ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಶರ್ಟ್‌ರಹಿತ ವ್ಯಕ್ತಿಯೊಬ್ಬ ಕೈಕೋಳ ಹಾಕಿ ಸೀಟಿಗೆ ಬಂಧಿತನಾಗಿರುವ ಫೋಟೋ ವೈರಲ್‌ ಆಗಿದೆ. ಈ ಘಟನೆ  ಚರ್ಚೆಗೆ ಗ್ರಾಸವಾಗಿದೆ.

ಕೈಗೆ ಕೋಳ ಶರ್ಟ್ ಇಲ್ಲದ ಸ್ಥಿತಿಯಲ್ಲಿ ಸೀಟಿಗೆ ಬಂಧಿತನಾಗಿದ್ದ ವ್ಯಕ್ತಿ:

ಮೈಮೇಲೆ ಶರ್ಟ್‌ ಕೂಡ ಇಲ್ಲದೇ ಕೈ ಕಟ್ಟಿದ ಸ್ಥಿತಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲೊಂದರ ಸೀಟಿನಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಕಾರಣವಾಯ್ತು. ಭಾರತೀಯ ರೈಲ್ವೆಯಲ್ಲಿ ಪ್ರೀಮಿಯಂ ಸೇವೆಗಳಿಗೆ ಹೆಸರುವಾಸಿಯಾದ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಈ ನಿಗೂಢ ವ್ಯಕ್ತಿ ಮಲಗಿದ್ದ. ಚಲಿಸುವ ರೈಲಿನ ಸೀಟಿಗೆ ಪ್ರಯಾಣಿಕನೊಬ್ಬನನ್ನು ಕೈಕೋಳ ಹಾಕಿ ಬಂಧಿಸಿದ್ದರಿಂದ ಈ ಫೋಟೋ ಭಾರಿ ವೈರಲ್ ಆಗಿದೆ. ಈ ಚಿತ್ರವನ್ನು ರೆಡಿಟ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ಫೋಟೋ ವೈರಲ್ ಆಗಿದೆ. ಅನೇಕರು ಈತ ಯಾವುದಾದರು ಪ್ರಕರಣದ ಅಪರಾಧಿ ಆಗಿರಬಹುದು ಆತನನ್ನು ರೈಲಿನಲ್ಲಿ ಕರೆದೊಯ್ಯುತ್ತಿರಬಹುದು ಎಂದು ಜನ ಊಹಿಸಿದರು.

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಿಗೂಢ ವ್ಯಕ್ತಿಯ ಪಯಣ

ಆತನ ಕೈಗೆ ಏಕೆ ಕೋಳ ಅಳವಡಿಸಲಾಗಿದೆ ಹಾಗೂ ಯಾವುದೇ ಪೊಲೀಸ್ ರಕ್ಷಣೆ ಇಲ್ಲದೇ ಆತನನ್ನು ರೈಲಿನ ಸೀಟಿಗೆ ಕಟ್ಟಿರುವುದಕ್ಕೆ ಕಾರಣ ಏನು ಎಂದು ಕೆಲ ನೆಟ್ಟಿಗರು ತಲೆಗೆ ಹುಳು ಬಿಟ್ಟುಕೊಂಡಿದ್ದರು. ರೆಡಿಟ್ ಬಳಕೆದಾರರೊಬ್ಬರು, ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಶರ್ಟ್ ಧರಿಸದ ಪ್ರಯಾಣಿಕನೋರ್ವನನ್ನು ಕೈಗೆ ಕೋಳ ಹಾಕಿ ರೈಲಿನ ಅಪ್ಪರ್‌ ಬರ್ತ್‌ನ ರೈಲಿನ ಸೀಟಿಗೆ ಬಂಧಿಸಲಾಗಿತ್ತು ಎಂದು ಬರೆದು ಫೋಟೋ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೆಲ ಗಂಟೆಗಳಲ್ಲಿ ವೈರಲ್ ಆಗಿ 500ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದರು. ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಸೆಕೆಂಡ್ ಎಸಿ ಬೋಗಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಫೋಟೋದಲ್ಲಿ ವ್ಯಕ್ತಿಯೊಬ್ಬನ ಶರ್ಟ್ ಧರಿಸದೇ ಕೈಗೆ ಕೋಳ ಹಾಕಿ ಬಂಧಿಸಿದ ರೀತಿಯಲ್ಲಿ ಮಲಗಿರುವುದನ್ನು ಕಾಣಬಹುದು. ಫೋಟೋದಲ್ಲಿ ಆತನ ಮುಖ ಕಾಣಿಸುತ್ತಿಲ್ಲ. ಆದರೆ ಈ ಘಟನೆ ಬಗ್ಗೆ ರೈಲ್ವೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.

ನೆಟ್ಟಿಗರಿಂದ ಹಲವು ಕಾಮೆಂಟ್

ಬಹುಶಃ ಪೊಲೀಸರು ಆತನನ್ನು ರೈಲಿನ ಮೂಲಕ ಜೈಲಿಗೆ ಕರೆದೊಯ್ಯುತ್ತಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ವೈಟ್ ಕಾಲರ್ ಕ್ರೈಂ ಅಪರಾಧಿ ಇರಬಹುದು. ಈತ ಶ್ರೀಮಂತನಾಗಿರಬಹುದು ಆದರೆ ಅಷ್ಟೊಂದು ಶ್ರೀಮಂತನಾಗಿರಲಿಕ್ಕಿಲ್ಲ, ಒಂದು ಸಮಯ ಆತ ತುಂಬಾ ಶ್ರೀಮಂತನಾಗಿದ್ದರೆ ಪೊಲೀಸರು ಆತನನ್ನು ವಿಮಾನದಲ್ಲಿ ಕರೆದೊಯ್ದಿರಬಹುದು ಎಂದು ಒಬ್ಬರು ವ್ಯಂಗ್ಯ ಮಾಡಿದ್ದಾರೆ. ಆದರೆ ಆತ ಶರ್ಟ್ ಏಕೆ ಧರಿಸಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಶರ್ಟ್‌ ಧರಿಸದಿರುವುದೇ ಈತನ ಅಪರಾಧ ಆಗಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಅವನಿಗೆ ಸೆಖೆ ಇರಬಹುದು ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಅದು ಎಸಿ ಕೋಚ್ ಎಂದು ಪ್ರತಿಕ್ರಿಯಿಸಿದ್ದಾರೆ ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ನಾಪತ್ತೆಯಾದ ಗಂಡನ ಮತ್ತೊಂದು ಸಂಸಾರ: ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹೆಂಡ್ತಿಯಿಂದ ಪತ್ತೆ

ಇದನ್ನೂ ಓದಿ: ಭಾರತ ನಮ್ ಜೊತೆ ಇರ್ಬೇಕಿತ್ತು, ರಷ್ಯಾ ಜೊತೆ ಅಲ್ಲ... ಪುಟಿನ್ ಮೋದಿ ಭೇಟಿ ಬಳಿ ಟ್ರಂಪ್ ಸಲಹೆಗಾರ ಹೇಳಿದ್ದೇನು?