀರ್ ಇಕ್ಬಾಲ್ ಅವರನ್ನು ಪ್ರೀತಿಸಿ ಮದ್ವೆಯಾದಾಗಿನಿಂದಲೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಗಾಗ ಟ್ರೋಲ್ ಆಗ್ತಾನೆ ಇರ್ತಾರೆ. ಈಗ ಅವರು ಮತ್ತೊಂದು ಹೊಸ ಕಾರಣಕ್ಕೆ ಟ್ರೋಲ್ ಆಗಿದ್ದು, ಟ್ರೋಲರ್ಸ್‌ಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೋಲ್ ಆದ ಸೋನಾಕ್ಷಿ
ಜಹೀರ್ ಇಕ್ಬಾಲ್ ಅವರನ್ನು ಪ್ರೀತಿಸಿ ಮದ್ವೆಯಾದಾಗಿನಿಂದಲೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಆಗಾಗ ಟ್ರೋಲ್ ಆಗ್ತಾನೆ ಇರ್ತಾರೆ. ಈಗ ಅವರು ಮತ್ತೊಂದು ಹೊಸ ಕಾರಣಕ್ಕೆ ಟ್ರೋಲ್ ಆಗಿದ್ದು, ಟ್ರೋಲರ್ಸ್‌ಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಅಬುಧಾಬಿಗೆ ಭೇಟಿ ನೀಡಿದ್ದ ಸೋನಾಕ್ಷಿ
ಇತ್ತೀಚೆಗೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ ಇಕ್ಬಾಲ್ ಅವರ ಜೊತೆಗೆ ಅಬುಧಾಬಿಗೆ ಪ್ರವಾಸ ಹೋಗಿದ್ದರು. ಈ ಪ್ರವಾಸದ ವೇಳೆ ಅಲ್ಲಿನ ಶೇಕ್ ಜಾಯೆದ್ ಗ್ರಾಂಡ್ ಮಸೀದಿಗೆ ಅವರು ಭೇಟಿ ನೀಡಿದ್ದರು.
ಅಬುಧಾಬಿಯ ಮಸೀದಿಗೆ ಪತಿ ಜೊತೆ ಭೇಟಿ
ಈ ಭೇಟಿಯ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ವೇಳೆ ಅನೇಕರು ಸೋನಾಕ್ಷಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಕೆಲವರು ಆಕೆ ಮಸೀದಿಯೊಳಗೆ ಚಪ್ಪಲಿ ಧರಿಸಿದ್ದಾಳೆ ಎಂದು ಟ್ರೋಲ್ ಮಾಡಿದ್ದರು.
ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡ ಸೋನಾ
ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡ ಸೋನಾಕ್ಷಿ ಸ್ವಲ್ಪ ಸುಖ ಸಿಕ್ಕಿತ್ತು. ಇಲ್ಲಿ ಅಬುಧಾಬಿಯಲ್ಲಿ ಎಂದು ಅವರು ಬರೆದುಕೊಂಡಿದ್ದಾರೆ.
ಚಪ್ಪಲಿ ಧರಿಸಿದ್ದಕ್ಕೆ ಟ್ರೋಲ್
ಇದಕ್ಕೆ ಒಬ್ಬರು ಶೂ ಧರಿಸಿ ಮಸೀದಿಯೊಳಗೆ ಓಡಾಡುವುದು ಮಹಾಪಾಪ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯಿಸಿದ್ದು, ಹೌದು ಇದೇ ಕಾರಣಕ್ಕೆ ಶೂ ಧರಿಸಿ ಒಳಗೆ ಹೋಗಲಿಲ್ಲ, ಸರಿಯಾಗಿ ನೋಡಿ, ಮಸೀದಿಯ ಹೊರಗೆ ನಾವಿದ್ದೇವೆ.
ಟ್ರೋಲರ್ಸ್‌ಗೆ ತಿರುಗೇಟು ನೀಡಿದ ಸೋನಾ
ಒಳಗೆ ಹೋಗುವ ಮೊದಲು ನಮಗೆ ಅಲ್ಲಿ ಅವರು ನಮಗೆ ಚಪ್ಪಲಿ ಇಡುವುದಕ್ಕೆ ಜಾಗ ತೋರಿಸಿದರು ಅಲ್ಲಿ ನಾವು ಚಪ್ಪಲಿಯನ್ನು ಬಿಚ್ಚಿಟ್ಟೆವು. ಇಷ್ಟು ಮಾಡುವುದಕ್ಕೆ ನಮಗೂ ಗೊತ್ತು. ಈಗ ನೀವು ಮುಂದೆ ಹೋಗಿ ಎಂದು ಅವರು ಟ್ರೋಲರ್‌ಗೆ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಗೆಳೆಯನ ಮದುವೆಯಾಗಿದ್ದ ಸೋನಾಕ್ಷಿ
2024ರ ಜೂನ್ 23ರಂದು ಸೋನಾಕ್ಷಿ ಸಿನ್ಹಾ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ವಿಶೇಷ ವಿವಾಹ ಕಾಯ್ದೆಯಡಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸರಳವಾಗಿ ಮದ್ವೆಯಾಗಿದ್ದರು. ಮುಸ್ಲಿಂ ವ್ಯಕ್ತಿಯನ್ನು ಮದ್ವೆಯಾಗಿದ್ದಕ್ಕೆ ದಬಾಂಗ್ ನಟಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದರು. ನಂತರ ಇತ್ತಿಚೆಗೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದ ಸೋನಾಕ್ಷಿ ನಾವು ಮದುವೆಯಾಗುವ ಸಮಯದಲ್ಲಿ ಧರ್ಮ ನಮಗೆ ದೊಡ್ಡ ವಿಷಯವಾಗಲಿಲ್ಲ ಎಂದು ಹೇಳಿಕೊಂಡಿದ್ದರು.