ಬಿಗ್ ಬಾಸ್ ಸೀಸನ್ 12 ಕ್ಕಾಗಿ ಕೊನೆಯಾಗಲಿವೆ ಈ ಎರಡು ಜನಪ್ರಿಯ ಧಾರಾವಾಹಿಗಳು
ಬಿಗ್ ಬಾಸ್ ಸೀಸನ್ 12 ಶೀಘ್ರದಲ್ಲೇ ಶುರುವಾಗಲಿದೆ. ಬಿಗ್ ಬಾಸ್ ಆಗಮನದಿಂದಾಗಿ ಕಲರ್ಸ್ ಕನ್ನಡ ವಾಹಿನಿಯ ಎರಡು ಧಾರಾವಾಹಿಗಳು ಮುಕ್ತಾಯಗೊಳ್ಳಲಿವೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ(Colors Kannada) ಇನ್ನು ಮುಂದೆ ಮನರಂಜನೆಯ ಹೊಸ ಗಾಳಿ ಬೀಸಲಿದೆ. ಯಾಕಂದ್ರೆ ಶೀಘ್ರದಲ್ಲೇ ಬಿಗ್ ಬಾಸ್ ಸೀಸನ್ 12 ಶುರುವಾಗಲಿದೆ. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಶುರುವಾಗಲಿರುವ ಬಿಗ್ ಬಾಸ್ ನೋಡೋದಕ್ಕೆ ವೀಕ್ಷಕರು ತುಂಬಾನೆ ಕುತೂಹಲದಿಂದ ಕಾಯುತ್ತಿದ್ದಾರೆ.
ಆದರೆ ಬಿಗ್ ಬಾಸ್ (Bigg Boss season 12) ಆರಂಭಕ್ಕೂ ಮುನ್ನ ಎಂದಿನಂತೆ ಎರಡು ಧಾರಾವಾಹಿಗಳು ತಮ್ಮ ಕಥೆಯನ್ನು ಮುಗಿಸಲೇ ಬೇಕು. ಈ ಬಾರಿ ಜನಪ್ರಿಯ ಎರಡು ಸೀರಿಯಲ್ ಗಳು ಕೊನೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಿದೆ. ಆದರೆ ಯಾವ ಧಾರಾವಾಹಿ ಎನ್ನುವ ಮಾಹಿತಿ ಮಾತ್ರ ಇಲ್ಲ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ದೃಷ್ಟಿ ಬೊಟ್ಟು, ಯಜಮಾನ, ರಾಮಾಚಾರಿ (Ramachaari), ನಿನಗಾಗಿ, ಭಾಗ್ಯಲಕ್ಷ್ಮೀ, ನಂದ ಗೋಕುಲ, ಭಾರ್ಗವಿ LLB, ಪ್ರೇಮ ಕಾವ್ಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಪ್ರೇಮಕಾವ್ಯ ಈಗಷ್ಟೆ ಆರಂಭವಾಗಿರೋದರಿಂದ ಆ ಧಾರಾವಾಹಿ ಮುಗಿಸೋದು ಡೌಟ್.
ಇನ್ನು ನಂದ ಗೋಕುಲ ಮತ್ತು ಭಾರ್ಗವಿ LLB (Bhargavi LLB) ಕೂಡ ಸದ್ಯದಲ್ಲಿ ಮುಗಿಸುವ ಸಾಧ್ಯತೆ ಇಲ್ಲ. ಯಾಕಂದ್ರೆ ಸೀರಿಯಲ್ ನಲ್ಲಿ ಇನ್ನು ತುಂಬಾ ಕಥೆ ಬಾಕಿ ಇದೆ. ಜೊತೆ ಸೀರಿಯಲ್ ಗಳು ಚೆನ್ನಾಗಿ ಓಡುತ್ತಿದೆ ಕೂಡ. ಜನ ಕಥೆಯನ್ನು ಪಾತ್ರಧಾರಿಗಳನ್ನು ಮೆಚ್ಚಿಕೊಂಡಿದ್ದಾರೆ.
ಇನ್ನು ಉಳಿದಿರೋದು ದೃಷ್ಟಿ ಬೊಟ್ಟು, ಯಜಮಾನ, ರಾಮಾಚಾರಿ, ನಿನಗಾಗಿ, ಭಾಗ್ಯಲಕ್ಷ್ಮೀ (Bhagyalakshmi) ಈ ಐದು ಧಾರಾವಾಹಿಗಳು. ಭಾಗ್ಯಲಕ್ಷ್ಮಿ ಧಾರಾವಾಹಿ ಶುರುವಾಗಿ ಈಗಲೇ ವರ್ಷಗಳು ಮೂರು ಕಳೆದಿದೆ. ಒಂದಕ್ಕೊಂದು ಕಥೆ ಸೇರಿಸಿ, ಸೇರಿಸಿ, ಇವತ್ತು ಹೊಸ ಕಥೆ ಪ್ರಸಾರವಾಗುತ್ತಿದೆ. ಹಾಗಾಗಿ ಈ ಧಾರಾವಾಹಿಯನ್ನು ಮುಗಿಸುವ ಸಾಧ್ಯತೆ ಇದೆ.
ದೃಷ್ಟಿ ಬೊಟ್ಟು, ಯಜಮಾನ, ರಾಮಾಚಾರಿ, ನಿನಗಾಗಿ ಧಾರಾವಾಹಿಗಳಲ್ಲಿ ಕೂಡ ಹೇಳಿಕೊಳ್ಳುವಂತಹ ತಿರುವುಗಳು ಏನು ಇಲ್ಲ. ಕಥೆ ಸುಮ್ಮನೆ ಸಾಗುತ್ತಿದೆ ಅಷ್ಟೇ. ಈಗಾಗಲೇ ಎಲ್ಲಾ ರೀತಿಯ ಟ್ವಿಸ್ಟ್ ಮತ್ತು ಟರ್ನ್ ಗಳು ಮುಗಿದು ಹೋಗಿವೆ. ಹಾಗಾಗಿ ಈ ನಾಲ್ಕು ಧಾರಾವಾಹಿಗಳಲ್ಲಿ ಯಾವುದು ಬೇಕಾದರೂ ಮುಕ್ತಾಯವಾಗಬಹುದು.
ಇನ್ನು ಜನರು ಹೇಳುವ ಪ್ರಕಾರ ಯಜಮಾನ ಮತ್ತು ರಾಮಾಚಾರಿ ಧಾರಾವಾಹಿಗಳು ಶೀಘ್ರದಲ್ಲೇ ಮುಕ್ತಾಯ ಕಾಣಲಿದೆಯಂತೆ. ರಾಮಾಚಾರಿ ಧಾರಾವಾಹಿಯಲ್ಲಿ ಕಥೆ ಏನು ಉಳಿದಿಲ್ಲ, ಆರಂಭದಲ್ಲಿ ಇದ್ದ ಆಸಕ್ತಿ ವೀಕ್ಷಕರಲ್ಲಿ ಈಗ ಇಲ್ವೇ ಇಲ್ಲ. ಹಾಗಾಗಿ ಈ ಎರಡು ಧಾರಾವಾಹಿಗಳು ಅಂತ್ಯ ಕಾಣಲಿವೆ ಎನ್ನಲಾಗುತ್ತಿವೆ.