ಕಾನ್ಪುರದಲ್ಲಿ ಮಾತು ಬಾರದ, ಕಿವಿಯೂ ಕೇಳದ ಗರ್ಭಿಣಿ ಮಹಿಳೆಗೆ ಗರ್ಭಪಾತದ ಮಾತ್ರೆ  ನೀಡಿ ಇಬ್ಬರು ಕಾಮುಕರು ಅತ್ಯಾ*ಚಾರವೆಸಗಿದ್ದು, ಇದರಿಂದ ಅಸ್ವಸ್ಥಗೊಂಡ  ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮಾತು ಬಾರದ ಕಿವಿ ಕೇಳದ ಮಹಿಳೆ ಮೇಲೆ ಅತ್ಯಾ*ಚಾರ

ಕಾನ್ಪುರ: ಸಾಮೂಹಿಕ ಅತ್ಯಾ*ಚಾರಕ್ಕೊಳಗಾಗಿದ್ದ, ಮಾತು ಬಾರದ ಕಿವಿಯೂ ಕೇಳದ 26ರ ಹರೆಯದ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾನ್ಪುರದ ಹಮೀರ್‌ಪುರದಲ್ಲಿ ನಡೆದಿದೆ. ಈ ಹಿಂದೆಯೂ ಕಾಮುಕರು ಅತ್ಯಾ*ಚಾರವೆಸಗಿದ್ದ ಪರಿಣಾಮವಾಗಿಯೇ ಆಕೆ ಗರ್ಭಿಣಿ ಆಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಹೊಲಕ್ಕೆ ಕರೆದೊಯ್ದ ಆರೋಪಿಗಳು ಆಕೆಗೆ ಗರ್ಭಪಾತವಾಗುವುದಕ್ಕೆ ಮಾತ್ರೆ ನೀಡಿದ್ದಾರೆ ನಂತರ ಮತ್ತೆ ಅತ್ಯಾ*ಚಾರವೆಸಗಿದ್ದಾರೆ. ಇದರಿಂದ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಕೆಯನ್ನು ಕಾನ್ಪುರದ ಲಾಲ್‌ ಜಲಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

ಅತ್ತೆ ಮಾವನೊಂದಿಗೆ ಸರಿಹೋಗದ ಹಿನ್ನೆಲೆ ತವರಿನಲ್ಲಿ ವಾಸವಿದ್ದ ಮಹಿಳೆ

ಭಾನುವಾರ ಸಂಜೆ ಆಕೆಯ ಗ್ರಾಮದವರೇ ಆಕೆಗೆ ಗರ್ಭಪಾತ ಮಾತ್ರ ನೀಡಿ ಅತ್ಯಾ*ಚಾರವೆಸಗಿದ್ದರು. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಅತ್ಯಾ*ಚಾರ ಪ್ರಕರಣ ದಾಖಲಿಸಿದ್ದರು. ಆದರೆ ಬುಧವಾರ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಂಕಿತ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಈ ಮಹಿಳೆಗೆ ವಿವಾಹವಾಗಿತ್ತು. ವಿವಾಹದ ನಂತರ ಗಂಡನ ಮನೆಯಲ್ಲಿ ಅತ್ತೆ ಮಾವನೊಂದಿಗೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಆಕೆ ತನ್ನ ತವರಿಗೆ ಬಂದು ವಾಸ ಮಾಡುತ್ತಿದ್ದಳು. ಈ ವೇಳೆ ಅದೇ ಗ್ರಾಮದ ಕೆಲವರು ಆಕೆಗೆ ಪರಿಚಯವಾಗಿದ್ದು, ಪರಿಚಯದ ನೆಪದಲ್ಲಿ ಅತ್ಯಾ*ಚಾರವೆಸಗಿದ್ದಾರೆ. ಆಕೆಯ ಮೇಲೆ ಈ ಹಿಂದೆಯೂ ಆರೋಪಿಗಳು ರೇ*ಪ್ ಮಾಡಿದ್ದರು. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು.

ಗರ್ಭಿಣಿಗೆ ಗರ್ಭಪಾತದ ಮಾತ್ರೆ ನೀಡಿ ರೇಪ್:

ಆಕೆಯ ಕುಟುಂಬದವರು ಆ ಇಬ್ಬರು ಆರೋಪಿಗಳಿಗೆ ತಮ್ಮ ಮಗಳಿಂದ ದೂರ ಇರುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದೆವು ಎಂದಿದ್ದಾರೆ. ಮಹಿಳೆಯ ಕುಟುಂಬದವರ ಪ್ರಕಾರ, ಭಾನುವಾರ ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು. ಈ ವೇಳೆ ಆಕೆಯ ಮನವೊಲಿಸಿ ಹೊಲದ ಬಳಿ ಕರೆದೊಯ್ದ ಆರೋಪಿಗಳು ಆಕೆಗೆ ಗರ್ಭಪಾತದ ಮಾತ್ರೆ ನೀಡಿದ್ದಾರೆ. ಇದಾದ ನಂತರ ಈ ಪಾಪಿಗಳು ಆಕೆಯ ಮೇಲೆ ಒಬ್ಬರಾದ ನಂತರ ಒಬ್ಬರು ಅತ್ಯಾ*ಚಾರವೆಸಗಿದ್ದಾರೆ. ಈ ವಿಚಾರ ಒಬ್ಬರಿಗೆ ತಿಳಿದಾಗ ಅವರು ಆರೋಪಿಯನ್ನು ಪ್ರಶ್ನೆ ಮಾಡಿದಾಗ ಆತ ಮಹಿಳೆಯ ಕುಟುಂಬದವರಿಗೆಯೇ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತ ಮಹಿಳೆಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ 26ರ ಹರೆಯದ ಮಹಿಳೆ ಸಾವನ್ನಪ್ಪಿದ್ದಾಳೆ. ಸಂತ್ರಸ್ತೆಯ ತಂದೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ರಾಜೇಶ್ ಕಮಲ್ ತಿಳಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.