ಕುಡುಕನ ಚೆಲ್ಲಾಟ: ಕುಡುಕನೋರ್ವ ಹಾವನ್ನು ಕೈಯಲ್ಲಿ ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ನನಗೇ ಕಚ್ತೀಯಾ ನೀನು ಎಂದು ಕೇಳುತ್ತಾ ಹಾವಿನೊಂದಿಗೆ ಚೆಲ್ಲಾಟವಾಡಿದ್ದಲ್ಲದೇ ಅಲ್ಲಿದ್ದ ಇತರರನ್ನು ಹಾವು ತೋರಿಸಿ ಬೆದರಿಸಲು ಯತ್ನಿಸಿದಂತಹ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ನಡೆದಿದೆ.
ಹಾವಿನೊಂದಿಗೆ ಕುಡುಕನ ಚೆಲ್ಲಾಟ
ಕುಡುಕನೋರ್ವ ಹಾವನ್ನು ಕೈಯಲ್ಲಿ ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ನನಗೇ ಕಚ್ತೀಯಾ ನೀನು ಎಂದು ಕೇಳುತ್ತಾ ಹಾವಿನೊಂದಿಗೆ ಚೆಲ್ಲಾಟವಾಡಿದ್ದಲ್ಲದೇ ಅಲ್ಲಿದ್ದ ಇತರರನ್ನು ಹಾವು ತೋರಿಸಿ ಬೆದರಿಸಲು ಯತ್ನಿಸಿದಂತಹ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವೀಡಿಯೋ ಜನರ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕತ್ತಿಗೆ ಸುತ್ತಿಕೊಂಡವನಿಗೆ ಎರಡೆರಡು ಬಾರಿ ಕಚ್ಚಿದ ಹಾವು
ವೈರಲ್ ಆದ ವೀಡಿಯೋದಲ್ಲಿ ಆತ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಓಡಾಡುತ್ತಿರುವುದನ್ನು ಕಾಣಬಹುದು ಜೊತೆಗೆ ಅಲ್ಲಿ ಸೇರಿದ್ದ ಜನರ ಮೇಲೆ ಎಸೆಯುವಂತೆ ಮಾಡಿದ್ದು, ಈ ವೇಳೆ ಜನ ಕೂಗಾಡುವುದನ್ನು ಕಾಣಬಹುದು. ಆತ ಕೈಯಲ್ಲಿ ಹಾವನ್ನು ಹಿಡಿದುಕೊಂಡಾಗ ಜನ ಅದನ್ನು ಬಿಟ್ಟು ಬಿಡಿ ಕಚ್ಚಬಹುದು ಎಂದು ಹೇಳುತ್ತಾರೆ. ಆದರೆ ಈ ಕುಡುಕ ಜನರ ಮಾತು ಕೇಳುವುದಕ್ಕೆ ಸಿದ್ಧನಿಲ್ಲ, ಸುಮ್ಮನೇ ಆ ಹಾವನ್ನು ಕೈಯಲ್ಲಿ ಹಿಡಿದುಕೊಂಡು ಅತ್ತಿದ್ದಿಂತ ಇತ್ತಿದಂತ ಕಾಲೋನಿಯ ಗಲ್ಲಿಯಲ್ಲಿ ಓಡಾಡಿದ್ದಾನೆ. ಈ ವೇಳೆ ಆ ಹಾವನ್ನು ಸಾಯಿಸದೇ ಬಿಡುವಂತೆಯೂ ಜನರು ಕೇಳಿದ್ದಾರೆ. ಆದರೆ ಅವರ ಮಾತು ಕೇಳದ ಆತ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಓಡಾಡಿದ್ದು, ಈ ವೇಳೆ ಭಯದಿಂದ ಹಾವು ಈತನಿಗೆ ಎರಡು ಬಾರಿ ಕಚ್ಚಿದೆ ಎಂದು ವರದಿಯಾಗಿದೆ.
ಕೋನಾಸೀಮಾ ರೆಡ್ಡಿ ಜಿಲ್ಲೆಯ ಮುಮ್ಮಿದಿವರಂ ಪ್ರದೇಶದಲ್ಲಿ ಘಟನೆ
ಕೋನಾಸೀಮಾ ರೆಡ್ಡಿ ಜಿಲ್ಲೆಯ ಮುಮ್ಮಿದಿವರಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಸ್ತ ಪಕ್ಕದಲ್ಲೇ ಅಂಬೇಡ್ಕರ್ ಪ್ರತಿಮೆ ಇದ್ದು, ಅದರ ಮುಂದೆ ಈತ ಹಾವನ್ನು ಹಿಡಿದುಕೊಂಡು ಅತ್ತಿತ್ತ ಓಡಾಡಿದ್ದಾನೆ. ಹೀಗೆ ಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿ ಕಚ್ಚಿಸಿಕೊಂಡವನನ್ನು ಗೋಲ್ಲಪಲ್ಲಿ ಕೊಂಡ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯಲ್ಲಿ ಕೋಳಿ ಸಾಕುತ್ತಿದ್ದ ಅವುಗಳನ್ನು ಗೂಡಿನಲ್ಲಿ ಹಾಕಿ ಸಾಕುತ್ತಿದ್ದ. ಈ ಕೋಳಿ ಗೂಡಿನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಈ ಕೋಳಿಯ ಮೊಟ್ಟೆ ಅರಸಿ ಹಾವು ಬಂದಿದ್ದು, ಈತನ ಕೈಗೆ ಸಿಕ್ಕಿ ನರಳಾಡಿದೆ. ಹಾವನ್ನು ನೋಡಿ ಸಹಾಯಕ್ಕೆ ಕೂಗುವ ಬದಲು ಕುಡಿದ ಮತ್ತಿನಲ್ಲಿದ್ದ ಈತ ಕೊರಳಿಗೆ ಹಾಕಿಕೊಂಡು ಸುತ್ತಾಡಿದ್ದಾನೆ.
ಹಾವಿನ ಬಳಿ ನಂಗೇ ಕಚ್ತಿಯಾ ಕೇಳಿದ ಕುಡುಕ?
ವೈರಲ್ ಆದ ವೀಡಿಯೋದಲ್ಲಿ ಈತ ಹಾವನ್ನು ಕತ್ತಿಗೆ ಹಾಕಿ ನಂಗೆ ಕಚ್ತಿಯಾ ನೀನು ಎಂದು ಕೇಳುವುದನ್ನು ಕಾಣಬಹುದು. ಅಲ್ಲದೇ ಆತ ಹಾವನ್ನು ಹಿಡಿದುಕೊಂಡು ಅಲ್ಲಿದ್ದವರನ್ನೆಲ್ಲಾ ಹೆದರಿಸಿ ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಅವನಿಗೆ 2ನೇ ಬಾರಿ ಹಾವು ಕಚ್ಚಿತ್ತು. ಹೀಗಾಗಿ ಅಲ್ಲಿದ್ದ ಗ್ರಾಮಸ್ಥರು ಆತನ ಕೈನಿಂದ ಹಾವನ್ನು ಕಸಿದು ಬೇರೆಡೆ ತೆಗೆದುಕೊಂಡು ಹೋಗಿ ಸಾಯಿಸಿದ್ದಾರೆ. ನಂತರ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದಾರೆ. ಪ್ರಸ್ತುತ ಆತನ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗ್ಯಾಂಗ್ ರೇ*ಪ್: 26ರ ಹರೆಯದ ಮಾತು ಬಾರದ ಕಿವಿ ಕೇಳದ ಗರ್ಭಿಣಿ ಸಾವು
ಇದನ್ನೂ ಓದಿ: ವಿಧಾನಸಭಾ ಚುನಾವಣೆಗ ಮುನ್ನ ಬಿಹಾರದಲ್ಲಿ ಆರ್‌ಜೆಡಿ ಕಾರ್ಯಕರ್ತನ ಹತ್ಯೆ
ಇದನ್ನೂ ಓದಿ: 6 ಪೊಲೀಸರು, ಎಎಪಿ ಶಾಸಕ ಲಾಲ್ಪುರಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೋಷಿ :ಕೋರ್ಟ್
ಇದನ್ನೂ ಓದಿ: ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹತ್ಯೆ
