Annayya Kannada Serial Episode: ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಈಗತಾನೇ ರಾಣಿ ಮದುವೆ ಆಗಿದೆ. ಆದರೆ ಎರಡು ಡಿವೋರ್ಸ್‌ ಆಗೋ ಎಲ್ಲ ಸೂಚನೆಗಳು ಕಾಣುತ್ತಿವೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ( Annayya Serial ) ನನ್ನ ತಂಗಿಯಂದಿರು ಒಳ್ಳೆಯ ಮನೆ ಸೇರಬೇಕು, ಚೆನ್ನಾಗಿರಬೇಕು ಅಂತ ಮಾರಿಗುಡಿ ಶಿವು ನಿತ್ಯವೂ ಬಯಸೋದಲ್ಲದೆ, ಕಷ್ಟಪಡ್ತಿದ್ದಾನೆ. ಪಾರುಳನ್ನು ಅನಿರೀಕ್ಷಿತವಾಗಿ ಮದುವೆಯಾದರೂ ಕೂಡ, ತಂಗಿಯಂದಿರ ಜೀವನ ಸರಿ ಹೋಗೋವರೆಗೂ ಮಗು ಬೇಡ ಅಂತ ಫಿಕ್ಸ್‌ ಆಗಿದ್ದಾನೆ. ಹೀಗಿರುವಾಗ ಇಬ್ಬರು ತಂಗಿಯರ ಜೀವನ ಹಳ್ಳ ಹಿಡಿದಿದೆ ಅಂತ ಗೊತ್ತಾದರೆ?

ರಶ್ಮಿ- ಜಿಮ್‌ ಸೀನ ಸಂಸಾರ ಶುರು ಆಗಿಲ್ಲ!

ಅಂದಹಾಗೆ ರಶ್ಮಿ ಮದುವೆ ಫಿಕ್ಸ್‌ ಆಗಿತ್ತು. ಇನ್ನೇನು ಮದುವೆ ಮಂಟಪದಲ್ಲಿ ಸಮಸ್ಯೆ ಆಗಿ ಹುಡುಗ ಮದುವೆ ಆಗೋದಿಲ್ಲ ಅಂತ ಹೇಳಿದನು. ಆಗ ಜಿಮ್‌ ಸೀನನ ಬಳಿ ಮದುವೆ ಆಗು ಅಂತ ಎಲ್ಲರೂ ಒತ್ತಾಯ ಮಾಡಿದರು. ಈ ಮದುವೆಗೆ ರಶ್ಮಿ ಕೂಡ ಒಪ್ಪಿಗೆ ನೀಡಿದಳು. ಆದರೆ ಜಿಮ್‌ ಸೀನನಿಗೆ ಪಿಂಕಿ ಎನ್ನೋ ಲವ್ವರ್‌ ಇರೋ ವಿಷಯ ಯಾರಿಗೂ ಗೊತ್ತೇ ಇರಲಿಲ್ಲ. ಮದುವೆಯಾದ್ಮೇಲೂ ಕೂಡ ಜಿಮ್‌ ಸೀನ, ಇನ್ನೂ ಪಿಂಕಿಗೆ ಸಮಾಧಾನ ಮಾಡಿಕೊಂಡು ಬರುತ್ತಿದ್ದಾನೆ.

ಒಮ್ಮೆ ಪಿಂಕಿ ವಿರುದ್ಧ ಸಿಡಿದೆದ್ದಿದ್ದ ಸೀನ, ನಾನು ನಿನ್ನ ಮದುವೆ ಆಗೋದಿಲ್ಲ ಅಂತ ಖಡಕ್‌ ಆಗಿ ಒಮ್ಮೆಯೂ ಹೇಳಿಲ್ಲ. ಯಾರು ಎಷ್ಟೇ ಬುದ್ಧಿ ಹೇಳಿದರೂ ಕೂಡ ಪಿಂಕಿ ಮಾತ್ರ ಅವನ ಬೆನ್ನು ಬಿಡ್ತಿಲ್ಲ. ಶಿವು, ಪಾರು ಇಬ್ಬರೂ ಸೇರಿಕೊಂಡು ಜಿಮ್‌ ಸೀನ-ಪಿಂಕಿಗೆ ಬುದ್ಧಿ ಹೇಳಿದ್ರೂ ಇವರು ಕೇಳೋ ಥರ ಕಾಣ್ತಿಲ್ಲ. ಜಿಮ್‌ ಸೀನ-ಪಿಂಕಿ ಲವ್‌ ಸ್ಟೋರಿ ಶಿವುಗೆ ಗೊತ್ತಾದರೆ ಅವನು ಮಾತ್ರ ಸುಮ್ಮನಿರೋದಿಲ್ಲ. ಒಟ್ಟಿನಲ್ಲಿ ಮುಂದೆ ಏನಾಗತ್ತೋ ಏನೋ!

ರಾಣಿ- ಮನುಗೌಡ್ರು

ರಾಣಿಯನ್ನು ಮನು ಗೌಡ್ತಿ ಮನೆಗೆ ಸೊಸೆಯಾಗಿ ಕಳಿಸಿಕೊಡಲಾಗಿದೆ. ಮನು ಶತದಡ್ಡ ಎನ್ನೋದನ್ನು ಮುಚ್ಚಿಟ್ಟು ಈ ಮದುವೆ ಮಾಡಲಾಗಿದೆ. ರಾಣಿ ತಾಯಿ, ಮನು ಬಳಿ ನನ್ನ ಮಗಳನ್ನು ಮದುವೆ ಆಗಬೇಡ ಅಂತ ಬೇಡಿಕೊಂಡರೂ ಕೂಡ ಅವನು ಕೇಳಲಿಲ್ಲ. ಇನ್ನೊಂದು ಕಡೆ ಮನು ತಾಯಿ ಕೂಡ, ನನ್ನ ಮನೆ, ಮಗನ ಜೀವನ ಬದಲಾಗತ್ತೆ ಅಂತ ಅವಳು ಸುಮ್ಮನೆ ಇದ್ದಳು. ಮನು ಆರೋಗ್ಯ ಸರಿ ಇಲ್ಲದಿರೋದು ಪಾರುಗೆ ಡೌಟ್‌ ತರಿಸಿತ್ತು. ಈಗ ಮನು ತಾಯಿ ಎಲ್ಲ ಸತ್ಯವನ್ನು ರಾಣಿ ಬಳಿ ಹೇಳಿದ್ದಾಳೆ. ಈ ವಿಷಯ ಕೇಳಿ ರಾಣಿಗೆ ಸಿಡಿಲು ಬಡಿದ ಹಾಗೆ ಆಗಿದೆ. ಇನ್ನೊಂದು ಕಡೆ ಪಾರು ಕೂಡ ಈ ಸತ್ಯವನ್ನು ಕೇಳಿಸಿಕೊಂಡಿದ್ದಾಳೆ.

ನಿನ್ನ ಅಣ್ಣನ ಬಳಿ ಎಲ್ಲ ವಿಷಯ ಹೇಳ್ತೀನಿ, ನಿನಗೆ ಅನ್ಯಾಯ ಆಗೋದಿಕ್ಕೆ ಬಿಡೋದಿಲ್ಲ ಅಂತ ಪಾರು ಹೇಳಿದ್ದಾಳೆ. ಈಗ ರಾಣಿ ಏನ್‌ ಮಾಡ್ತಾಳೆ ಎಂದು ಕಾದು ನೋಡಬೇಕಿದೆ. ರಾಣಿ ನೋಡಲು ಮೃದು ಎನ್ನೋ ಥರ ಕಾಣಿಸಿದರೂ ಕೂಡ, ರಫ್‌, ರೆಬೆಲ್.‌ ರಾಣಿ ತಿರುಗಿ ಬಿದ್ದರೆ ಮನು ಮನೆಯಲ್ಲಿರೋ ಕುತಂತ್ರಿಗಳೆಲ್ಲ ತೆಪ್ಪಗೆ ಬಿದ್ದಿರೋ ಥರ ಆಗುತ್ತದೆ. ಬಂದಿದ್ದನ್ನು ಎದುರಿಸಬೇಕು ಅಂತ ರಾಣಿ ಸಿಡಿದು ನಿಲ್ತಾಳಾ ಅಥವಾ ಅಣ್ಣನ ಮನೆಗೆ ಹೋಗಿ ಡಿವೋರ್ಸ್‌ಗೆ ಅಪ್ಲೈ ಮಾಡ್ತಾಳಾ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ರಾಣಿ ಪಾತ್ರದಲ್ಲಿ ರಾಘವಿ ಗೌಡ, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್‌, ಶಿವು ಪಾತ್ರದಲ್ಲಿ ವಿಕಾಶ್‌ ಉತ್ತಯ್ಯ, ಮನು ಪಾತ್ರದಲ್ಲಿ ತೇಜಸ್‌ ಗೌಡ, ಜಿಮ್‌ ಸೀನ ಪಾತ್ರದಲ್ಲಿ ಸುಷ್ಮಿತ್‌ ಜೈನ್‌, ರಶ್ಮಿ ಪಾತ್ರದಲ್ಲಿ ಪ್ರತೀಕ್ಷಾ ಶ್ರೀನಾಥ್‌, ಪಿಂಕಿ ಪಾತ್ರದಲ್ಲಿ ಸಹನಾ ಶೆಟ್ಟಿ ಅವರು ನಟಿಸುತ್ತಿದ್ದಾರೆ.