ಡೆಹ್ರಾಡೂನ್‌ನಲ್ಲಿ ಮನೆಯೊಂದರ ಗೋಡೆಯ ಮೇಲೆ ಹಾವೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿಯಲು ಹೋದಾಗ ಹಾವು ಅವರ ಮೇಲೆಯೇ ತಿರುಗಿಬಿದ್ದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ.
ಹಾವುಗಳನ್ನು ಹಿಡಿಯುವುದು ಸುಲಭದ ಕೆಲಸವಲ್ಲ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವವೇ ಹೋಗುವುದು. ಅದೇ ರೀತಿ ಇಲ್ಲೊಂದು ಕಡೆ ಹಾವು ಹಿಡಿಯಲು ಹೋದವರ ಮೇಲೆ ಹಾವು ತಿರುಗಿ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದು, ಆ ಭಯಾನಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಇಲ್ಲಿನ ಮನೆಯೊಂದರ ಗೋಡೆಯ ಮೇಲೆ ಹಾವೊಂದನ್ನು ನೋಡಿದ ಅಲ್ಲಿನ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಅದರಂತೆ ಅಲ್ಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾವನ್ನು ಸುರಕ್ಷಿತವಾಗಿ ಹಿಡಿಯುವುದಕ್ಕೆ ಹೋಗಿದ್ದು, ಆದರೆ ಭಯಗೊಂಡ ಹಾವು ಅವರ ಮೇಲೆಯೇ ದಾಳಿಗೆ ಮುಂದಾಗಿದೆ. ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಗೂ ಒಮ್ಮೆ ಎದೆ ಝಲ್ಲೆನಿಸುತ್ತಿದೆ.
ಹಿಡಿಯಲು ಬಂದವರ ಮೇಲೆ ಹಾವಿನ ಸಡನ್ ಅಟ್ಯಾಕ್:
ಡೆಹ್ರಾಡೂನ್‌ನ ಬೌವಾಲಾ ಗ್ರಾಮದ ಝಜ್ರಾ ರೇಂಜ್‌ನಲ್ಲಿ ಈ ಘಟನೆ ನಡೆದಿದೆ. ಬೃಹತ್ ಗಾತ್ರದ ಹಾವನ್ನು ನೋಡಿ ಅಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಇತ್ತ ಜನರ ನೋಡಿ ಹಾವಿಗೂ ಗೊಂದಲವಾಗಿದೆ. ವೀಡಿಯೋದಲ್ಲಿ ಹಲವು ಯುವಕರು ಈ ಹಾವನ್ನು ಹಸಿರು ಬಳ್ಳಿಗಳಿಂದ ತುಂಬಿದ್ದ ಗೋಡೆಯಿಂದ ಕೆಳಗಿಳಿಸಲು ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ವೇಳೆ ಹಾವು ಅಲ್ಲಿಂದಲೇ ಹೆಡೆಯೆತ್ತಿ ಅಲ್ಲಿದ್ದವರ ಮೇಲೆ ದಾಳಿಗೆ ಮುಂದಾಗಿದೆ. ಒಬ್ಬ ವ್ಯಕ್ತಿ ಕೋಲಿನಲ್ಲಿ ಹಾವಿನ ಹಡೆಯನ್ನು ಮುಟ್ಟಿದ್ದು ಈ ವೇಳೆ ರೊಚ್ಚಿಗೆದ್ದ ಈ ಭಾರಿ ಗಾತ್ರದ ಹಾವು ಹೆಡೆಎತ್ತಿ ದಾಳಿ ಮಾಡಲು ಮುಂದಾಗಿದ್ದಲ್ಲೇ ಕೆಲ ಕ್ಷಣದಲ್ಲಿ ಜಾರಿ ಕೆಳಗೆ ಬಿದ್ದಿದೆ. ಹಾವಿನ ಈ ಹಠಾತ್ ದಾಳಿಗೆ ಒಂದು ಕ್ಷಣ ಹಾವು ಹಿಡಿಯಲು ಬಂದವರೇ ದಂಗಾಗಿದ್ದಾರೆ.
ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
ನಂತರ ಕೊನೆಗೂ ಈ ತಂಡ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ರೇಂಜ್ ಅರಣ್ಯ ಅಧಿಕಾರಿ ಸೋನಾಲ್ ಪನೇರು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು ಹಾವು ಇದೆ ಎಂಬ ಕರೆ ಬಂದ ಕೂಡಲೇ , ನಮ್ಮ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಪಂದಿಸಿ ಅಲ್ಲಿಗೆ ಹೋದರು. ಅಲ್ಲಿಗೆ ಹೋಗಿ ನಾವು ರಕ್ಷಣಾ ಕಾರ್ಯಾಚರಣೆ ಮಾಡಲು ಶುರು ಮಾಡುತ್ತಿದ್ದಂತೆ ಹಾವು ಭಯಗೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ನಮ್ಮ ಮೇಲೆ ಹಲವು ಬಾರಿ ದಾಳಿ ಮಾಡಿತು. ಅದು ನಮ್ಮ ಕೆಲಸಗಾರರೊಬ್ಬರ ಮೇಲೂ ದಾಳಿ ಮಾಡಿತು ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಂತೂ ಸೀಮಿತ ಉಪಕರಣಗಳು ಮತ್ತು ಕಠಿಣ ಪರಿಸ್ಥಿತಿಗಳ ಹೊರತಾಗಿಯೂ ಸುದೀರ್ಘ ಪ್ರಯತ್ನದ ನಂತರ ಹಾವನ್ನು ಸೆರೆಹಿಡಿದು ರಕ್ಷಿಸುವಲ್ಲಿ ನಮ್ಮ ತಂಡ ಯಶಸ್ವಿಯಾಯ್ತು. ನಂತರ ನಾಗರಹಾವನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ಮಳೆಗೆ ಮನೆಯೇ ಬಿದ್ದರೂ ದೃಢವಾಗಿ ನಿಂತ ಫ್ಯಾನ್: ಕೊಚ್ಚಿ ಹೋಗ್ತಿದ್ದ ನಾಯಿಯ ರಕ್ಷಣೆ
ಇದನ್ನೂ ಓದಿ: ಮುಕ್ಕಾಲ ಹಾಡಿಗೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಾಜಿ ಕಾಲೇಜಿನ ಪ್ರೊಫೆಸರ್ ಬಿಂದಾಸ್ ಡಾನ್ಸ್
