ದೃಷ್ಟಿಯ ಬಣ್ಣ ಬಯಲಾದ ಬಳಿಕ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಗಿ ಬದಲಾದ ದತ್ತಾ ಭಾಯ್
ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಇದೀಗ ದೃಷ್ಟಿಯ ಬಣ್ಣ ಬಯಲಾಗಿದ್ದು, ಇದೀಗ ದತ್ತ ಭಾಯ್ ಲುಕ್ ಸಂಪೂರ್ಣವಾಗಿ ಬದಲಾಗಿ ಅಗ್ನಿಸಾಕ್ಷಿಯ ಸಿದ್ಧಾರ್ಥ್ ನಂತಾಗಿದ್ದಾರೆ.

ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಕಲರ್ಸ್ ಕನ್ನಡ (Colors Kannada) ವಾಹಿನಿಯ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಇದೀಗ ದೊಡ್ಡದಾದ ಟ್ವಿಸ್ಟ್ ಸಿಕ್ಕಿದೆ. ಧಾರವಾಹಿಯಲ್ಲಿ ದೃಷ್ಟಿಯ ಬಣ್ಣ ದತ್ತ ಭಾಯ್ ಮುಂದೆ ಬಯಲಾಗಿದೆ.
ಸೀರಿಯಲ್ ವಿಕ್ಷಕರು ಹಲವು ಸಮಯದಿಂದ ದತ್ತಾ ಭಾಯ್ ಎದುರು ಯಾವಾಗ ದೃಷ್ಟಿಯ ಬಣ್ಣ ಅನಾವರಣವಾಗುತ್ತೆ ಅನ್ನೋದನ್ನ ಕಾಯುತ್ತಿದ್ದರು. ಇದೀಗ ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ದೃಷ್ಟಿ ಹಾಗೂ ದತ್ತ ಭಾಯ್ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಉಂಟಾಗಿರುವ ಈ ಸಮಯದಲ್ಲಿಯೇ ಶರಾವತಿಯ ಕುತಂತ್ರದಿಂದ ದೃಷ್ಟಿಯ ಬಣ್ಣ ಬಯಲಾಗಿದೆ.
ಇದರಿಂದ ದತ್ತನ ಮುಂದೆ ದೃಷ್ಟಿ ಮೋಸಗಾತಿಯಾಗಿದ್ದಾಳೆ . ಈ ಹಿಂದೆ ದೃಷ್ಟಿಯ ಅಕ್ಕನಿಂದ ದತ್ತ ಬಾಯಿ ಮೋಸ ಹೋಗಿದ್ದರು. ಹಾಗಾಗಿ ದತ್ತನಿಗೆ ಸುಂದರವಾಗಿರುವ ಹುಡುಗೀರು ಅಂದ್ರೆ ಆಗೋದೇ ಇಲ್ಲ. ಸುಂದರವಾಗಿರುವವರು ಮೋಸ ಮಾಡುತ್ತಾರೆ ಅಂತಾನೆ ನಂಬಿರೋ ದತ್ತ ಭಾಯ್ , ಅಂತಹ ಹುಡುಗಿಯರು ನಂಬಿಕೆಗೆ ಅರ್ಹರಲ್ಲ ಎಂದು ಗಟ್ಟಿಯಾಗಿ ನಂಬಿದ್ದರು.
ಇನ್ನೊಂದು ಕಡೆ ದೃಷ್ಟಿಗೆ ತನ್ನ ಅಂದವೇ ಮುಳುವಾಗಿತ್ತು. ಸ್ಲಂ ನಲ್ಲಿ ಬೆಳೆದ ದೃಷ್ಟಿಯ ಮೇಲೆ ಯಾವ ಕೆಟ್ಟ ಕಣ್ಣುಗಳು ಬೀಳದಿರಲಿ ಎಂದು ಸ್ವತಹ ತಾಯಿ ಮೈ ಪೂರ್ತಿ ಕಪ್ಪು ಬಣ್ಣವನ್ನು ಹಚ್ಚಿ ಅದೇ ಅವಳ ನಿಜವಾದ ಬಣ್ಣ ಎಂದು ಬಿಂಬಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಕೂಡ ದೃಷ್ಟಿ ಕಪ್ಪು ಬಣ್ಣವನ್ನು ಮುಖ ಮೈ ಮೇಲೆ ಹಚ್ಚಿಕೊಂಡು ತನ್ನ ಸೌಂದರ್ಯವನ್ನು ಮರೆಮಾಚಿದಳು.
ಕಥೆ ಸಾಗಿದಂತೆ ಒಂದು ಕಡೆ ದೃಷ್ಟಿಯ ಜೀವನವನ್ನು ದತ್ತ ಕಾಪಾಡಿದರೆ, ಮತ್ತೊಂದೆಡೆ ದತ್ತನ ಜೀವನವನ್ನು ದೃಷ್ಟಿ ಕಾಪಾಡಿದ್ದರು. ಕೊನೆಗೆ ಇವರಿಬ್ಬರನ್ನು ಆ ವಿಧಿ ಒಂದಾಗುವಂತೆ ಮಾಡಿ, ಸದ್ಯ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ಇನ್ನೆಲ್ಲಾ ಸರಿಯಾಗಿ ದತ್ತ-ದೃಷ್ಟಿ ಒಂದಾಗುತ್ತಾರೆ ಎನ್ನುವಾಗ ಧಾರಾವಾಹಿಯಲ್ಲಿನ ಮಹಾ ತಿರುವು ಸಿಕ್ಕಿದೆ.
ತನ್ನ ತಮ್ಮನ ವಿರುದ್ಧವೇ ದ್ವೇಷ ಸಾರುತ್ತಿದ್ದ ಶರಾವತಿ ತನ್ನ ಷಡ್ಯಂತ್ರಗಳಿಗೆ ಅಡ್ಡಿಯಾಗುತ್ತಿದ್ದ ದೃಷ್ಟಿಯನ್ನು ದತ್ತ ನ ಬಾಳಿನಿಂದ ದೂರ ಮಾಡಲು, ಹಾಗೂ ಆತನ ಸುಂದರವಾದ ಸಂಸಾರವನ್ನು ಹಾಳು ಮಾಡಲು ನಿರ್ಧರಿಸಿ ದತ್ತಾ , ದೃಷ್ಟಿಯನ್ನು ಒಪ್ಪಿಕೊಳ್ಳುವ ಸಮಯದಲ್ಲಿಯೇ ಆಕೆಯ ನಿಜ ಬಣ್ಣವನ್ನು ಬಯಲಾಗಿಸಿ , ದತ್ತನ ಮುಂದೆ ದೃಷ್ಟಿಯನ್ನು ಮೋಸಗಾತಿಯನ್ನಾಗಿ ಮಾಡಿದ್ದರು. ಇದೀಗ ದೃಷ್ಟಿ ಮಾಡಿದ ಮೋಸ ದತ್ತನಿಗೆ ಅರಗಿಸಿಕೊಳ್ಳಲಾಗದ ಪೆಟ್ಟು ಬಿದ್ದಂತಾಗಿದೆ.
ಗಡ್ಡ ಮೀಸೆ ಬಿಟ್ಟಿದ್ದ ದತ್ತಾ ಭಾಯ್ ಇದೀಗ ಸೀರಿಯಲ್ ನಲ್ಲಿ ಗಡ್ಡ, ಮೀಸೆ ಬೋಳಿಸಿ, ಮತ್ತೆ ಕುಡಿತದ ಮೊರೆ ಹೋಗಿದ್ದಾರೆ. ದತ್ತ ಭಾಯ್ ಈ ಲುಕ್ ನೋಡಿದ್ರೆ ಈ ಹಿಂದೆ ಅಗ್ನಿ ಸಾಕ್ಷಿ (Agnisakshi) ಧಾರಾವಾಹಿಯಲ್ಲಿ ಸಿದ್ಧಾರ್ಥ್ ನೋಡಿದಂತೆ ಆಗುತ್ತಿದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಹೌದು, ಸ್ವಲ್ಪ ಅದೇ ಚಾಕಲೇಟ್ ಬಾಯ್ ಲುಕ್ ನಲ್ಲಿ ಕಾಣಿಸುತ್ತಿರೋದಂತೂ ನಿಜಾ.