ನೀಚರಿಗೆ ಶಿವು ತಂಗಿ ರಾಣಿಯ ಮಾಸ್ಟರ್ ಸ್ಟ್ರೋಕ್: ಇದು ಅತ್ತಿಗೆ ಪಾರು ಹೇಳಿ ಕೊಟ್ಟ ಪಾಠ
ಅಣ್ಣಯ್ಯ ಸೀರಿಯಲ್‌ನಲ್ಲಿ ರಾಣಿಯ ಚಾಣಾಕ್ಷತನದಿಂದಾಗಿ ಕುಟುಂಬದ ನಿಜವಾದ ಬಣ್ಣ ಬಯಲಾಗುತ್ತದೆ. ರಾಣಿ ಕೊಟ್ಟ ಮಾಸ್ಟರ್ ಸ್ಟ್ರೋಕ್ ಏನು? Shivu s sister Rani s master stroke This is a lesson she taught her paaru

ರಾಣಿ ಮಾಸ್ಟರ್ ಸ್ಟ್ರೋಕ್
ಮಾಸ್ತಿಕೊಪ್ಪಲಿನ ನೀಚರಿಗೆ ಶಿವು ತಂಗಿ ರಾಣಿ ಮಾಸ್ಟರ್ ಸ್ಟ್ರೋಕ್ ನೀಡಿದ್ದಾಳೆ. ಹೌದು, ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದೇವೆ ಎಂದು ತಿಳಿದು ನಾಗೇಗೌಡ ಮತ್ತು ಆತನ ಕುಟುಂಬ ತಮ್ಮ ನಿಜವಾದ ಮುಖವನ್ನು ರಾಣಿಗೆ ತೋರಿಸಿದ್ದಾರೆ.
ಸ್ಟೋರ್ ರೂಮ್‌ಗೆ ಶಿಫ್ಟ್
ಆಸ್ತಿ ತಮಗೆ ಸಿಕ್ತು ಎಂದು ತಿಳಿದಿರೋ ನಾಗೇಗೌಡ, ಆತನ ಹೆಂಡ್ತಿ ಮತ್ತು ಅಜ್ಜಿ ಎಲ್ಲರೂ ರಾಣಿ ಜೊತೆ ಆಕೆಯ ಗಂಡ ಹಾಗೂ ಅತ್ತೆಯನ್ನು ಸ್ಟೋರ್ ರೂಮ್‌ಗೆ ಶಿಫ್ಟ್ ಮಾಡಿದ್ದಾರೆ. ಸಹಿ ಮಾಡಬೇಡ ಅಂತ ಹೇಳಿದ್ರೂ ನನ್ನ ಮಾತು ಕೇಳಿಲಿಲ್ಲ ಎಂದು ರಾಣಿಗೆ ಹೇಳುತ್ತಾ ಅತ್ತೆ ಕಣ್ಣೀರು ಹಾಕ್ತಾರೆ. ಮನುನ ಮದುವೆಯಾಗಿ ಬರೋ ಹುಡುಗಿಗೆ ಎಲ್ಲಾ ಆಸ್ತಿ ಬರಬೇಕು ಅನ್ನೋದು ನನ್ನ ಗಂಡನ ಆಸೆಯಾಗಿತ್ತು ಎಂದು ಅತ್ತೆ ಹೇಳುತ್ತಾರೆ
ಅತ್ತಿಗೆ ಪಾರು ಪಾಠ
ನನ್ನ ಮದುವೆ ಸರ್ಟಿಫಿಕೇಟ್‌ಗೆ ಮಾತ್ರ ಕರೆಕ್ಟ್ ಆಗಿ ಸಹಿ ಹಾಕಿದ್ದೇನೆ. ಉಳಿದ ಎಲ್ಲಾ ಪತ್ರಗಳಿಗೆ ನಕಲಿ ಸಹಿ ಹಾಕಿದ್ದೇನೆ. ನಿಮ್ಮ ಆಸ್ತಿ ನಾಯಿ-ನರಿಗಳಿಗೆ ಸಿಗದಂತೆ ನಾನು ಮಾಡುತ್ತೇನೆ ಎಂದು ರಾಣಿ ಶಪಥ ಮಾಡಿದ್ದಾಳೆ. ಸದ್ದು ಗದ್ದಲದ ಯುದ್ಧದ ಬಗ್ಗೆ ಅಣ್ಣಾ ಹೇಳಿಕೊಟ್ರೆ, ಸದ್ದು ಗದ್ದಲವಿಲ್ಲದೇ ಯುದ್ಧ ಹೇಗೆ ಮಾಡಬೇಕು ಅನ್ನೋದನ್ನ ಅತ್ತಿಗೆ ಪಾರು ಹೇಳಿಕೊಟ್ಟಿದ್ದಾರೆ ಎಂದು ರಾಣಿ ಹೇಳಿದ್ದಾಳೆ. ಈ ವಿಷಯ ಕೇಳಿ ರಾಣಿ ಅತ್ತೆ ನಿಟ್ಟುಸಿರು ಬಿಟ್ಟಿದ್ದಾಳೆ.
ರಾಣಿ ಸಹಿ
ರಾಣಿ ಸಹಿ ಮಾಡಿದ ಬಳಿಕ ಅಜ್ಜಿ, ನಾಗೇಗೌಡ ಸೇರಿದಂತೆ ಎಲ್ಲರೂ ತಾವ್ಯಾಕೆ ನಿನ್ನೊಂದಿಗೆ ಚೆನ್ನಾಗಿದ್ದೀವಿ ಎಂಬ ಸತ್ಯವನ್ನು ಹೇಳಿದ್ದಾರೆ. ಆದರೆ ರಾಣಿ ಮಾಡಿರೋದು ನಕಲಿ ಸಹಿ ಅಂತ ತಿಳಿದ್ರೆ ನೀಚರು ಮುಂದೆ ಏನ್ ಮಾಡ್ತಾರೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ: ಜೀ ಕನ್ನಡ ಧಾರಾವಾಹಿಗಳಲ್ಲಿ ಯಾರೂ ಊಹಿಸಲಾರದ ತಿರುವು... ಕಾದಿದೆ ಭರ್ಜರಿ ಸಂಚಿಕೆ
ಕ್ಷಮೆ ಕೇಳಿದ ವೀಕ್ಷಕ
ಈ ಪ್ರೋಮೋ ನೋಡಿದ ನೆಟ್ಟಿಗರು ರಾಣಿ ಬಳಿ ಕ್ಷಮೆ ಕೇಳಿ ಕಮೆಂಟ್ ಮಾಡಿದ್ದಾರೆ. ರಾಣಿ... ರಾಣಿ ನಾವು ನಿನ್ನ ಮೇಲೆ ಇಟ್ಟಿದ್ದ ನಂಬಿಕೆನ ನೀನು ಸುಳ್ಳು ಮಾಡಲಿಲ್ಲ ಕಣವ್ವಾ. ಬದಲಾಗಿ ನಾವೇ ನಿನ್ನಾ ತಪ್ಪು ತಿಳಿದುಕೊಂಡು ಚೆನ್ನಾಗಿ ಬೈದುಕೊಂಡು ಬಿಟ್ವಿ ದಯವಿಟ್ಟು ನಮ್ಮನ್ನ ಕ್ಷಮಿಸಿ ಬಿಡಮ್ಮ ಎಂದಿದ್ದಾರೆ. ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ ರಾಣಿಗೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಇರೋದೇ ಎರಡು ಅಕ್ಷರ. ಅದರಲ್ಲಿ ತಪ್ಪು ತಪ್ಪು ಸೈನ್ ಹೆಂಗೆ ಹಾಕಿದಿಯವ್ವ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಮಗು ಮಾಡ್ಕೊಳ್ಳಲ್ಲ ಅಂದ ಅಣ್ಣಯ್ಯ, ಈಗ ಫಸ್ಟ್‌ನೈಟ್ ಮಾಡ್ಕೊಳ್ತಿದ್ದಾರಲ್ಲಾ, ಕಥೆ ಬೇರೇ ಉಂಟು ಸ್ವಾಮಿ!