Headmaster's belt treatment: ಶಿಕ್ಷಣಾಧಿಕಾರಿಯ ಮೇಲೆ ಮುಖ್ಯ ಶಿಕ್ಷಕರೊಬ್ಬರು ಅವರ ಕಚೇರಿಯಲ್ಲೇ ಬೆಲ್ಟ್‌ನಿಂದ ಹಲ್ಲೆ ನಡೆಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿಕ್ಷಣಾಧಿಕಾರಿಗೆ ಮುಖ್ಯ ಶಿಕ್ಷಕನ ಬೆಲ್ಟ್ ಟ್ರೀಟ್‌ಮೆಂಟ್‌..!

ಸೀತಾಪುರ: ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಥಳಿಸುವುದನ್ನು ಕೇಳಿದ್ದೇವೆ. ಶಿಕ್ಷಕರ ಶಿಕ್ಷೆ ಶಿಕ್ಷಣದ ಒಂದು ಭಾಗ..! ಕೀಟಲೆ ಮಾಡುವ ಮಕ್ಕಳ ಸರಿದಾರಿಗೆ ತರಲು ಶಿಕ್ಷಣದ ಜೊತೆ ಸಣ್ಣ ಶಿಕ್ಷೆ ಅಗತ್ಯ. ಆದರೆ ಇಲ್ಲೊಬ್ಬರು ಹೆಡ್ ಮಾಸ್ಟರ್‌, ಶಾಲೆಗೆ ಬಂದ ಶಿಕ್ಷಣಾಧಿಕಾರಿಗೇ ತಮ್ಮ ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಬಾರಿಸಿದ್ದು, ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಥಳಿಸಿದ ಮುಖ್ಯ ಶಿಕ್ಷಕ

ಮಹಿಳಾ ಶಿಕ್ಷಕಿಯೊಬ್ಬರು(Female Teacher) ಈ ಹೆಡ್ ಮಾಸ್ಟರ್ ಬಗ್ಗೆ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು ಈ ದೂರಿನ ಬಗ್ಗೆ ಶಿಕ್ಷಣಾಧಿಕಾರಿ ವಿಚಾರಿಸಲು ಬಂದಾಗ ಈ ಘಟನೆ ನಡೆದಿದೆ. ಮುಖ್ಯಶಿಕ್ಷಕನ ಸಮರ್ಥನೆಯನ್ನು ಶಿಕ್ಷಣಾಧಿಕಾರಿ ಒಪ್ಪಿಕೊಳ್ಳದೇ ಅಸಮಾಧಾನ ವ್ಯಕ್ತಪಡಿಸಿದಾಗ ಕುಪಿತಗೊಂಡ ಮುಖ್ಯ ಶಿಕ್ಷಕ ತಮ್ಮ ಪ್ಯಾಂಟ್‌ಗೆ ಹಾಕಿದ್ದ ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಸೀಟಿನಲ್ಲಿ ಕುಳಿತಿದ್ದ ಶಿಕ್ಷಣಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆರು ಸೆಕೆಂಡ್‌ನಲ್ಲಿ ಅವರು 5 ಬಾರಿ ಶಿಕ್ಷಣಾಧಿಕಾರಿ ಮೇಲೆ ಮುಖ್ಯ ಶಿಕ್ಷಕ ಥಳಿಸಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲೇ ಘಟನೆ, ವೀಡಿಯೋ ವೈರಲ್

ಅಖಿಲೇಶ್ ಪ್ರತಾಪ್ ಸಿಂಗ್ ಎಂಬುವವರೇ ಶಿಕ್ಷಕನಿಂದ ಹಲ್ಲೆಗೊಳಗಾದ ಶಿಕ್ಷಣಾಧಿಕಾರಿ, ಮೂಲಭೂತ ಶಿಕ್ಷಾ ಅಧಿಕಾರಿ(BSA)ಆಗಿರುವ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಸೀತಾಪುರದಲ್ಲಿರುವ ಕಚೇರಿಯಲ್ಲೇ ಈ ಘಟನೆ ನಡೆದಿದೆ. ಬ್ರಿಜೇಂದ್ರ ಕುಮಾರ್ ವರ್ಮಾ ಹಲ್ಲೆ ಮಾಡಿದ ಮುಖ್ಯ ಶಿಕ್ಷಕ, ಬ್ರಿಜೇಂದ್ರ ಕುಮಾರ್ ಸಿಂಗ್ ಅವರು ಮಹ್ಮದಾಬಾದ್ ಬ್ಲಾಕ್‌ನ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದು, ತಮ್ಮ ವಿರುದ್ಧ ಶಿಕ್ಷಕಿ ನೀಡಿದ ದೂರುಗಳಿಗೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟೀಕರಣವನ್ನು ನೀಡಲು ಅವರು ಶಿಕ್ಷಣಾಧಿಕಾರಿಯ ಕಚೇರಿಗೆ ಬಂದಿದ್ದರು.

ಮುಖ್ಯಶಿಕ್ಷಕನ ವಿರುದ್ಧ ದೂರು ನೀಡಿದ್ದ ಶಿಕ್ಷಕಿ: ದೂರಿನ ಬಗ್ಗೆ ಸ್ಪಷ್ಟನೆ ನೀಡಲು ಬಂದಿದ್ದ ಶಿಕ್ಷಕ

ಆದರೆ ಬ್ರಿಜೇಂದ್ರ ಕುಮಾರ್ ವರ್ಮಾ ಅವರ ಸ್ಪಷ್ಟೀಕರಣದ ಬಗ್ಗೆ ಶಿಕ್ಷಣಾಧಿಕಾರಿ ಅಖಿಲೇಶ್ ಪ್ರತಾಪ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಕುಪಿತಗೊಂಡ ಬ್ರಿಜೇಂದ್ರ ಕುಮಾರ್ ವರ್ಮಾ ಅವರು ತಮ್ಮ ಸೊಂಟದಿಂದ ಬೆಲ್ಟ್ ಬಿಚ್ಚಿ ಶಿಕ್ಷಣಾಧಿಕಾರಿಗೆ ಶಿಕ್ಷಣಾಧಿಕಾರಿಯ ಕಚೇರಿಯಲ್ಲೇ ಬಾರಿಸಿದ್ದಾರೆ.

ಶಿಕ್ಷಣಾಧಿಕಾರಿಗೆ ಥಳಿಸಿ ಕೊಲೆ ಬೆದರಿಕೆ ಹಾಕಿದ್ದ ಶಿಕ್ಷಕನ ಬಂಧನ:

ಶಿಕ್ಷಣಾಧಿಕಾರಿಗಳು(Education Officer) ಕೇಳಿದ ಪ್ರಶ್ನೆಗೆ ಮುಖ್ಯ ಶಿಕ್ಷಕರು ಉತ್ತರಿಸಲು ವಿಫಲರಾದರು. ನಂತರ ಮುಖ್ಯ ಶಿಕ್ಷಕ ಆಕ್ರಮಣಕಾರಿಯಾಗಿ ವರ್ತಿಸಿದ್ದು, ಬೆಲ್ಟ್ ಬಿಚ್ಚಿ ಶಿಕ್ಷಣಾಧಿಕಾರಿಗಳಿಗೆ ಥಳಿಸಿದ್ದಾರೆ. ಇತರರು ಮಧ್ಯಪ್ರವೇಶಿಸುವುದಕ್ಕೂ ಮೊದಲು ಐದು ಬಾರಿ ಆ ಶಿಕ್ಷಕ ಶಿಕ್ಷಣಾಧಿಕಾರಿಗೆ ಬೆಲ್ಟ್‌ನಿಂದ ಥಳಿಸಿದ್ದಾರೆ. ಅಲ್ಲದೇ ಆ ಶಿಕ್ಷಕ ಶಿಕ್ಷಣಾಧಿಕಾರಿಗೆ ಕೊಲೆ ಬೆದರಿಕೆಯನ್ನು ಹಾಕಿದ್ದಾನೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಪೊಲೀಸರು ಈ ಮುಖ್ಯ ಶಿಕ್ಷಕನನ್ನು ಬಂಧಿಸಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಪುಟ್ಟ ಮಕ್ಕಳನ್ನು ತಿದ್ದಬೇಕಾದ ಶಿಕ್ಷಕರೇ ಈ ರೀತಿ ತಾಳ್ಮೆ ಕಳೆದುಕೊಂಡು ವರ್ತಿಸಿರುವುದನ್ನು ನೋಡಿ ಅನೇಕರು ಗಾಬರಿಯಾಗಿದ್ದಾರೆ. ಯುವ ಮನಸ್ಸುಗಳನ್ನು ರೂಪಿಸುವ ಜವಾಬ್ದಾರಿ ಹೊತ್ತವರು ಗೂಂಡಾಗಳಂತೆ ವರ್ತಿಸಿದರೆ, ನಮ್ಮ ಮಕ್ಕಳನ್ನು ದೇವರೇ ಕಾಪಾಡಬೇಕು. ಶಾಲೆಗಳಲ್ಲಿ ಇಂತಹ ಹಿಂಸೆ ಮತ್ತು ಕಾನೂನುಬಾಹಿರತೆ ಸ್ವೀಕಾರಾರ್ಹವಲ್ಲ.. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒಬ್ಬರು ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

Scroll to load tweet…

ಇದನ್ನೂ ಓದಿ: ಗಂಡ ಹೆಂಡತಿ ಜಗಳ: ಪತಿ ಕಿವಿ ಕಚ್ಚಿ ಗಾಯಗೊಳಿಸಿದ ಪತ್ನಿ

ಇದನ್ನೂ ಓದಿ: ಅಜ್ಜನ ಸಾವಿನ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌: ನಗುವ ಇಮೋಜಿ ಹಾಕಿದ್ದಕ್ಕೆ ಕೊಲೆ

ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 99.99 ಅಂಕ: ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಎಂದು ಸಾವಿಗೆ ಶರಣಾದ ವಿದ್ಯಾರ್ಥಿ