MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಜಾಹ್ನವಿಯದ್ದು ವಿಕೃತ ಮನಸ್ಸು ಎಂದ ಮಾಜಿ ಗಂಡ ಕಾರ್ತಿಕ್

ಜಾಹ್ನವಿಯದ್ದು ವಿಕೃತ ಮನಸ್ಸು ಎಂದ ಮಾಜಿ ಗಂಡ ಕಾರ್ತಿಕ್

Bigg Boss Jahnavi ex-husband interview: ಬಿಗ್‌ಬಾಸ್ ಮನೆಯಲ್ಲಿ ಜಾಹ್ನವಿ ನೀಡಿದ ಡಿವೋರ್ಸ್ ಹೇಳಿಕೆಗೆ ಅವರ ಮಾಜಿ ಪತಿ ಕಾರ್ತಿಕ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಜಾಹ್ನವಿಯ ಆರೋಪಗಳಿಂದ ತನ್ನ ಹೊಸ ಸಂಸಾರಕ್ಕೆ ತೊಂದರೆಯಾಗುತ್ತಿದೆ ಎಂದಿದ್ದಾರೆ.

2 Min read
Author : Mahmad Rafik
Published : Oct 05 2025, 08:23 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್‌ಬಾಸ್ ಸ್ಪರ್ಧಿ ಜಾಹ್ನವಿ
Image Credit : Instagram

ಬಿಗ್‌ಬಾಸ್ ಸ್ಪರ್ಧಿ ಜಾಹ್ನವಿ

ಬಿಗ್‌ಬಾಸ್ ಸ್ಪರ್ಧಿಯಾಗಿರುವ ಜಾಹ್ನವಿ ಅವರ ಮಾಜಿ ಪತಿ ಕಾರ್ತಿಕ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಡಿವೋರ್ಸ್ ಯಾಕಾಯ್ತು ಎಂಬುದರ ಬಗ್ಗೆ ಜಾಹ್ನವಿ ಮಾತನಾಡಿದ್ದರು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿ

25
 ಮೊದಲ ಬಾರಿಗೆ ಪ್ರತಿಕ್ರಿಯೆ
Image Credit : Instagram

ಮೊದಲ ಬಾರಿಗೆ ಪ್ರತಿಕ್ರಿಯೆ

ಜಾಹ್ನವಿ ಮಾಡಿರುವ ಆರೋಪಗಳಿಗೆ ಕಾರ್ತಿಕ್ ಮಹಡಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರದ್ದು ಡಿವೋರ್ಸ್ ಆಗಿದೆ. ಜಾಹ್ನವಿ ನೀಡುತ್ತಿರುವ ಹೇಳಿಕೆಗಳಿಂದ ಡಿಸ್ಟರ್ಬ್ ಆಗುತ್ತಿದೆ. ಈಗ ನನಗೂ ಒಂದು ಸಂಸಾರವಿದೆ, 10 ತಿಂಗಳ ಮಗಳಿದ್ದಾಳೆ. ಪದೇ ಪದೇ ಇಂತಹ ಹೇಳಿಕೆಗಳಿಂದ ಮನಸ್ಸಿಗೆ ಬೇಸರವಾಗುತ್ತಿದೆ ಎಂದು ಹೇಳಿದರು.

Related Articles

Related image1
ಬಿಗ್‌ಬಾಸ್ ಮನೆಯ ಬಾಸ್‌ಗೆ ಕನ್ಫ್ಯೂಸ್‌ ಮಾಡಿದ ತುಳು ನಾಡಿನ ಬೆಡಗಿ ರಕ್ಷಿತಾ ಶೆಟ್ಟಿ
Related image2
Bigg Boss ಕನ್ನಡ ಸೀಸನ್ 12ರಲ್ಲಿ ಸಿಗುವ ಹಣವನ್ನು ಮಲ್ಲಮ್ಮ ಏನು ಮಾಡ್ತಾರೆ?
35
 ಅವಮಾನ ಮಾಡಿದ್ದಾರೆ
Image Credit : Instagram

ಅವಮಾನ ಮಾಡಿದ್ದಾರೆ

ನಮ್ಮ ತಂದೆಗೆ ನನ್ನ ಮಗ ಅಂದ್ರೆ ತುಂಬಾ ಇಷ್ಟ. ಡಿವೋರ್ಸ್ ಆದ್ಮೇಲೆಯೂ ಮೊಮ್ಮಗನನ್ನು ನೋಡಲು ಅಪಾರ್ಟ್‌ಮೆಂಟ್‌ಗೆ ಹೋಗಿದ್ದರು. ನಮ್ಮ ತಂದೆಗೆ 72 ವರ್ಷ ವಯಸ್ಸು, ಅವರನ್ನು ಒಳಗಡೆಯೂ ಕರೆಯದೇ ಹೊರಗೆ ನಿಲ್ಲಿಸಿಯೇ ಅವಮಾನ ಮಾಡಿದ್ದಾರೆ. ಮೊಮ್ಮಗನ ಮುಖವನ್ನು ಸಹ ತೋರಿಸಿಲ್ಲ. ನಮ್ಮ ತಂದೆ ಮೊಮ್ಮಗನನ್ನು ನೋಡಬೇಕು ಅಂತಿದ್ದು, ಕಳುಹಿಸು ಅಂದರೂ ಕಳುಹಿಸಲಿಲ್ಲ. ಏಪ್ರಿಲ್‌ನಲ್ಲಿ ತಂದೆಯ ಸಾವಾದ್ರೂ ಜಾಹ್ನವಿ ಬರಲಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.

45
ಬೇಸರ ವ್ಯಕ್ತಪಡಿಸಿದ ಕಾರ್ತಿಕ್
Image Credit : Instagram

ಬೇಸರ ವ್ಯಕ್ತಪಡಿಸಿದ ಕಾರ್ತಿಕ್

ನಮ್ಮ ತಾಯಿಗೂ ವಯಸ್ಸಾಗಿದೆ. ಮಾಧ್ಯಮ ಮತ್ತು ರಿಯಾಲಿಟಿ ಶೋಗಳಲ್ಲಿ ಈ ರೀತಿ ಹೇಳಿಕೆ ನೀಡುತ್ತಿರೋದರಿಂದ ನಮ್ಮ ಮನೆತನದ ಗೌರವಕ್ಕೆ ಧಕ್ಕೆಯನ್ನುಂಡು ಮಾಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಜಾಹ್ನವಿ ಹೇಳಿಕೆಗಳಿಂದ ನನ್ನ ಮತ್ತು ಹೆಂಡ್ತಿ ಕುಟುಂಬ ತುಂಬಾನೇ ಸಫರ್ ಆಗುತ್ತಿದೆ ಎಂದು ಕಾರ್ತಿಕ್ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಲ್ಲಮ್ಮ ಮತ್ತು 1 ನಿಮಿಷ 20 ಸೆಕೆಂಡ್; ನಿಮ್ಮ ಬುಡ ನೀವು ನೋಡ್ಕೊಳ್ಳಿ ಎಂದ ಸುದೀಪ್

55
ವಿಕೃತ ಮನಸ್ಸು
Image Credit : Instagram

ವಿಕೃತ ಮನಸ್ಸು

ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡು ಒಂದು ವರ್ಷ ಆಗಿದೆ. ಆದರೂ ನನ್ನ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ತಪ್ಪು ಹೇಳಿಕೆಯನ್ನು ನೀಡುತ್ತಿರೋದನ್ನು ಗಮನಿಸಿದ್ರೆ ಜಾಹ್ನವಿಯದ್ದು ವಿಕೃತ ಮನಸ್ಸು ಎಂದು ಅರ್ಥವಾಗುತ್ತದೆ ಎಂದು ಕಾರ್ತಿಕ್ ಮೊದಲ ಪತ್ನಿಯ ಬಗ್ಗೆ ಕಿಡಿಕಾರಿದರು. ಮಗನ ಶಿಕ್ಷಣಕ್ಕಾಗಿ ವರ್ಷಕ್ಕೆ ಇಂತಿಷ್ಟು ಹಣ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಆ ಹಣವನ್ನು ಜಾಹ್ನವಿ ಖಾತೆಗೆ ಹಾಕುತ್ತಿದ್ದೇನೆ. ಏನೇ ಆಗಲಿ ಅವನು ನನ್ನ ಮಗ ಎಂದು ಹೇಳಿದರು.

ಇದನ್ನೂ  ಓದಿ: BBK 12: RJ ಅಮಿತ್‌ಗೆ ಇನ್‌ಸ್ಟಂಟ್‌ ಕರ್ಮ ಹೇಗಿರತ್ತೆ ಅಂತ ತೋರಿಸಿದ ಕಿಚ್ಚ ಸುದೀಪ್!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಿಯಾಲಿಟಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಹುಡುಗಿಗೆ ಹುಡುಗ ಸ್ನಾನ ಮಾಡ್ಸೋದು, ಬಾಯಿಂದ ಮಸಾಜ್‌ ಮಾಡೋದು: ಅಸಹ್ಯ ರಿಯಾಲಿಟಿ ಶೋ? ವೀಕ್ಷಕರ ಆಕ್ರೋಶ
Recommended image2
OTT Release this Week: ಒಟಿಟಿಗೆ ಬಂದ ಒಂದಕ್ಕಿಂತ ಒಂದು ಸೂಪರ್‌ ಹಿಟ್‌ ಸಿನಿಮಾಗಳು! ಅಬ್ಬಬ್ಬಾ.. ಏನ್‌ ಕಥೆ, ಥ್ರಿಲ್ಲರ್!
Recommended image3
ಯಾರ ದೃಷ್ಟಿ ಬಿತ್ತೋ ಏನೋ! 2.5 ವರ್ಷದ ಮುದ್ದಾದ ಮಗ, ಪತ್ನಿ ಬಿಟ್ಟು ಹೊರಟ ಕನ್ನಡ Social Media Influencer
Related Stories
Recommended image1
ಬಿಗ್‌ಬಾಸ್ ಮನೆಯ ಬಾಸ್‌ಗೆ ಕನ್ಫ್ಯೂಸ್‌ ಮಾಡಿದ ತುಳು ನಾಡಿನ ಬೆಡಗಿ ರಕ್ಷಿತಾ ಶೆಟ್ಟಿ
Recommended image2
Bigg Boss ಕನ್ನಡ ಸೀಸನ್ 12ರಲ್ಲಿ ಸಿಗುವ ಹಣವನ್ನು ಮಲ್ಲಮ್ಮ ಏನು ಮಾಡ್ತಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved