Effigy of Lord Rama Set Ablaze: ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಮೆಗೆ ಬೆಂಕಿ ಇಟ್ಟು ಕೆಲ ಕಿಡಿಗೇಡಿಗಳು ದುಷ್ಕೃತಿ ಮೆರೆದಿದ್ದಾರೆ. ತಮಿಳುನಾಡಿನ ತಿರುಚಿಯಲ್ಲಿಯೇ ಸೌಹಾರ್ದತೆಯನ್ನು ಕೆಡಿಸುವಂತಹ ಘಟನೆ ನಡೆದಿದ್ದು, ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ
ಕೋಟ್ಯಾಂತರ ಜನ ಪೂಜಿಸುವ ರಾಮನ ಪ್ರತಿಕೃತಿ ದಹನ
ವಿಜಯದಶಮಿಯಂದು ರಾವಣ ದಹನ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಆದರೆ ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಮೆಗೆ ಬೆಂಕಿ ಇಟ್ಟು ಕೆಲ ಕಿಡಿಗೇಡಿಗಳು ದುಷ್ಕೃತಿ ಮೆರೆದಿದ್ದಾರೆ. ತಮಿಳುನಾಡಿನ ತಿರುಚಿಯಲ್ಲಿಯೇ ಸೌಹಾರ್ದತೆಯನ್ನು ಕೆಡಿಸುವಂತಹ ಘಟನೆ ನಡೆದಿದ್ದು, ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಈ ದುಷ್ಕರ್ಮಿಗಳು ರಾವಣನನ್ನು ಹೊಗಳುತ್ತಾ ರಾಮನನ್ನು ತೆಗಳುತ್ತಾ ಹಿಂದೂಗಳ ಆರಾಧ್ಯ ದೈವ ಆಗಿರುವ ಶ್ರೀರಾಮನ ಪ್ರತಿಕೃತಿಗೆ ಬೆಂಕಿ ಇಡುವ ಮೂಲಕ ಕೋಟ್ಯಾಂತರ ಹಿಂದೂ ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ. ಫಿಫ್ತ್ ತಮಿಳ್ ಸಂಗಮ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ಘಟನೆಯ ವೀಡಿಯೋ ಪೋಸ್ಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕ್ಯಾಮರಾದಲ್ಲಿ ಕೃತ್ಯ ಸೆರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್
ವೀಡಿಯೋದಲ್ಲಿ ಕಾಣುವಂತೆ ವ್ಯಕ್ತಿಯೊಬ್ಬ ರಾಮನ ಪ್ರತಿಕೃತಿಗೆ ಬೆಂಕಿ ಇಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುವ ವೇಳೆ ಆತ ರಾವಣನನ್ನು ಹೊಗಳಿ ಕೊಂಡಾಡುವಂತೆ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ರಾವಣನ ಪ್ರತಿಕೃತಿ ದಹನವಾದ ನಂತರ ಈ ಕಿಡಿಗೇಡಿಗಳು ಅಲ್ಲಿ ಕೈಯಲ್ಲಿ ವೀಣೆ ಹಿಡಿದಿರುವ ಹತ್ತು ತಲೆಯ ರಾವಣನನ್ನು ಪ್ರತಿಷ್ಠಾಪಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192, 196 (1)(ಎ), 197, 299, 302 ಹಾಗೂ 353 (2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಪೊಲೀಸರು 36 ವರ್ಷ ಅಡೈಕಲರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಹಾಗೆಯೇ ಈ ಪ್ರಕರಣದಲ್ಲಿ ಭಾಗಿಯಾದ ಇತರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇಂತಹ ಕೃತ್ಯವೆಸಗಿ ಅದನ್ನು ಪ್ರಸಾರ ಮಾಡಿ ಕೋಮು ಸಾಮರಸ್ಯ ಕೆಡವುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆನೀಡಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನಡುರಸ್ತೆಯಲ್ಲಿ ಸಿಲುಕಿದ ಬೈಕ್ ಸವಾರನಿಗೆ ನೆರವಾದ ರಾಪಿಡೋ ಚಾಲಕ
ಇದನ್ನೂ ಓದಿ: ವರದಕ್ಷಿಣೆ ಬೇಡ ಎಂದಿದ್ದಕ್ಕೆ ವಧುವಿನ ತಂದೆ ಮಾಡಿದ್ದೇನು?
ಇದನ್ನೂ ಓದಿ:ಪ್ರಧಾನಿ ಮೋದಿ ತನ್ನ ದೇಶದ ಬಗ್ಗೆ ಮೊದಲು ಯೋಚಿಸುವ ಅತ್ಯಂತ ಬುದ್ಧಿವಂತ ನಾಯಕ: ಪುಟಿನ್


