ಮೌನ ಗುಡ್ಡೆಮನೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋದು ಫಿಕ್ಸ್…. ರಾಮಾಚಾರಿಯ ಕಥೆ ಏನು?
ರಾಮಾಚಾರಿ ಧಾರಾವಾಹಿ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಟಿಸುತ್ತಾ, ಜನ ಮನ ಸೆಳೆದ ನಟಿ ಮೌನ ಗುಡ್ಡೆಮನೆ, ಇದೀಗ ಸದ್ಯದಲ್ಲೇ ಆರಂಭವಾಗಲಿರುವ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ.

ಕಲರ್ಸ್ ಕನ್ನಡ (Colors Kannada)ವಾಹಿನಿಯ ಜನಪ್ರಿಯ ಧಾರಾವಾಹಿಯಲ್ಲಿ ಒಂದಾದ ರಾಮಾಚಾರಿ ಕಳೆದ ನಾಲ್ಕು ವರ್ಷಗಳಿಂದ ತನ್ನ ವಿಭಿನ್ನ ಕಥೆಯ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ರಾಮಾಚಾರಿ ಮತ್ತು ಚಾರು ಜೋಡಿಯನ್ನು ಜನ ಇಷ್ಟಪಟ್ಟಿದ್ದಾರೆ.
ಚಾರು ಪಾತ್ರವನ್ನು ವಿವಿಧ ಶೇಡ್ ಗಳಲ್ಲಿ ತೋರಿಸಲಾಗಿದ್ದು, ಹಾಗಾಗಿ ಆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ತಮಗೆ ಸಿಕ್ಕಿದಂತಹ ಪಾತ್ರವನ್ನು ತುಂಬಾನೆ ಅದ್ಭುತವಾಗಿ ನಿರ್ವಹಿಸಿದವರು ಮೌನ ಗುಡ್ಡೆಮನೆ (Mouna Guddemane).
ಆರಂಭದಲ್ಲಿ ಬಾಸ್ ಲೇಡಿಯಂತೆ ಖಡಕ್ ಅವತಾರದಲ್ಲಿ ಕಾಣಿಸಿಕೊಂಡ ಚಾರು, ಬಳಿಕ ರಾಮಾಚಾರಿಯ (Ramachari) ಪ್ರೀತಿಯಲ್ಲಿ ಸಾಫ್ಟ್ ಆದಳು, ನಂತರ ನಾರಾಯಣಾಚಾರ್ ಸೊಸೆಯಾಗಿ ಆ ಮನೆಗೆ ತಕ್ಕ ಸೊಸೆಯಾಗಿಯೂ ಒಗ್ಗಿಕೊಳ್ಳುವಂತಹ ಪಾತ್ರ ಮಾಡಿದ್ದರು ಮೌನ.
ಸೀರಿಯಲ್ ನಲ್ಲಿ ಇರುವಾಗಲೇ ನಟಿಗೆ ಚಂದನವನಕ್ಕೆ ಎಂಟ್ರಿ ಕೊಡುವ ಚಾನ್ಸ್ ಕೂಡ ಸಿಕ್ಕಿತು. ಮಡೆಯೂರು ಮನು ಜೊತೆ ಕುಲದಲ್ಲಿ ಕೀಳ್ಯಾವುದೋ (Kuladalli Kilyavudo)ಸಿನಿಮಾದಲ್ಲಿ ಮೌನ ನಟಿಸಿದ್ದರು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿಯಂತೆ ಮೌನ ಗುಡ್ಡೆಮನೆ ಶೀಘ್ರದಲ್ಲೇ ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Season 12)ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಶೀಘ್ರದಲ್ಲೇ ಶುರುವಾಗಲಿರುವ ಬಿಗ್ ಬಾಸ್ ಮನೆಗೆ ಮೌನ ಗುಡ್ಡೆಮನೆ ಎಂಟ್ರಿ ಕೊಡೋದು ಕನ್ಫರ್ಮ್ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಎಲ್ಲೂ ಅಧಿಕೃತ ಮಾಹಿತಿ ದೊರೆತಿಲ್ಲ. ಬಿಗ್ ಬಾಸ್ ಆರಂಭಕ್ಕೆ ಕಾದು ನೋಡಬೇಕು.
ಇನ್ನು ಮೌನ ದೊಡ್ಮನೆಗೆ ಎಂಟ್ರಿ ಕೊಡೋದೆ ನಿಜವಾದರೆ ರಾಮಾಚಾರಿ ಸೀರಿಯಲ್ ಕೊನೆಯಾಗೋದು ಖಚಿತಾ. ಸದ್ಯ ಕಥೆ ಸುತ್ತಿ ಬಳಸಿ ಕೃಷ್ಣ ಸಾವಿನ ಹಿಂದೆ ಸುತ್ತಾಡುತ್ತಿದೆ. ಆ ಕೊಲೆಯ ಸತ್ಯ ತಿಳಿಯಲು ರಾಮಾಚಾರಿ ಚಾರು ಒದ್ದಾಡುತ್ತಿದ್ದಾರೆ. ಕೊನೆಗೆ ಕೃಷ್ಣನ ಸಾವಿಗೆ ನ್ಯಾಯ ಕೊಡಿಸಿ, ಸೀರಿಯಲ್ ಕೊನೆಯಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.