ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಮಾಜವಾದಿ ಪಕ್ಷದ ನಾಯಕ ಕಾಯಿಸ್ ಖಾನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಾಸಿಗೆ ಕೆಳಗೆ ಅಡಗಿಕೊಂಡಿದ್ದ ವೀಡಿಯೋ ಈಗ ವೈರಲ್ ಆಗಿದೆ.
ಪೊಲೀಸರ ನೋಡಿ ಹಾಸಿಗೆ ಕೆಳಗೆ ಅಡಗಿದ ಸಮಾಜವಾದಿ ನಾಯಕ
ಲಕ್ನೋ: ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಸಮಾಜವಾದಿ ಪಕ್ಷದ ನಾಯಕ ಕಾಯಿಸ್ ಖಾನ್ ಪೊಲೀಸರು ಬಂಧನಕ್ಕಾಗಿ ಮನೆಗೆ ಬಂದ ವೇಳೆ ಹಾಸಿಗೆ ಕೆಳಗೆ ಅಡಗಿ ಕುಳಿತಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತನ್ನ ವಿರುದ್ಧ ಹಲವು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮತ್ತು ಪಕ್ಷದ ಮಾಜಿ ಖಜಾಂಚಿ ಕಾಯಿಸ್ ಖಾನ್ ಕನೋಜ್ ಜಿಲ್ಲೆಗೆ ಪ್ರವೇಶಿಸದಂತೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆ ಆತನ ಬಂಧನಕ್ಕಾಗಿ ಪೊಲೀಸರು ಆತನ ಸೋದರನ ಮನೆಗೆ ಸರ್ಚ್ ವಾರಂಟ್ ಹಿಡಿದು ಹೋಗಿದ್ದಾಗ ಈ ಘಟನೆ ನಡೆದಿದೆ. ಕಾಯಿಸ್ ಖಾನ್ ತನ್ನ ಸಹೋದರನ ಮನೆಯ ಮೇಲಂತಸ್ತಿನಲ್ಲಿ ಹಾಸಿಗೆಯ ಕೆಳಗೆ ಅಡಗಿಕೊಂಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದು ಬಳಿಕ ಕೆಳಗಿಳಿಸಿ ಕರೆದುಕೊಂಡು ಹೋಗಿದ್ದಾರೆ.
ಹಾಸಿಗೆ ಕೆಳಗೆ ಅಡಗಿದ್ದ ಕಾಯಿಸ್ ಖಾನ್ ಬಂಧನ:
ಉತ್ತರ ಪ್ರದೇಶ ಕನೋಜ್‌ನಲ್ಲಿ ಈ ಘಟನೆ ನಡೆದಿದೆ. ಆತ ತನ್ನ ಸೋದರನ ಮನೆಯಲ್ಲಿ ಅಡಗಿ ಕುಳಿತುಕೊಂಡಿರುವ ಬಗ್ಗೆ ಖಚಿಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಪೊಲೀಸರು ಮನೆಗೆ ಬಂದ ವಿಚಾರ ತಿಳಿದ ಕಾಯಿಸ್ ಖಾನ್ ಮನೆಯ ಮೇಲಂತಸ್ತಿನಲ್ಲಿ ಹಾಸಿಗೆ ಕೆಳಗೆ ಮಲಗಿ ಅಡಗಿದ್ದಾನೆ. ಆದರೆ ಇಡೀ ಮನೆಯನ್ನು ಶೋಧ ನಡೆಸುವ ವೇಳೆ ಪೊಲೀಸರಿಗೆ ಆತ ಇರುವ ಖಚಿತ ಸುಳಿವು ಸಿಕ್ಕಿದ್ದು, ಆತನನ್ನು ಬಂಧಿಸಿದ್ದಾರೆ.
ಅಖಿಲೇಶ್ ಯಾದವ್ ಆಪ್ತನ ವೀಡಿಯೋ ಭಾರಿ ವೈರಲ್:
ಈ ಕಾಯಿಸ್ ಖಾನ್ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರಾಗಿದ್ದಾರೆ. ಹಲವು ಕ್ರಿಮಿನಲ್ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಕಾಯಿಸ್ ಖಾನ್‌ನ ಕನೋಜ್ ಜಿಲ್ಲೆಯಿಂದ ಗಡೀಪಾರಿಗೆ ಜುಲೈ 28ರಂದೇ ಕನೋಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಮೋಹನ್ ಅಗ್ನಿಹೋತ್ರಿ ಆದೇಶಿಸಿದ್ದರು. ಹೀಗಾಗಿ ನ್ಯಾಯಾಲಯ ಕೂಡಲೇ ಜಿಲ್ಲೆ ತೊರೆಯುವಂತೆ ಕಾಯಿಸ್ ಖಾನ್‌ಗೆ ಆದೇಶಿಸಿತ್ತು. ನಿಷೇಧದ ನಂತರ ಕಾಯಿಸ್ ಖಾನ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಬುಧವಾರ, ಆತ ಬಾಲಪೀರ್‌ನಲ್ಲಿರುವ ತನ್ನ ನೆರೆಹೊರೆಯಲ್ಲಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ ಹಿನ್ನೆಲೆ ಪೊಲೀಸರು ಆತನ ಸೋದರನ ಮನೆಗೆ ರೈಡ್ ಮಾಡಿ ಆತನನ್ನು ಬಂಧಿಸಿ ಮತ್ತೆ ಜಿಲ್ಲೆಯಿಂದ ಹೊರಗಟ್ಟಿದ್ದಾರೆ.
ಆರಂಭದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನ ನಿವಾಸ ಮತ್ತು ಆತನ ಸಹೋದರನ ಮನೆಯಲ್ಲಿ ಶೋಧ ನಡೆಸಿದರೂ ಆರಂಭದಲ್ಲಿ ಆತನ ಸುಳಿವು ಪತ್ತೆಯಾಗಲಿಲ್ಲ. ನಂತರ ಆತ ಒಂದು ಕೋಣೆಯಲ್ಲಿ ಹಾಸಿಗೆಯ ಹಿಂದೆ ಅಡಗಿಕೊಂಡಿದ್ದನ್ನು ಪತ್ತೆ ಹಚ್ಚಿ, ನಂತರ ಆತನನ್ನು ವಶಕ್ಕೆ ಪಡೆದರು.
ಆತ ತನ್ನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಆತನನ್ನು ಬಂಧಿಸಲಾಯಿತು. ನಂತರ ಆತ ನಮ್ಮಿಂದ ತಪ್ಪಿಸಿಕೊಳ್ಳಲು ಮೇಲಂತಸ್ತಿನಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಹೇಳಿದರು. ಈತನ ವಿರುದ್ಧ ಗೂಂಡಾ ಕಾಯ್ದೆಯ ಸೆಕ್ಷನ್ 3 ಮತ್ತು 10 ರ ಅಡಿಯಲ್ಲಿ ಪ್ರಕರಣ ಇದೆ. ಈ ವರ್ಷದ ಆರಂಭದಲ್ಲಿ, ಜನವರಿ 6 ರಂದು, ಕಾಯಿಸ್ ಖಾನ್ ಅವರ ಮಾಲೀಕತ್ವದ ಮದುವೆ ಮಂಟಪದ ಮೇಲೆ ಬುಲ್ಡೋಜರ್ ಹತ್ತಿಸಲಾಗಿತ್ತು. ಪುರಸಭೆ ಪ್ರದೇಶದಲ್ಲಿನ ರಸ್ತೆಯನ್ನು ಅಕ್ರಮವಾಗಿ ಬಳಸಿಕೊಂಡು ಅದರ ಮೇಲೆ ಲಿಂಟೆಲ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಜುಲೈ 25 ರಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕನೋಜ್‌ಗೆ ಭೇಟಿ ನೀಡಿ ಕಾಯಿಸ್ ಖಾನ್‌ನನ್ನು ಭೇಟಿಯಾಗಿದ್ದರು. ಇದಾದ ಮೂರು ದಿನಗಳ ನಂತರ, ಜುಲೈ 28 ರಂದು, ಕಾಯಿಸ್ ಖಾನ್ ಮೇಲೆ ಜಿಲ್ಲೆಯಿಂದ ಗಡೀಪಾರು ಆದೇಶ ಹೇರಲಾಯಿತು.
ಇದನ್ನೂ ಓದಿ: ಎಲಾ ಇವನಾ.. ತನಗೇ ದಾರಿ ತೋರಿಸಿದ ಫಾರೆಸ್ಟ್ ಆಫೀಸರ್‌ಗೆ ಲುಕ್ ಕೊಟ್ಟ ಕಾಡಾನೆ: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಜಪಾನ್ ಪ್ರಧಾನಿ ಶಿಗೇರು ಇಶಿಬಾ ರಾಜೀನಾಮೆ
