ಗೀತಾ ಧಾರಾವಾಹಿ ಮೂಲಕ ವೀಕ್ಷಕರಿಗೆ ಹತ್ತಿರ ಆಗಿರೋ ಧನುಷ್ ಗೌಡ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮನೆ ಪ್ರವೇಶ ಮಾಡಿದ್ದಾರೆ. ಆವೇಳೆ ಪತ್ನಿ ಪರ್ಸನಲ್ ವಿಷಯ ಮಾತನಾಡಿದ್ದು, ಧನುಷ್ ಅದನ್ನು ತಡೆದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ‘ಗೀತಾ’ ಧಾರಾವಾಹಿ ನಟಿ ಭವ್ಯಾ ಗೌಡ ಆಗಮಿಸಿದ್ದರು. ಈಗ ಈ ಸೀಸನ್‌ಗೆ ನಟ ಧನುಷ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಕೆ ಎಸ್ ರಾಮ್‌ಜೀ ನಿರ್ದೇಶನದ ಈ ಸೀರಿಯಲ್ ಮೂಲಕ ಧನುಷ್ ಗೌಡಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಈ ಬಾರಿ ಅವರು ದೊಡ್ಮನೆ ಪ್ರವೇಶ ಮಾಡಿ, ಜನರಿಗೆ ಇನ್ನಷ್ಟು ಹತ್ತಿರ ಆಗೋ ಆಸೆ ಹೊಂದಿದ್ದಾರೆ.
ಮದುವೆಯಾಗಿ ಒಂದೂವರೆ ವರ್ಷ
ಬಿಗ್ ಬಾಸ್ ವೇದಿಕೆಯಲ್ಲಿ ಅವರು ಕಿಚ್ಚ ಸುದೀಪ್ ಜೊತೆಗೆ ಒಂದಿಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರು ಧನುಷ್ ಗೌಡ ಪತ್ನಿಗೆ ಒಂದಿಷ್ಟು ಮಾತುಗಳನ್ನು ಕೇಳಿದ್ದಾರೆ. ಆಗ ಸಂಜನಾ ಅವರು, “ನಾವು ಮದುವೆಯಾಗಿ ಒಂದೂವರೆ ವರ್ಷ ಆಗಿದೆ” ಎಂದು ಹೇಳಿದ್ದಾರೆ.
ಕಿಚ್ಚ ಸುದೀಪ್, ಸಂಜನಾ ನಡುವಿನ ಮಾತುಕತೆ ಏನು?
ಕಿಚ್ಚ ಸುದೀಪ್: ನೀವು ನಿಮ್ಮ ಗಂಡನನ್ನು ಎಷ್ಟು ದಿನಗಳ ಕಾಲ ಬಿಟ್ಟಿದ್ದೀರಿ?
ಸಂಜನಾ: ಆಗಾಗ ಹೊಡಿತೀನಿ ಸರ್
ಕಿಚ್ಚ ಸುದೀಪ್: ಇಲ್ಲ, ನಾವು ಅಷ್ಟು ಪರ್ಸನಲ್ ಆಗಿ ಪ್ರಶ್ನೆ ಕೇಳಿಲ್ಲ
ಸಂಜನಾ: ಆಷಾಢದಲ್ಲಿ ಒಂದು ತಿಂಗಳು ದೂರ ಇದ್ವಿ
ಕಿಚ್ಚ ಸುದೀಪ್: ಅಯ್ಯೋ.. ನಾನು ಅಷ್ಟು ಪರ್ಸನಲ್ ಆಗಿ ಕೇಳಿಲ್ಲ. ಧನುಷ್ ಅವರು ಜಂಟಿಯಾಗಿ ಬೇರೆಯವರ ಜೊತೆ ಇದ್ದರೆ..
ಸಂಜನಾ: ಅವರು ತಂಗಿ ಅಂತ ಕರೆಯುತ್ತಾರೆ, ಇಲ್ಲವೇ ಫ್ರೆಂಡ್ಸ್ ಆಗಿರುತ್ತಾರೆ. ಅಥವಾ ಹುಡುಗನನ್ನು ಪೇರ್ ಮಾಡಿ
ಕಿಚ್ಚ ಸುದೀಪ್: ಆಗ ಇನ್ನೂ ಕಷ್ಟ ಆಗುತ್ತದೆ. ಆಷಾಢ ಮುಗಿದಮೇಲೂ ನಿಮಗೆ ಸಿಗೋದಿಲ್ಲ
ಪತ್ನಿ ಬಳಿ ಮಾತಾಡಿಸಬೇಡಿ
ಒಟ್ಟಿನಲ್ಲಿ ಸಂಜನಾ ಮಾತಿಗೆ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. ಆಗ ಧನುಷ್ ಗೌಡ, “ಸರ್ ಅವಳು ಏನೇ ಹೇಳಿದ್ರೂ, ಪರ್ಸನಲ್ ಆಗಿ ಮಾತಾಡ್ತಾಳೆ, ಮಾತಾಡಿಸಬೇಡಿ, ಬಿಡಿ ಸರ್” ಎಂದು ಹೇಳಿದ್ದಾರೆ.
ಹೆಂಡ್ತಿಯನ್ನು ಹೊಗಳಿದ ಧನುಷ್ ಗೌಡ
ಧನುಷ್ ಗೌಡ ಅವರು “ನನ್ನ ತಂದೆ ಜೊತೆಗೆ ಅಷ್ಟು ಆತ್ಮೀಯತೆ ಇಲ್ಲ, ಸ್ವಲ್ಪ ದೂರ, ಅವರನ್ನು ಕಂಡರೆ ಭಯ. ನನ್ನ ತಾಯಿ ಅಂದ್ರೆ ತುಂಬ ಇಷ್ಟ, ಅವರು ಏನೇ ಹೇಳಿದ್ರೂ ಕೂಡ, ನನ್ನ ಒಳಿತಿಗೆ ಅಂಥ ಅಂದುಕೊಂಡು ಮಾತುಗಳನ್ನು ಕೇಳ್ತೀನಿ. ಮನುಷ್ಯ ನೆಮ್ಮದಿಯಾಗಬೇಕು ಅಂದರೆ ಮನೆಯಲ್ಲಿ ಹೆಂಡ್ತಿ ಚೆನ್ನಾಗಿರಬೇಕು. ನನ್ನ ಪುಣ್ಯಕ್ಕೆ ಒಳ್ಳೆಯ ಹೆಂಡ್ತಿ ಸಂಗಾತಿಯಾಗಿ ಸಿಕ್ಕಿದ್ದಾಳೆ” ಎಂದು ಹೇಳಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಧನುಷ್ ಗೌಡ ಹಾಗೂ ಸಂಜನಾ ಮದುವೆಯಾಗಿದ್ದರು. ಸಂಜನಾ ಅವರು ಧನುಷ್‌ರ ಸಂಬಂಧಿಯಂತೆ.
ಅಂದಹಾಗೆ ಗಿಲ್ಲಿ ನಟ, ಜಾಹ್ನವಿ, ಚಂದ್ರಪ್ರಭ, ಕಾಕ್ರೋಚ್ ಸುಧಿ, ಡಾಗ್ ಸತೀಶ್, ಮಲ್ಲಮ್ಮ, ಮಂಜುಭಾಷಿಣಿ, ಕಾವ್ಯ ಶೈವ, ಆರ್‌ಜೆ ಅಮಿತ್, ಸ್ಪಂದನಾ ಸೋಮಣ್ಣ, ಅನನ್ಯಾ ಅಮರ್ ಕೂಡ ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ. ಮೈಸೂರು ದಸರಾ ಮಾದರಿಯಲ್ಲಿ ಮನೆ ರೆಡಿಯಾಗಿದೆ. ಒಟ್ಟಿನಲ್ಲಿ ಈ ಸೀಸನ್‌ನಲ್ಲಿ ಕನ್ನಡತನ ಎದ್ದು ಕಾಣುವುದು.
