- Home
- Entertainment
- TV Talk
- OTT Releases This week: ಥಿಯೇಟರ್‌ನಲ್ಲಿ ಕೋಟಿ ಕೋಟಿ ಬಾಚಿದ ಸಿನಿಮಾಗಳು ಓಟಿಟಿಗೆ ಬಂದಾಯ್ತು!
OTT Releases This week: ಥಿಯೇಟರ್‌ನಲ್ಲಿ ಕೋಟಿ ಕೋಟಿ ಬಾಚಿದ ಸಿನಿಮಾಗಳು ಓಟಿಟಿಗೆ ಬಂದಾಯ್ತು!
ಇತ್ತೀಚೆಗೆ ತೆರೆ ಕಂಡು ಸೂಪರ್ ಹಿಟ್ ಆಗಿರುವ ಸಿನಿಮಾಗಳು ಈಗ ಒಟಿಟಿಗೆ ಬಂದಿವೆ. ಅವು ಯಾವುವು?

Bakasura Restaurant
ರೆಸ್ಟೋರೆಂಟ್ ಆರಂಭಿಸಲು ಫ್ರೆಂಡ್ಸ್ ಒಂದಾಗುತ್ತಾರೆ. ಆದರೆ ಜಾಗ ಭೂತಗಳಿಂದ ಕೂಡಿದೆ ಎಂದು ಗೊತ್ತಾದಾಗ ಕಥೆ ತಿರುವು ಪಡೆದುಕೊಳ್ಳುವುದು. ಪ್ರವೀಣ್, ಹರ್ಷ ಚಂದ್ರು, ಜೈ ಕೃಷ್ಣ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 12ರಂದು ಸನ್ ನೆಕ್ಸ್ಟ್‌ನಲ್ಲಿ ಸಿನಿಮಾ ರಿಲೀಸ್ ಆಗುವುದು.
Do You Wanna Partner
ತಮನ್ನಾ ಭಾಟಿಯಾ, ಡಯಾನಾ ಪೆಂಟಿ ನಟನೆಯ ಸಿನಿಮಾವಿದು. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸೆಪ್ಟೆಂಬರ್ 12ರಿಂದ ಪ್ರಸಾರ ಆಗಲಿದೆ. ಇಬ್ಬರು ಸ್ನೇಹಿತರ ಕಥೆ ಇಲ್ಲಿದೆ.
Her Mother’s Killer Season 2
ತಾಯಿ ಮರ್ಡರ್ ಆಗಿ 30 ವರ್ಷಗಳು ಆದ ಬಳಿಕ ಕೊಲಂಬಿಯನ್ ಪ್ರಧಾನಿ ಹುದ್ದೆಯ ತಂತ್ರಗಾರಿಕೆ ಬದಲಾಗುವುದು. ಸೆಪ್ಟೆಂಬರ್ 8ರಂದು ನೆಟ್‌ಫ್ಲಿಕ್‌ನಲ್ಲಿ ರಿಲೀಸ್ ಆಗಲಿದೆ.
ಸೈಯಾರಾ ಸಿನಿಮಾ
ಸೈಯಾರಾ ಸಿನಿಮಾ ಈಗಾಗಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಬಾಲಿವುಡ್‌ನ ಹಿಟ್ ಸಿನಿಮಾವಿದು. ಚಿತ್ರರಂಗದಲ್ಲಿ ಹೆಸರು ಮಾಡಲು ಬಯಸುವ ಸಂಗೀತಗಾರನ ಕಥೆ ಇಲ್ಲಿದೆ. ಅಹಾನಾ ಪಾಂಡೆ, ಅನೀಲ್ ಪಡ್ಡ ಅವರು ನಟಿಸಿರುವ ಸಿನಿಮಾವಿದು. ಸೆಪ್ಟೆಂಬರ್ 12ಕ್ಕೆ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
ಕೂಲಿ ಸಿನಿಮಾ
ಗೆಳೆಯನ ಸಾವಿಗೆ ಕಾರಣ ಏನು ಎಂದು ತಿಳಿದುಕೊಳ್ಳಲು ನಿವೃತ್ತಿಯಾದ ಕೂಲಿ ರೆಡಿ ಪ್ರಯತ್ನಪಡುತ್ತಾನೆ. ಆಗ ಅವನಿಗೆ ಸತ್ಯ ದರ್ಶನ ಆಗುವುದು. ಇದೇ ಈ ಸಿನಿಮಾ ಕಥೆ. ರಜನೀಕಾಂತ್, ನಾಗಾರ್ಜುನ, ಶ್ರುತಿ ಹಾಸನ್, ಸೌಬೀನ್ ಶಹೀರ್, ಉಪೇಂದ್ರ, ರಚಿತಾ ರಾಮ್ ಮುಂತಾದವರು ನಟಿಸಿದ್ದಾರೆ. Amazon Prime Video ಅಲ್ಲಿ ಸೆಪ್ಟೆಂಬರ್ 10ರಂದು ರಿಲೀಸ್ ಆಗುವುದು.
ಸು ಫ್ರಂ ಸೋ ಸಿನಿಮಾ
ಸು ಫ್ರಂ ಸೋ ಸಿನಿಮಾದಲ್ಲಿ ಸುಲೋಚನಾ ಸಾವಿನ ಕತೆ. ಇದು ಕನ್ನಡದ ಸೂಪರ್ ಹಿಟ್ ಸಿನಿಮಾ. ಅಷ್ಟೇ ಅಲ್ಲದೆ ನಗಿಸಿ ಹೊಟ್ಟೆ ಹುಣ್ಣಾಗಿಸುವ ಸಿನಿಮಾ. Jio Hotstar ಅಲ್ಲಿ ಸೆಪ್ಟೆಂಬರ್ ರಿಂದ ಪ್ರಸಾರ ಆಗಿದೆ. ರಾಜ್ ಬಿ ಶೆಟ್ಟಿ, ಜೆಪಿ ತುಮ್ಮಿನಾಡ್ ಮುಂತಾದವರು ನಟಿಸಿರುವ ಸಿನಿಮಾ.