- Home
- Entertainment
- TV Talk
- Annayya Serial Manu: ಅಣ್ಣಯ್ಯ ಧಾರಾವಾಹಿ ಪೆದ್ದ ಮನು ರಿಯಲ್ ಲೈಫ್‌ನಲ್ಲಿ ತುಂಬ ಬುದ್ಧಿವಂತ! ಶಿಕ್ಷಣ ಏನು?
Annayya Serial Manu: ಅಣ್ಣಯ್ಯ ಧಾರಾವಾಹಿ ಪೆದ್ದ ಮನು ರಿಯಲ್ ಲೈಫ್‌ನಲ್ಲಿ ತುಂಬ ಬುದ್ಧಿವಂತ! ಶಿಕ್ಷಣ ಏನು?
ಅಣ್ಣಯ್ಯ ಧಾರಾವಾಹಿಯಲ್ಲಿ ಸದ್ಯ ರಾಣಿಯನ್ನು ಮನು ಮದುವೆ ಆಗಿದ್ದಾನೆ. ಇವನು ದಡ್ಡ ಎನ್ನೋದು ಇನ್ನೂ ಶಿವುಗೆ ಗೊತ್ತಾಗಿಲ್ಲ. ಈ ಮದುವೆ ತಪ್ಪಿಸಲು ಎಲ್ಲರೂ ಪ್ರಯತ್ನಪಟ್ಟರು. ಆದರೂ ಕೂಡ ಮದುವೆ ನಿಲ್ಲಲಿಲ್ಲ.

ರಾಣಿ ಸಿಕ್ಕಾಪಟ್ಟೆ ಗಟ್ಟಿಗಿತ್ತಿ. ಇವಳಿಂದ ನನ್ನ ಮನೆ, ಮಗ ಉಳಿಯುತ್ತಾನೆ ಅಂತ ಮನು ತಾಯಿ ಕೂಡ ಸುಮ್ಮನೆ ಇದ್ದಾಳೆ. ಯಾವಾಗ ಮನು ಹುಚ್ಚ ಎನ್ನೋದು ಶಿವುಗೆ ಗೊತ್ತಾಗುತ್ತದೆಯೋ ಆಗ ಅವನು ಏನು ಮಾಡ್ತಾನೆ ಎಂದು ಕಾದು ನೋಡಬೇಕಿದೆ.
'ಅಣ್ಣಯ್ಯ' ಧಾರಾವಾಹಿಯ ಮನು ಪಾತ್ರದಲ್ಲಿ ತೇಜಸ್ ಗೌಡ ನಟಿಸುತ್ತಿದ್ದಾರೆ. ಅವರು ನಾಟಕಗಳಲ್ಲಿ ಅಭಿನಯಿಸಿದ್ದರು. ನಾಟಕ ತಂಡದಲ್ಲಿ ಅವರು ಆಕ್ಟಿವ್ ಆಗಿದ್ದಾರೆ.
'ಅಣ್ಣಯ್ಯ' ಧಾರಾವಾಹಿ ನಟ ತೇಜಸ್ ಗೌಡ ಅವರು ಮೂಲತಃ ಬೆಂಗಳೂರಿನವರು. ಅವರಿಗೆ ನಟನೆ ಅಂದರೆ ತುಂಬ ಇಷ್ಟ. ಅಂದಹಾಗೆ ಅವರು ಬಿಸಿಎ ಓದಿದ್ದಾರೆ.
ಈ ಹಿಂದೆ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಹಾಗೂ ಉಧೋ ಉಧೋ ಶ್ರೀ ರೇಣುಕಾಯೆಲ್ಲಮ್ಮ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ತಮಿಳಿನ ಧಾರಾವಾಹಿಯಲ್ಲಿಯೂ ಕೂಡ ನಟಿಸಿದ್ದರು. ಆ ಧಾರಾವಾಹಿಯಲ್ಲಿ ಮಾಳವಿಕಾ ಅವಿನಾಶ್ ಅಭಿನಯಿಸಿದ್ದರು.
ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರ ಮಾಡಬೇಕು, ಜನರಿಗೆ ಹತ್ತಿರ ಆಗಬೇಕು, ದೊಡ್ಡ ಕಲಾವಿದರ ಜೊತೆ ನಟಿಸಬೇಕು ಎಂದು ತೇಜಸ್ ಕನಸು ಇಟ್ಟುಕೊಂಡಿದ್ದಾರಂತೆ.