- Home
- Entertainment
- Sandalwood
- From Box Office Flops to OTT Hits: ಥಿಯೇಟರ್‌ನಲ್ಲಿ ಸೌಂಡ್ ಮಾಡದೆ, ಒಟಿಟಿಯಲ್ಲಿ ಹಿಟ್ ಆದ ಕನ್ನಡ ಸಿನಿಮಾಗಳಿವು
From Box Office Flops to OTT Hits: ಥಿಯೇಟರ್‌ನಲ್ಲಿ ಸೌಂಡ್ ಮಾಡದೆ, ಒಟಿಟಿಯಲ್ಲಿ ಹಿಟ್ ಆದ ಕನ್ನಡ ಸಿನಿಮಾಗಳಿವು
ಕೆಲ ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಹಿಟ್ ಆಗದೆ, ಒಟಿಟಿ ವೇದಿಕೆಯಲ್ಲಿ ಒಳ್ಳೆಯ ಮಟ್ಟದಲ್ಲಿ ಯಶಸ್ಸು ಪಡೆದಿದೆ. ಹಾಗಾದರೆ ಅವು ಯಾವುವು?

ಆ ಸಿನಿಮಾಗಳು ಯಾವುವು?
ಥಿಯೇಟರ್‌ನಲ್ಲಿ ಫೇಲ್ ಆಗಿ, ಒಟಿಟಿಯಲ್ಲಿ ಒಳ್ಳೆಯ ವೀಕ್ಷಣೆ ಪಡೆದ ಸಿನಿಮಾಗಳು ಯಾವುವು?
ಗಂಟುಮೂಟೆ
ರೂಪಾ ರಾವ್ ನಿರ್ದೇಶನದ 90ರ ಬೆಂಗಳೂರಿನಲ್ಲಿ ನಡೆಯುವ ಕಥೆ ಇದಾಗಿದೆ. ಹೈಸ್ಕೂಲ್ ಹುಡುಗಿಯ ಲವ್ ಸ್ಟೋರಿ, ಆ ವಯಸ್ಸಿನ ಗೊಂದಲ, ತಳಮಳ ಎಲ್ಲವೂ ಇಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ತೇಜು ಬೆಳವಾಡಿ, ನಿಶ್ಚಿತ್ ಕೊರಾಡಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ರತ್ನನ್ ಪ್ರಪಂಚ
ಧನಂಜಯ, ಉಮಾಶ್ರೀ, ರೆಬಾ ಮೋನಿಕಾ ಜಾನ್ ನಟನೆಯ ಈ ಸಿನಿಮಾ ನೇರವಾಗಿ ಒಟಿಟಿಗೆ ರಿಲೀಸ್ ಆಗಿತ್ತು. ಧನಂಜಯ, ಉಮಾಶ್ರೀ ಕಾಂಬಿನೇಶನ್ ಜನರಿಗೆ ಇಷ್ಟ ಆಗಿತ್ತು. ರೋಹಿತ್ ಪದಕಿ ನಿರ್ದೇಶನದ ಸಿನಿಮಾವಿದು. ಭಾವನಾತ್ಮಕ ಸಂಬಂಧ, ಕತೆ ಇರುವ ಸಿನಿಮಾವಿದು.
ಎಡಗೈಯೇ ಅಪಘಾತಕ್ಕೆ ಕಾರಣ
ಒಳ್ಳೆಯ ಮಾರ್ಕೆಟಿಂಗ್ ಮತ್ತು ಸೋಶಿಯಲ್ ಮೀಡಿಯಾ ಪ್ರಚಾರವಿದ್ದರೀ ಕೂಡ ಈ ಸಿನಿಮಾ ಥಿಯೇಟರ್‌ನಲ್ಲಿ ಯಶಸ್ಸು ಕಾಣಲಿಲ್ಲ. ಆದರೆ ಒಟಿಟಿಯಲ್ಲಿ ಒಳ್ಳೆಯ ವೀಕ್ಷಣೆ ಪಡೆದಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ದಿಗಂತ್, ನಿಧಿ ಸುಬ್ಬಯ್ಯ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಶಾಖಾಹಾರಿ
ಶಾಖಾಹಾರಿ ಸಿನಿಮಾದಲ್ಲಿ ರಂಗಾಯಣ ರಘು, ವಿನಯ್ ಯುಜೆ, ನಿಧಿ ಹೆಗಡೆ ನಟಿಸಿದ್ದಾರೆ. ಕೊಲೆಯ ಸುತ್ತ ನಡೆಯುವ ಈ ಸಿನಿಮಾದಲ್ಲಿ ಕಥೆಯೇ ಕಿಂಗ್. ಸಂದೀಪ್ ಸುಂಕದ್ ನಿರ್ದೇಶನದ ಸಿನಿಮಾವಿದು.
ಬ್ಲಿಂಕ್ ಸಿನಿಮಾ
ಬ್ಲಿಂಕ್ ಸಿನಿಮಾವು ಥಿಯೇಟರ್‌ನಲ್ಲಿ ಆರಂಭದಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ಒಟಿಟಿ ವೇದಿಕೆಗಳಲ್ಲಿ ಇದು ದೊಡ್ಡ ಪ್ರೇಕ್ಷಕರನ್ನು ರೀಚ್ ಆಗಿತ್ತು. ಇದರ ವಿಶಿಷ್ಟ ಕಾನ್ಸೆಪ್ಟ್‌ಗೆ ಒಳ್ಳೆಯ ಪ್ರಶಂಸೆ ಗಳಿಸಿದೆ. ಶ್ರೀನಿಧಿ ಬೆಂಗಳೂರು ಬರೆದು ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಜೆ ಆಚಾರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹೊಂದಿಸಿ ಬರೆಯಿರಿ
ಮೂರು ಕಥೆಗಳುಳ್ಳ ಈ ಸಿನಿಮಾದಲ್ಲಿ ಬದುಕು ಬಂದಂತೆ ಸ್ವೀಕರಿಸಿ ಎಂಬ ಸಂದೇಶವಿದೆ. ನಿಜಕ್ಕೂ ಈ ಸಿನಿಮಾ ನೋಡಿದವರು ಗುಡ್ ಫೀಲ್ ಮಾಡುತ್ತಾರೆ. ಥಿಯೇಟರ್‌ನಲ್ಲಿ ಅಷ್ಟು ಯಶಸ್ಸು ಕಾಣದ ಈ ಸಿನಿಮಾ, ಒಟಿಟಿಯಲ್ಲಿ ಒಳ್ಳೆಯ ಹಿಟ್ ಆಯ್ತು. ಅರ್ಚನಾ ಜೋಯಿಸ್, ಭಾವನಾ ರಾವ್, ಶ್ರೀ ಮಹದೇವ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು.
ಡೊಳ್ಳು
ಡೊಳ್ಳು ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದಾರೆ, ಪವನ್ ಒಡೆಯರ್ ಅವರು ಹಣ ಹೂಡಿದ್ದಾರೆ. ಈ ಸಿನಿಮಾವು ವಿಮರ್ಶಾತ್ಮಕವಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಅಷ್ಟೇ ಅಲ್ಲದೆ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಕಾರ್ತಿಕ್ ಮಹೇಶ್, ನಿಧಿ ಹೆಗಡೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜನಪದ ಶೈಲಿಯ ಡೊಳ್ಳಿನ ಕುರಿತು ಈ ಸಿನಿಮಾವಿದೆ.