ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗೋರು ಯಾರು? ಕಿಚ್ಚನ ಚಪ್ಪಾಳೆ ಸಿಗೋದು ಯಾರಿಗೆ?
Kichcha Sudeep weekend episode: ಈ ವಾರ ಬಿಗ್‌ಬಾಸ್ ಮನೆಯು ಸಂಪೂರ್ಣ ಕಾಲೇಜಾಗಿ ಬದಲಾಗಿದ್ದು, ಹಲವು ಜಗಳಗಳಿಗೆ ಸಾಕ್ಷಿಯಾಯಿತು. ಅಂತಿಮವಾಗಿ ನೀಲಿ ತಂಡದ ಧನುಷ್ ಮುಂದಿನ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರೆ, ಧ್ರುವಂತ್ ಕಳಪೆ ಪ್ರದರ್ಶನದಿಂದ ಜೈಲು ಸೇರಿದ್ದಾರೆ.

ವೀಕೆಂಡ್ ಸಂಚಿಕೆ
ಈ ವಾರ ಬಿಗ್‌ಬಾಸ್ ಮನೆ ಸಂಪೂರ್ಣ ಕಾಲೇಜು ಆಗಿ ಬದಲಾಗಿತ್ತು. ಕ್ಯಾಪ್ಟನ್ ರಘು ಅವರೇ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ರೆ, ಇನ್ನುಳಿದ ಎಲ್ಲಾ ಸ್ಪರ್ಧಿಗಳು ವಿದ್ಯಾರ್ಥಿಗಳಾಗಿದ್ದರು. ಈ ವಾರ ಟಾಸ್ಕ್ ಆಡುವಾಗ ಹಲವರ ನಡುವೆ ಜಗಳ ನಡೆದಿದ್ದು, ಹಾಗಾಗಿ ವೀಕೆಂಡ್ ಸಂಚಿಕೆ ಕುತೂಹಲ ಮೂಡಿಸಿದೆ. ಕಳೆದ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ.
ಕ್ಯಾಪ್ಟನ್ ಆಗಿರುವ ಧನುಷ್
ಮುಂದಿನ ವಾರಕ್ಕೆ ಧನುಷ್ ಮನೆಯ ಕ್ಯಾಪ್ಟನ್ ಆಗಿದ್ರೆ, ಧ್ರುವಂತ್ ಕಳಪೆ ಹಣೆಪಟ್ಟಿ ತೆಗೆದುಕೊಂಡು ಜೈಲು ಸೇರಿದ್ದಾರೆ. ಮನೆಯ ಸ್ಪರ್ಧಿಗಳನ್ನು ಬಿಗ್‌ಬಾಸ್ ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಅಂತಿಮವಾಗಿ ನೀಲಿ ತಂಡದ ಧನುಷ್ ಕ್ಯಾಪ್ಟನ್ ಆದರು. ಬಿಬಿ ಕಾಲೇಜಿನ ಕಾರ್ಯಕ್ರಮಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್‌ನ ಭಾಗ್ಯ ಮತ್ತು ಪ್ರೇಮಕಾವ್ಯದ ಪ್ರೇಮಾ ಅತಿಥಿಗಳಾಗಿ ಆಗಮಿಸಿದ್ದರು.
ಯಾರೆಲ್ಲಾ ನಾಮಿನೇಟ್?
ಈ ವಾರ ಮನೆಯಿಂದ ಹೊರಗೆ ಹೋಗಲು ರಾಶಿಕಾ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಮತ್ತು ಮಲ್ಲಮ್ಮ ನಾಮಿನೇಟ್ ಆಗಿದ್ದಾರೆ. ಈ ಹಿಂದಿನ ವಾರ ಯಾರು ಮನೆಯಿಂದ ಹೋಗದ ಕಾರಣ, ಹಾಗಾಗಿ ಒಬ್ಬರು ಈ ವೀಕೆಂಡ್‌ನಲ್ಲಿ ಔಟ್ ಆಗೋದು ಖಚಿತವಾಗಿದೆ.
ಇಂದಿನ ಪ್ರೋಮೋ
ಇಂದಿನ ಪ್ರೋಮೋವನ್ನು ಈ ವಾರ ಮನೆಯಿಂದ ಹೊರ ನಡೆಯೋದು ಯಾರು? ಎಂಬ ಶೀರ್ಷಿಕೆಯಡಿಯಲ್ಲಿ ಹಂಚಿಕೊಳ್ಳಲಾಗಿದೆ. ಇಡೀ ವಾರದ ಝಲಕ್‌ನ್ನು ಪ್ರೋಮೋದಲ್ಲಿ ತರಲಾಗಿದೆ. ಪ್ರೋಮೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ವೀಕ್ಷಕರ ಅಭಿಪ್ರಾಯ ಏನು?
ಮಲ್ಲಮ್ಮ ಹೋಗಬಹುದು, ಆದ್ರೆ ರಾಶಿಕಾ ಮತ್ತು ರಿಷಾ ಹೋದ್ರೆ ಒಳ್ಳೆಯದು. ರಾಶಿಕಾ ಹೋಗಬೇಕು, ರಘು ಅವರ ಕ್ಯಾಪ್ಟನ್ಸಿ ಚೆನ್ನಾಗಿತ್ತು. ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಕೊಡಬೇಕು. ಇನ್ನೂ ಗಿಲ್ಲಿ, ಕಾವ್ಯಾ ಅಂಡ್ ರಕ್ಷಿತಾ ಸೂಪರ್. ಮನೆಯಲ್ಲಿ ಸೈಲೆಂಟ್ ಆಗಿರೋ ಮಾಳು ಹೋಗಬೇಕು. ಮನೆಯಿಂದ ಆಚೆ ಬರುವ ಕಂಟೆಸ್ಟೆಂಟ್ ಧ್ರುವಂತ್ ಆಗಿರುತ್ತಾರೆ ಎಂದು ಬಿಗ್‌ಬಾಸ್ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ಆಟದ ವೇಳೆ ಕುಸಿದು ಬಿದ್ದ Bigg Boss Mallamma- ಆಸ್ಪತ್ರೆಗೆ ಶಿಫ್ಟ್? ಏನಿದು ಶಾಕಿಂಗ್ ವೈರಲ್ ವಿಡಿಯೋ ಅಸಲಿಯತ್ತು?
ಟಾಸ್ಕ್ ಬಗ್ಗೆ ವೀಕ್ಷಕರಿಂದ ಬೇಸರ
ಕ್ಯಾಪ್ಟನ್ ಆಯ್ಕೆಗೆ ಸ್ಪರ್ದಿಗಳಿಂದ ಮತ ಹಾಕಿಸಿದ್ದು ಇಷ್ಟವಾಗಲಿಲ್ಲ. ಸ್ವ ಸಾಮರ್ಥ್ಯದಿಂದ ಆಯ್ಕೆ ಆಗುವ ಟಾಸ್ಕ್ ಕೊಡ ಬೇಕಿತ್ತು. ಭಾವಚಿತ್ರ ಅಡಗಿಸಿಡುವ ಆಟವು ಕುತೂಹಲಕರವಾಗಿರಲಿಲ್ಲ. ಈ ವಾರ ರಾಶಿಕಾ ಮನಯಿಂದ ಆಚೆ ಹೋಗಬೇಕು ಕಿಚ್ಚನ ಚಪ್ಪಾಳೆ ರಘು ಅವರಿಗೆ ಸಿಗಬೇಕು. ಮಲ್ಲಮ್ಮ ಮತ್ತೆ ಮಾಳು ಏನು ಪ್ರಯೋಜನ ಇಲ್ಲ ಎಂದು ವೀಕ್ಷಕರು ಹೇಳಿದ್ದಾರೆ.
ಇದನ್ನೂ ಓದಿ: ರಾಶಿಕಾಗೆ ಐ ಲವ್ ಯೂ ಹೇಳಿ ತಪ್ಪು ಮಾಡಿದ್ರಾ ಸೂರಜ್ ?