Karna Serial: ಕರ್ಣ-ನಿಧಿ ಖುಷಿ ಹಾಳು ಮಾಡಲು ಪಣ ತೊಟ್ಟಿರೋ ಸಂಜಯ್ ಪಾತ್ರಧಾರಿ ಯಾರು?
ಕರ್ಣ ಧಾರಾವಾಹಿಯಲ್ಲಿ ಸಂಜಯ್ ಪಾತ್ರದಲ್ಲಿ ವಿನಯ್ ಕಶ್ಯಪ್ ನಟಿಸುತ್ತಿದ್ದಾರೆ. ಇದು ಪಕ್ಕಾ ನೆಗೆಟಿವ್ ಪಾತ್ರವಾಗಿದ್ದು, ಹೀರೋ ಕರ್ಣನನ್ನು ಕಂಡರೆ ಸಂಜಯ್‌ಗೆ ಆಗೋದೇ ಇಲ್ಲ. ಸಂಜಯ್ ಆಸ್ತಿಗೋಸ್ಕರ, ಸ್ವಾರ್ಥಕ್ಕೋಸ್ಕರ ಏನು ಬೇಕಿದ್ರೂ ಮಾಡೋಕೆ ರೆಡಿ ಇರುವ ಪಾತ್ರವಾಗಿದೆ.

ಸಂಜಯ್ ಪಾತ್ರಧಾರಿ ಯಾರು?
ಸಂಜಯ್ ಪಾತ್ರಧಾರಿ ಯಾರು? ಇವರ ಹಿನ್ನಲೆ ಏನು? ನಟನೆ ಶುರುವಾಗಿದ್ದು ಹೇಗೆ ಮುಂತಾದ ವಿಚಾರಗಳ ಬಗ್ಗೆ ಸ್ವತಃ ವಿನಯ್ ಕಶ್ಯಪ್ ಅವರೇ ಮಾತನಾಡಿದ್ದಾರೆ.
ವಿದ್ಯಾರ್ಹತೆ ಏನು?
ವಿನಯ್ ಕಶ್ಯಪ್ ಸಿಂಹ ಅವರು ಇಂಜಿನಿಯರಿಂಗ್ ಓದಿದ್ದು, ಇನ್ನೇನು ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವರು ನಟನೆ ಶುರು ಮಾಡ್ತೀನಿ ಎಂದು ರಂಗ ಬದಲಾಯಿಸಿದರು.
ರಂಗಭೂಮಿ ನಟ
ವಿನಯ್ ಕಶ್ಯಪ್ ಅವರು ರಂಗಭೂಮಿಯಿಂದ ಬಂದವರು. ಅಲ್ಲಿ ಅವರು ನಾಟಕದಲ್ಲಿ ಅವಕಾಶ ಪಡೆದುಕೊಳ್ಳೋದಿಕ್ಕೆ ಸಾಕಷ್ಟು ಕಷ್ಟಪಟ್ಟಿದ್ದರು. ಮಗ ಇಂಜಿನಿಯರಿಂಗ್ ಬಿಟ್ಟು ನಟನೆಗೆ ಬಂದ ಎಂದು ಅವರ ಮನೆಯವರು ಕೂಡ ಬೇಸರಮಾಡಿಕೊಂಡಿದ್ದರಂತೆ.
ಆಡಿಷನ್‌ಗಳಲ್ಲಿ ಭಾಗವಹಿಸಿದ್ರು
ಆರಂಭದಲ್ಲಿ ವಿನಯ್ ಅವರಿಗೆ ಒಂದೇ ಒಂದು ಅವಕಾಶವೇ ಸಿಗುತ್ತಿರಲಿಲ್ಲ. ಇದಕ್ಕಾಗಿ ವಿನಯ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. “ಪೌರಾಣಿಕ ಧಾರಾವಾಹಿಯ ಆಡಿಷನ್‌ಗೆ ಹೋದಾಗ ಏಜೆನ್ಸಿಯವರು ಬಾಯಿಗೆ ಬಂದಹಾಗೆ ಮಾತನಾಡಿದರು, ಶರ್ಟ್ ತೆಗೆಸಿ ಫಿಟ್‌ನೆಸ್ ನೋಡಿದರು, ಶೇವ್ ಕೂಡ ಮಾಡಿ ಲುಕ್ ಟೆಸ್ಟ್ ಮಾಡಿದರು. ಆಮೇಲೆ ಫೋನ್ ಬಂದು, ಕಿಚ್ಚ ಸುದೀಪ್ ಥರ ವಾಯ್ಸ್ ಬೇಕು, ಆಪರೇಶನ್ ಮಾಡಿಸಿಕೊಳ್ಳಿ ಎಂದು ಹೇಳಿದ್ದರಂತೆ. ಅದಾದ ಬಳಿಕ ಏಜೆನ್ಸಿಯವರು, ಶೇವ್ ಮಾಡಿಸಿಕೊಳ್ಳೋರು ಡೀಲ್ ಮಾಡಿಕೊಂಡು ಬ್ಯುಸಿನೆಸ್ ಮಾಡ್ತಿದ್ದಾರೆ ಎಂದು ಆಮೇಲೆ ಗೊತ್ತಾಯಿತು. ಆಪರೇಶನ್ ಮಾಡಿಸಿಕೊಳ್ಳದೆ ನಾನು ಬಚಾವ್ ಆದೆ” ಎಂದು ವಿನಯ್ ಕಶ್ಯಪ್ ಅವರೇ ಹೇಳಿದ್ದಾರೆ.
ಕೆಲ ಧಾರಾವಾಹಿಗಳಲ್ಲಿ ನಟನೆ
ಅರಮನೆ ಗಿಳಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಬಾಯ್‌ಫ್ರೆಂಡ್ ಆಗಿ ನಟಿಸಿದ್ದರು. ‘ಹಿಟ್ಲರ್ ಕಲ್ಯಾಣ’, ‘ಕನ್ನಡತಿ’, ‘ಚಿಕ್ಕೆಜಮಾನಿ’, ‘ಸೇವಂತಿ’ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.