- Home
- Entertainment
- TV Talk
- 'ಅಣ್ಣಯ್ಯ'ದಲ್ಲಿ ಏನಾಗ್ತಿದೆ?..ನಮಗೆ ಇದ್ನೆಲ್ಲಾ ನೋಡಿ ರವಿಚಂದ್ರನ್ ಸಿನಿಮಾ ನೆನಪಾದ್ವು ಅಂದ್ರು ವೀಕ್ಷಕರು!
'ಅಣ್ಣಯ್ಯ'ದಲ್ಲಿ ಏನಾಗ್ತಿದೆ?..ನಮಗೆ ಇದ್ನೆಲ್ಲಾ ನೋಡಿ ರವಿಚಂದ್ರನ್ ಸಿನಿಮಾ ನೆನಪಾದ್ವು ಅಂದ್ರು ವೀಕ್ಷಕರು!
Annayya Kannada Serial: ಇಷ್ಟು ದಿನ ಅಣ್ಣಯ್ಯ ನೋಡಿ ಕೋಟಿಗೊಬ್ಬ ಸಿನಿಮಾ ನೆನಪಾಗ್ತಿದೆ ಎನ್ನುತ್ತಿದ್ದ ವೀಕ್ಷಕರು ಈಗ ಇದನ್ನ ಮತ್ತೆರೆಡು ಸಿನಿಮಾಗಳ ಲಿಸ್ಟ್‌ಗೆ ಸೇರಿಸಿದ್ದಾರೆ. ವೀಕ್ಷಕರೇಕೆ ಆ ಸಿನಿಮಾಗಳಿಗೆ ಹೋಲಿಸುತ್ತಿದ್ದಾರೆ. ರಾಣಿ-ಮನು ಮಾಡಿದ್ದಾರೂ ಏನು?. ಇಲ್ಲಿದೆ ನೋಡಿ ಡೀಟೇಲ್ಸ್.

ದಿನಕ್ಕೊಂದು ಬಗೆಯ ಕಾಮೆಂಟ್ಸ್
ಈ ಸೀರಿಯಲ್‌ಗಳ ಕಥೆಯೇ ಹಾಗಿದೆಯೋ ಅಥವಾ ವೀಕ್ಷಕರೇ ಹಾಗೆ ಊಹಿಸಿಕೊಳ್ಳುತ್ತಿದ್ದಾರೋ ಒಟ್ಟಿನಲ್ಲಿ 'ಅಣ್ಣಯ್ಯ' ಧಾರಾವಾಹಿ ನೋಡಿ ವೀಕ್ಷಕರು ದಿನಕ್ಕೊಂದು ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಹೌದು, ಇಷ್ಟು ದಿನ ಶಿವು ಹೊಸ ಅವತಾರ ನೋಡಿ ಕೋಟಿಗೊಬ್ಬ ಸಿನಿಮಾ ನೆನಪಾಗ್ತಿದೆ ಎನ್ನುತ್ತಿದ್ದ ವೀಕ್ಷಕರು ಈಗ ಇದನ್ನ ಮತ್ತೆರೆಡು ಸಿನಿಮಾಗಳ ಲಿಸ್ಟ್‌ಗೆ ಸೇರಿಸಿದ್ದಾರೆ.
ರೌಡಿ ರುದ್ರ ಶಿವು ಆಗಿದ್ಹೇಗೆ?
ಧಾರಾವಾಹಿಯಲ್ಲಿ ಶಿವು ಇಷ್ಟು ದಿನ ಸುಮ್ಮನಿದ್ದು, ಇದೀಗ ರುದ್ರನ ರೂಪ ತಾಳಿರುವುದು ವೀಕ್ಷಕರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಒಂದಲ್ಲ, ಎರಡಲ್ಲ ಅನೇಕ ಬಾರಿ ಶಿವು ಸೈಲೆಂಟ್ ಅಲ್ವೇ ಅಲ್ಲ, ಈ ಹಿಂದೆ ರೌಡಿಯಾಗಿದ್ದ ಅನ್ನೋದನ್ನ ಪ್ರೂವ್ ಮಾಡುತ್ತಲೇ ಬರುತ್ತಿದ್ದಾರೆ. ಸದ್ಯಕ್ಕಂತೂ ರೌಡಿ ರುದ್ರ ಶಿವು ಆಗಿದ್ಹೇಗೆ ಎಂಬುದನ್ನ ತೋರಿಸಿಲ್ಲ.
ರಾಣಿ-ಮನು ಮಾಡಿದ್ದಾರೂ ಏನು?
ಈಗ ಅಣ್ಣಯ್ಯನ ತಂಗಿ ರಾಣಿ ಮತ್ತು ಮನುವಿನ ವರ್ತನೆ ನೋಡಿದವರು ಓವರ್ ಆಕ್ಟಿಂಗ್ ಎಂದು ಕರೆದಿರುವುದಲ್ಲದೆ, ಜನಪ್ರಿಯ ಸಿನಿಮಾಗಳನ್ನ ನೆನಪು ಮಾಡ್ಕೊತ್ತಿದ್ದಾರೆ. ವೀಕ್ಷಕರೇಕೆ ಆ ಸಿನಿಮಾಗಳಿಗೆ ಹೋಲಿಸುತ್ತಿದ್ದಾರೆ. ರಾಣಿ-ಮನು ಮಾಡಿದ್ದಾರೂ ಏನು?. ಇಲ್ಲಿದೆ ನೋಡಿ ಡೀಟೇಲ್ಸ್.
ಅಲೆದಾಡುತ್ತಿದ್ದಾರೆ ರಾಣಿ-ಮನು
ಈಗ ರಾಣಿ-ಮನು ದೇವಸ್ಥಾನಕ್ಕೆಂದು ಬಂದಿದ್ದಾರೆ. ದೇವಸ್ಥಾನಕ್ಕೆ ಬರುವ ಮುನ್ನ ರಾಣಿ ಧಡೂತಿ ಅಸಾಮಿಯು ತಳ್ಳಲಿಕ್ಕೆ ಆಗದ ಜೀಪನ್ನು ತಳಿದ್ದು ವೀಕ್ಷಕರಿಗೆ ಮುಜುಗರ ತರಿಸಿತ್ತು. ಏತನ್ಮಧ್ಯೆ ದೇವಸ್ಥಾನಕ್ಕೆಂದು ಬಂದವರು ಹೇಗೋ ಆಕೆಯ ಭಾವನಿಂದ ತಪ್ಪಿಸಿಕೊಂಡು ಹಳ್ಳ-ಕೊಳ್ಳ, ನದಿ, ಬೆಟ್ಟ-ಗುಡ್ಡ-ಕಾಡು ಎಂದು ಅಲೆದಾಡುತ್ತಿದ್ದಾರೆ.
ಒಟ್ಟೊಟ್ಟಿಗೆ 3 ಸಿನಿಮಾಗಳು
ಈ ಅಲೆದಾಟದ ವೇಳೆ ಮನು-ರಾಣಿ ನಡೆದುಕೊಂಡ ರೀತಿ ನೋಡಿ "ಒಟ್ಟೊಟ್ಟಿಗೆ 3 filmಗಳು...ಕೋಟಿಗೊಬ್ಬ ಜೊತೆಗೆ ಈಗ ರವಿಚಂದ್ರನ್ ಅವರ ರಾಮಾಚಾರಿ ಮತ್ತು ಶ್ರೀ ರಾಮಚಂದ್ರ ಫಿಲಂ ರೀಕ್ರಿಯೇಟ್ ಮಾಡ್ತಾ ಇದ್ದಾರೆ ಎನ್ನುತ್ತಿದ್ದಾರೆ". ಅಷ್ಟೇ ಅಲ್ಲ, ನೀವು ಹೀಗೆ ಧಾರಾವಾಹಿ ತೋರಿಸುತ್ತಿದ್ದರೆ ನಾವು ನೋಡೋದನ್ನೇ ನಿಲ್ಲಿಸುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.
ವೀಕ್ಷಕರ ಕಾಮೆಂಟ್ಸ್
*ಈ ಸೀರಿಯಲ್‌ಗಳಿಗೆ ಸೀರಿಯಲ್ ಒಂದು ಮೂರು ಸಿನಿಮಾಗಳು ಅಂತ ಟೈಟಲ್ ಇಟ್ಟರೆ ಸೂಕ್ತ.
*ರಾಮಾಚಾರಿ, ಶ್ರೀರಾಮಚಂದ್ರ ನೆಕ್ಸ್ಟ್ ಯಾವ್ದು ಗುರು?.
*ಸಿನಿಮಾ ಸ್ಟೋರಿ ತಂದು ಜನಕ್ಕೆ ಮಂಕುಬೂದಿ ಬಳ್ದು ಮಂಗಗಳನ್ನಾಗಿ ಮಾಡ್ತಿದಾರೆ ಅಷ್ಟೇ.
*ಒಟ್ಟೊಟ್ಟಿಗೆ 3 film ಗಳು...ಕೋಟಿಗೊಬ್ಬ ಜೊತೆಗೆ ಈಗ ರವಿಚಂದ್ರನ್ ಅವರ ರಾಮಾಚಾರಿ and ಶ್ರೀ ರಾಮಚಂದ್ರ ಫಿಲಂ recreate ಮಾಡ್ತಾ ಇದ್ದಾರೆ.
*3 ಫಿಲ್ಮ್‌ಗಳನ್ನ ಒಂದೇ ಸೀರಿಯಲ್‌ನಲ್ಲಿ ನೋಡೋ ಸೌಭಾಗ್ಯ ಯಾರಿಗುಂಟು ಯಾರಿಗಿಲ್ಲ. ಇದು ನಮ್ಮ ಕನ್ನಡ ಸೀರಿಯಲ್ ಗಳ ತಾಕತ್ತು.
ಹೀಗೆ ಅನೇಕ ರೀತಿ ಕಾಮೆಂಟ್ಸ್ ಮಾಡಿದ್ದು, ಇದಕ್ಕೆ ಪ್ರತಿಯೊಬ್ಬರು ಸಹಮತ ವ್ಯಕ್ತಪಡಿಸಿರುವುದನ್ನ ನೀವಿಲ್ಲಿ ನೋಡಬಹುದು.