- Home
- Entertainment
- TV Talk
- Karna Serial: ನಿಧಿ-ಕರ್ಣರನ್ನು ದೂರ ಮಾಡೋಕೆ ಅಸಲಿ ಕಾರಣ ಕೊಟ್ಟ ರಮೇಶ್! ಎಂಥ ಕುತಂತ್ರಿಯೋ ನೀನು
Karna Serial: ನಿಧಿ-ಕರ್ಣರನ್ನು ದೂರ ಮಾಡೋಕೆ ಅಸಲಿ ಕಾರಣ ಕೊಟ್ಟ ರಮೇಶ್! ಎಂಥ ಕುತಂತ್ರಿಯೋ ನೀನು
ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಹಾಗೂ ತೇಜಸ್ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಅರಿಷಿಣ, ಮೆಹೆಂದಿ, ಬಳೆ ಶಾಸ್ತ್ರಗಳು ಕೂಡ ನಡೆದಿವೆ. ಇನ್ನೇನು ತಾಳಿ ಕಟ್ಟೋ ಟೈಮ್‌ನಲ್ಲಿ ಮಾತ್ರ ದೊಡ್ಡ ಟ್ವಿಸ್ಟ್ ಇದೆ ಎಂದು ರಮೇಶ್ ಹೇಳುತ್ತಿದ್ದಾನೆ. ಕರ್ಣನನ್ನು ಅವನು ದ್ವೇಷ ಮಾಡೋಕೆ ದೊಡ್ಡ ಕಾರಣವೇ ಇದೆಯಂತೆ.

ಈಗ ಧಾರಾವಾಹಿಯಲ್ಲಿ ಏನಾಗ್ತಿದೆ?
ಕರ್ಣನಿಗೆ ಅವನ ಅಜ್ಜಿ ಅರಿಷಿಣ ಹಚ್ಚಿದ್ದಳು, ಅವನು ತನ್ನ ಹೆಸರನ್ನು ನಿಧಿ ಕೈಯಲ್ಲಿ ಮೆಹೆಂದಿ ಹಾಕಿದ್ದಾನೆ, ನಿತ್ಯಾ ಬಳೆ ಶಾಸ್ತ್ರ ಮಾಡುವಾಗ ಬಳೆ ಒಡೆದಿದೆ. ಈ ಶಾಸ್ತ್ರಗಳನ್ನು ನೋಡಿದರೆ ನಿತ್ಯಾ ಅಂದುಕೊಂಡಂತೆ ತೇಜಸ್ ಜೊತೆ ಮದುವೆ ನಡೆಯೋದಿಲ್ಲ, ಬದಲಿಗೆ ನಿತ್ಯಾ, ಕರ್ಣ ಮದುವೆ ಆಗುವ ಹಾಗೆ ಕಾಣ್ತಿದೆ.
ನಿಧಿಗೆ ಪ್ರೇಮ ನಿವೇದನೆ
ಅಂದಹಾಗೆ ಕರ್ಣ ಈಗಾಗಲೇ ನಿಧಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಸಪ್ತಪದಿ ತುಳಿಯುವಂತೆ ಸಿಕ್ಕಾಪಟ್ಟೆ ಅಲಂಕಾರ ಮಾಡಲಾಗಿದೆ. ಅಲ್ಲಿ ಅವನು ತನ್ನ ಮನಸ್ಸಿನ ಮಾತುಗಳನ್ನು ಹೇಳಿಕೊಂಡಿದ್ದಾನೆ. ಇದನ್ನು ಕೇಳಿ ನಿಧಿ ಖುಷಿಯಿಂದ ಕಣ್ಣೀರು ಹಾಕಿದ್ದಾಳೆ.
ಉತ್ತರ ಕೊಟ್ಟ ರಮೇಶ್
ಕರ್ಣ ಹಾಗೂ ನಿಧಿ ಪ್ರೀತಿಯನ್ನು ಹಾಳು ಮಾಡಿ, ಯಾಕೆ ನಿತ್ಯಾ ಜೊತೆ ಮದುವೆ ಮಾಡಸ್ತೀರಿ? ನಿಮಗೆ ಕರುಣೆ ಇಲ್ವಾ ಅಂತ ರಮೇಶ್‌ಗೆ ಅವನ ಪತ್ನಿ ಪ್ರಶ್ನೆ ಮಾಡಿದ್ದಳು. ಅದಕ್ಕೆ ಅವನು ದೊಡ್ಡ ಉತ್ತರ ಕೊಟ್ಟಿದ್ದಾನೆ.
ಸಂಭಾಷಣೆ ಏನು?
ರಮೇಶ್: ಕೂಸು ಹುಟ್ಟೋ ಮುಂಚೆ ಕುಲಾವಿ ಹೊಲಿಸ್ತಾರೆ ಅಂತ ಕೇಳಿದ್ದೆ. ಆದರೆ ಇಲ್ಲಿ ಹುಟ್ಟದಿರೋ ಕೂಸಿಗೆ ತೊಟ್ಟಿಲು ಕಟ್ಟಿ ತೂಗುತ್ತಿದ್ದಾರೆ ಅಂತ ಅನಿಸ್ತಿಲ್ವಾ? ಪಾಪ ಅನಿಸಿಲ್ವಾ?
ದುರಂತ ಕಥೆ ನೆನಪಿರಬೇಕಂತೆ
ಪತ್ನಿ: ಪಾಪ ಅಂತ ಬಾಯಲ್ಲಿ ಹೇಳಿದರೆ ಸಾಕಾ?
ರಮೇಶ್: ದೊಡ್ಡದು ಏನಾದರೂ ಆಗಬೇಕು ಅಂತಿದ್ರೆ ಜೀವನದಲ್ಲಿ ದೊಡ್ಡ ಕಷ್ಟವನ್ನೇ ಎದುರಿಸಬೇಕು. ರಾಮಾಯಣದಲ್ಲಿ ರಾವಣ, ಮಹಾಭಾರತದಲ್ಲಿ ದೂರ್ಯೋಧನ, ಸಿನಿಮಾದಲ್ಲಿ ವಿಲನ್‌ಗಳು, ಹಾಗೆ ಇಲ್ಲಿ. ಕರ್ಣನ ಹೃದಯವನ್ನು ಒಡೆದು, ಅವನ ಹೃದಯವನ್ನು ಎಲ್ಲರೂ ನೆನಪಿಟ್ಟುಕೊಳ್ಳುವ ಹಾಗೆ ಮಾಡೋದು ನಾನು. ಜನರು ಯಾವಾಗಲೂ ದುರಂತ ಕಥೆಯನ್ನು ನೆನಪಿಟ್ಟುಕೊಳ್ತಾರೆ. ಸುಮಾರು ಜನರು ದೇವರನ್ನು ನೆನಪಿಟ್ಟುಕೊಳ್ಳದಿದ್ರೂ, ದೇವದಾಸ್‌ನನ್ನು ನೆನಪಿಟ್ಟುಕೊಂಡಿದ್ದಾರೆ. ಇಲ್ಲಿ ಕರ್ಣ ನಿಧಿ ಪ್ರೀತಿ ನೆನಪಿಟ್ಟುಕೊಳ್ಳಿ, ಹಾಗೆ ಅವರ ಪ್ರೀತಿಯನ್ನು ಚಿವುಟುವೆ.