Pressure to Pursue MBBS ಆತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ನೀಟ್ ಪರೀಕ್ಷೆಯಲ್ಲಿ 99.99 ಅಂಕ ಗಳಿಸಿದ್ದ, ಅನೇಕರು ಈ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾರ್ಕ್ ಪಡೆಯುವುದಕ್ಕೆ ಬಹಳ ಕಷ್ಟ ಪಡುತ್ತಾರೆ. ಆದರೆ ವೈದ್ಯನಾಗುವ ಆಸೆ ಮಾತ್ರ ಆತನಿಗೆ ಇರಲಿಲ್ಲ, ಪರಿಣಾಮ ಸಾವಿನ ಮನೆ ಸೇರಿದ್ದಾನೆ

ಡಾಕ್ಟರ್ ಆಗುವ ಮನಸ್ಸಿಲ್ಲ ಎಂದು ಸಾವಿನ ದಾರಿ ಹಿಡಿದ ವಿದ್ಯಾರ್ಥಿ:

ಆತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ನೀಟ್ ಪರೀಕ್ಷೆಯಲ್ಲಿ 99.99 ಅಂಕ ಗಳಿಸಿದ್ದ, ಅನೇಕರು ಈ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾರ್ಕ್ ಪಡೆಯುವುದಕ್ಕೆ ಬಹಳ ಕಷ್ಟ ಪಡುತ್ತಾರೆ. ಆದರೆ ಈತ ಉತ್ತಮ ಅಂಕವೇನೋ ಗಳಿಸಿದ್ದ. ಆದರೆ ವೈದ್ಯನಾಗುವ ಆಸೆ ಮಾತ್ರ ಆತನಿಗೆ ಇರಲಿಲ್ಲ, ಪರಿಣಾಮ ಸಾವಿನ ಮನೆ ಸೇರಿದ್ದಾನೆ. ಹೌದು ಇಂತಹ ಮನಕಲುಕುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ. ಅನುರಾಗ್ ಅನಿಲ್ ಬೋರ್ಕರ್ ಎಂಬ ವಿದ್ಯಾರ್ಥಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶಾತಿಗೆ ಒಂದು ದಿನ ಮೊದಲು ಸಾವಿಗೆ ಶರಣಾಗಿದ್ದಾನೆ.

2025ರ ಯುಜಿ ನೀಟ್ ಪರೀಕ್ಷೆಯಲ್ಲಿ 99.99 ಅಂಕ ಗಳಿಸಿದ್ದ ಅನುರಾಗ್..

ಆತನ ಮನೆ ಸ್ಥಿತಿ ಮನೆಯವರು ಸ್ಥಿತಿ ಹೇಗಿತ್ತೋ ಏನೋ ಗೊತ್ತಿಲ್ಲ, ವೈದ್ಯಕೀಯ ಕೋರ್ಸ್‌ ಇಷ್ಟವಿಲ್ಲದಿದ್ದರೆ ಬದುಕುವುದಕ್ಕೆ ಸಾವಿರ ದಾರಿಗಳಿವೆ. ಕನಿಷ್ಟ ವೈದ್ಯನಾಗುವ ಇಷ್ಟವಿಲ್ಲದಿದ್ದರೆ ಪೋಷಕರಿಗೆ ವಿಚಾರ ತಿಳಿಸಬಹುದಿತ್ತು. ಪೋಷಕರ ಕಡೆಯಿಂದಲೇ ಮಗ ವೈದ್ಯನಾಗಬೇಕು ಎಂಬ ತೀವ್ರ ಒತ್ತಡವಿತ್ತು ಗೊತ್ತಿಲ್ಲ, ಆದರೆ 19 ವರ್ಷದ ಈ ಹುಡುಗ ಓದಿನಲ್ಲಿ ಪ್ರತಿಭಾವಂತನಾಗಿದ್ದರು ಒತ್ತಡಕ್ಕೆ ಸಿಲುಕಿ ಸಾವಿನ ಮನೆ ಸೇರಿದ್ದಾನೆ. ಅನುರಾಗ್ ಅನಿಲ್ ಬೋರ್ಕರ್‌ಗೆ 2025ರ ಯುಜಿ ನೀಟ್ ಪರೀಕ್ಷೆಯಲ್ಲಿ 99.99 ಅಂಕ ಬಂದಿತ್ತು. ಒಬಿಸಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 1475ನೇ ರಾಂಕ್ ಗಳಿಸಿದ್ದ.

ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶಕ್ಕೆ ಗೋರಖ್‌ಪುರಕ್ಕೆ ತೆರಳುವ ಮೊದಲು ಸಾವು

ಸಾವಿಗೂ ಮೊದಲು ಆತ ಡೆತ್‌ನೋಟ್ ಬರೆದಿದ್ದಾನೆ ಎನ್ನಲಾಗಿದ್ದು, ಅದರಲ್ಲಿ ನನಗೆ ವೈದ್ಯನಾಗುವುದಕ್ಕೆ ಇಷ್ಟವಿಲ್ಲ ಎಂದು ಬರೆದಿದ್ದಾನೆ ಎನ್ನಲಾಗಿದೆ. ಸಿಂದೇವಾಹಿ ತಾಲ್ಲೂಕಿನ ನವರಗಾಂವ್ ನಿವಾಸಿಯಾದ ಅನುರಾಗ್ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ನೀಟ್‌ನಲ್ಲಿ ಒಳ್ಳೆ ಅಂಕದೊಂದಿಗೆ ಪಾಸಾದ ನಂತರ ಅವರು ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶಕ್ಕಾಗಿ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಪ್ರಯಾಣಿಸಲು ಸಿದ್ಧತೆ ನಡೆಸುತ್ತಿದ್ದರು. ಆದರೆ ಪೊಲೀಸರ ಪ್ರಕಾರ, ಅನುರಾಗ್ ಗೋರಖ್‌ಪುರಕ್ಕೆ ತೆರಳುವ ಮೊದಲು ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದು, ನವರಗಾಂವ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅನೇಕ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಶೈಕ್ಷಣಿಕ ಜೀವನದ ವಿಷಯಕ್ಕೆ ಬಂದಾಗ ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಾರೆ. ಶಾಲೆ ಮತ್ತು ಕಾಲೇಜುಗಳು ತಮ್ಮ ಜೀವನದ ಒಂದು ಭಾಗ ಮಾತ್ರ ಮತ್ತು ಅದೇ ಎಲ್ಲವೂ ಅಲ್ಲ ಎಂಬುದನ್ನು ಮಕ್ಕಳು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಒತ್ತಡವನ್ನು ಉತ್ತಮವಾಗಿ ನಿಭಾಯಿಸಲು, ಹದಿಹರೆಯದವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ತಾವು ಎದುರಿಸುತ್ತಿರುವ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಬೇಕು. ಒಬ್ಬರೊಂದಿಗೆ ತಮ್ಮ ಮನದ ತೊಳಲಾಟವನ್ನು ಹಂಚಿಕೊಳ್ಳುವುದರಿಂದ ಬೆಂಬಲ ಪಡೆಯುವ ಜೊತೆಗೆ ಒಂಟಿತನ ಕಡಿಮೆ ಮಾಡಿಕೊಳ್ಳಬಹುದು.

ವಿಶೇಷ ಮನವಿ:

ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ... ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ 'ಆತ್ಮ8ತ್ಯೆ' ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:

Sahai Helpline - 080 2549 7777

ಇದನ್ನೂ ಓದಿ: ಪೋಷಕರು ಬೇಡವೆಂದು ತಿಪ್ಪೆಗೆಸೆದ ಮಗು ಈಗ ಫೇಮಸ್ ಇನ್‌ಫ್ಲುಯೆನ್ಸರ್

ಇದನ್ನೂ ಓದಿ: ಲಡಾಖ್‌ನ ಲೇಹ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಬಿಜೆಪಿ ಕಚೇರಿ, ಪೊಲೀಸ್ ವಾಹನಕ್ಕೆ ಬೆಂಕಿ

ಇದನ್ನೂ ಓದಿ: ಹಾವು ಹಿಡಿಯಲು ಬಂದವನನ್ನೇ ಬಂಧಿಯಾಗಿಸಿದ ಹೆಬ್ಬಾವು

ಇದನ್ನೂ ಓದಿ: ಡಿಸಾಸ್ಟರ್ ಸಿನಿಮಾಗಳಂತೆ ಕಾರುಗಳು ಚಲಿಸುತ್ತಿದ್ದಂತೆ ಬಾಯ್ತರೆದ ಭೂಮಿ: 50 ಅಡಿ ಆಳಕ್ಕೆ ಬಿದ್ದ ಕಾರುಗಳು