ಕಂಟೆಂಟ್ ಕ್ರಿಯೇಟರ್ ಕೆಲ್ಸ ಸುಲಭವಲ್ಲ. ಇದು ಮೇಲ್ನೋಟಕ್ಕೆ ಆಕರ್ಷಣೀಯವಾಗಿದ್ರೂ ದೀರ್ಘಾವಧಿಯಲ್ಲಿ ಅದ್ರಿಂದ ಸಮಸ್ಯೆ ಜಾಸ್ತಿ. 

ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer), ಕಂಟೆಂಟ್ ಕ್ರಿಯೇಟರ್ (Content Creator) ತೆರೆ ಮೇಲೆ ಸುಂದರವಾಗಿ ಕಾಣ್ತಾರೆ. ಲಕ್ಷಾಂತರ ಜನರನ್ನು ಆಕರ್ಷಿಸಲು, ವೀವ್ಸ್, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಅವರು ಸಾಕಷ್ಟು ಕಸರತ್ತು ಮಾಡ್ತಾರೆ. ನಾಳೆ ಕಂಟೆಂಟ್ ಏನು ನೀಡ್ಬೇಕು, ಹೇಗೆ ಬಳಕೆದಾರರನ್ನು ಆಕರ್ಷಿಸಬೇಕು ಎನ್ನುವ ಹುಳು ತಲೆಯಲ್ಲಿ ಸದಾ ಓಡಾಡ್ತಿರುತ್ತೆ. ಜೊತೆಗೆ ಸುಂದರವಾಗಿ ಕಾಣಲು ಒಂದಿಷ್ಟು ಮೇಕಪ್. ಇಡೀ ದಿನ ಮೊಬೈಲ್ ಹಿಡಿದು ವಿಡಿಯೋ ಶೂಟ್, ಎಡಿಟಿಂಗ್, ಪೋಸ್ಟಿಂಗ್, ಚಾಟಿಂಗ್ ಅಂತ ಬ್ಯುಸಿ ಇರುವ ಕಂಟೆಂಟ್ ಕ್ರಿಯೇಟರ್ಸ್ ಉತ್ತಮ ಹಣ ಸಂಪಾದನೆ ಏನೋ ಮಾಡ್ತಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಅವ್ರ ಮುಖ ಲಕ್ಷಣವೇ ಬದಲಾಗಲಿದೆ. ಈಗಿದ್ದಂತೆ ಸುಂದರವಾಗಿ ಅವ್ರು ಕಾಣೋದಿಲ್ಲ. ಬಾಗಿದ ಕುತ್ತಿಗೆ, ಉದ್ದನೆಯ ಬಾಯಿ, ಮುಖದ ಮೇಲೆ ಕಲೆ ಕಾಣಿಸಿಕೊಳ್ಳಲಿದೆ. ಹಾಗಂತ ನಾವು ಹೇಳ್ತಿಲ್ಲ. ತಜ್ಞರು, ಎಐ ಸಹಾಯದಿಂದ ಮಾಡೆಲ್ ಒಂದನ್ನು ಸಿದ್ಧಪಡಿಸಿ, ರಿಲೀಸ್ ಮಾಡಿದ್ದಾರೆ. ತಜ್ಞರು ಬಿಡುಡೆ ಮಾಡಿರುವ ಮಾಡೆಲ್ ಭಯ ಹುಟ್ಟಿಸುವ ಜೊತೆಗೆ ಎಚ್ಚರಿಕೆ ಗಂಟೆಯಾಗಿದೆ.

ಬದಲಾಗ್ತಿದೆ ಕಂಟೆಂಟ್ ಕ್ರಿಯೇಟರ್ ಲೈಫ್ ಸ್ಟೈಲ್ : Casino.org ನ ತಜ್ಞರು ವಿಲಕ್ಷಣ AI ಮಾದರಿಯನ್ನು ರಚಿಸಿದ್ದಾರೆ. 2050ರಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಹೇಗೆ ಕಾಣಿಸ್ತಾರೆ ಎಂಬುದನ್ನು ಇದ್ರಲ್ಲಿ ತೋರಿಸಲಾಗಿದೆ. ಮುಖದ ಮೇಲೆ ಕಲೆ, ಬೆನ್ನು ನೋವು ಹಾಗೂ ಕುತ್ತಿಗೆ ನೋವಿನಿಂದ ಬಳಲ್ತಾರೆ ಎಂಬುದನ್ನು ಇದ್ರಲ್ಲಿ ತೋರಿಸಲಾಗಿದೆ. ತಜ್ಞರ ಪ್ರಕಾರ, ಕಂಟೆಂಟ್ ಕ್ರಿಯೇಷನ್ ಕೆಲ್ಸ ಆಕರ್ಷಕವಾಗಿದ್ರೂ ಅದು ನಮ್ಮ ಲೈಫ್ ಸ್ಟೈಲ್ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ. ಕಂಟೆಂಟ್ ಕ್ರಿಯೇಟರ್ಸ್ ಪ್ರತಿ ವರ್ಷ ಹೆಚ್ಚುತ್ತಿರುವ ತಮ್ಮ ಫಾಲೋವರ್ಸ್ ಆಕರ್ಷಿಸಲು ಏನೆಲ್ಲ ಮಾಡ್ತಾರೆ ಎಂಬುದನ್ನು ಇದ್ರಲ್ಲಿ ಹೇಳಲಾಗಿದೆ.

ಮೂತ್ರ ವಿಸರ್ಜನೆಯ ನಂತ್ರ ಪ್ರತಿದಿನ ಹೀಗೆ ಮಾಡ್ತಿದ್ರೆ ಏನೆಲ್ಲಾ ಸಮಸ್ಯೆಗಳು ಬರ್ತವೆ ಗೊತ್ತಾ?

ತಜ್ಞರ ಪ್ರಕಾರ, ಸೌಂದರ್ಯ ಕಾಪಾಡಿಕೊಳ್ಳುವ ಒತ್ತಡ ಹೆಚ್ಚಾಗ್ತಿದೆ. ನಿರಂತರ ಕಂಟೆಂಟ್ ಕ್ರಿಯೆಟ್ ಮಾಡುವುದ್ರಿಂದ ದೇಹ ಮತ್ತು ಮನಸ್ಸಿನ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ತೀರ್ಮಾನಿಸಿದ್ದಾರೆ. Casino.org ಅವಾ ಎಂಬ ಭವಿಷ್ಯದ ಕಂಟೆಂಟ್ ಮಾಡೆಲ್ ಬಿಡುಗಡೆ ಮಾಡುವ ಮೂಲಕ, ಕಂಟೆಂಟ್ ಕ್ರಿಯೇಟರ್ ಅಭ್ಯಾಸ ಹೇಗೆ ಅವ್ರ ದೇಹದ ಮೇಲೆ ಪರಿಣಾಮ ಬೀರುತ್ತೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದೆ.

ಎಐ ಮಾಡೆಲ್ ಅವಾ ಎಚ್ಚರಿಕೆ : ಕಂಟೆಂಟ್ ಕ್ರಿಯೇಟರ್ಸ್ ಜಡ ಕೆಲಸ, ಸ್ಕ್ರೀನ್-ಸ್ಯಾಚುರೇಟೆಡ್ ಲೈಫ್ ಸ್ಟೈಲ್ ಅಕ್ಷರಶಃ ಅವರ ಮೇಲೆ ಪರಿಣಾಮ ಬೀರುತ್ತದೆ. ತಜ್ಞರು ಅವಾ ಮೂಲಕ ಎಚ್ಚರಿಕೆ ನೀಡಿದ್ದಾರೆ. ಅವಾ, ದೀರ್ಘಕಾಲದ ಸೋಶಿಯಲ್ ಮೀಡಿಯಾ ಮತ್ತು ಸ್ಮಾರ್ಟ್ಫೋನ್ ಬಳಕೆ ಮಾಡಿದ್ದರಿಂದ ಅಲ್ಲದೆ ರಿಂಗ್ ಲೈಟ್ಗಳ ಅಡಿಯಲ್ಲಿ ಗಂಟೆಗಟ್ಟಲೆ ಪೋಸ್ ನೋಡಿದ್ದರಿಂದ ಭುಜ ರೌಂಡ್ ಆಗಿ ಕಾಣ್ತಿದೆ. ತಲೆ ಮುಂದಕ್ಕೆ ಬಾಗಿದೆ. ಕುತ್ತಿಗೆಯಲ್ಲಿ ನಿರಂತರ ನೋವು ಉಂಟಾಗಿದೆ. ಇದನ್ನು ಟೆಕ್ ನೆಕ್ ಎಂದು ಕರೆಯಲಾಗುತ್ತದೆ. ಕೆಲವು ಸಂಶೋಧಕರು ಸ್ಮಾರ್ಟ್ಫೋನ್ ಬಳಸುವುದರಿಂದ ಅಸಮತೋಲಿತ ಕುತ್ತಿಗೆ ಭಂಗಿ ಅಥವಾ ಮಸ್ಕ್ಯುಲೋಸ್ಕೆಲಿಟಲ್ ಅಸ್ವಸ್ಥತೆ ಬೆಳವಣಿಗೆಗೆ ಕಾರಣವಾಗಬಹುದು ಎಂದಿದ್ದಾರೆ.

 ಕೆಲಸದಲ್ಲಿ stress ಆಯ್ತಾ? ತಲೆ ನೋವಾ? ತಲೆನೇ ಓಡ್ತಿಲ್ವಾ? ಫಟಾಫಟ್​ ರಿಸಲ್ಟ್​ಗೆ accupressure therapy

ಕಂಟೆಂಟ್ ಕ್ರಿಯೇಟರ್ಸ್ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಸದಾ ಕುತ್ತಿಗೆ ಕೆಳಗೆ ಹಾಕಿ ಕುಳಿತುಕೊಳ್ಳುವುದ್ರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ನೋವನ್ನು ಹೆಚ್ಚಿಸುತ್ತದೆ. ಚರ್ಮವನ್ನು ಹಾನಿಗೊಳಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿಲ್ಲ. ರಿಂಗ್ ಲೈಟ್ಗಳು ಮತ್ತು ಪರದೆಗಳಂತಹ ಎಲ್ಇಡಿ ದೀಪಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಚರ್ಮದ ವರ್ಣದ್ರವ್ಯ, ಸೂಕ್ಷ್ಮ ರೇಖೆಗಳು ಮತ್ತು ದೀರ್ಘಕಾಲೀನ ಉರಿಯೂತದಲ್ಲಿ ಬದಲಾವಣೆ ಆಗುತ್ತದೆ.