- Home
- Entertainment
- TV Talk
- ಕೇಳಿ ಕೇಳಿ ಮರ್ಯಾದೆ ತೆಗೆಸಿಕೊಳ್ಳೋದು ಅಂದ್ರೆ ಇದೇನಾ? ಗಿಲ್ಲಿ ಉತ್ತರಗಳಿಗೆ ಅಶ್ವಿನಿ ಗೌಡ ತಬ್ಬಿಬ್ಬು
ಕೇಳಿ ಕೇಳಿ ಮರ್ಯಾದೆ ತೆಗೆಸಿಕೊಳ್ಳೋದು ಅಂದ್ರೆ ಇದೇನಾ? ಗಿಲ್ಲಿ ಉತ್ತರಗಳಿಗೆ ಅಶ್ವಿನಿ ಗೌಡ ತಬ್ಬಿಬ್ಬು
ಬಿಗ್‌ಬಾಸ್ ಸೀಸನ್ 12ರ ಫಿನಾಲೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿ ಚಟುವಟಿಕೆಯಲ್ಲಿ, ಫೈನಲಿಸ್ಟ್‌ಗಳು ಇತರ ಸ್ಪರ್ಧಿಗಳನ್ನು ಪ್ರಶ್ನಿಸಿದರು. ಈ ವೇಳೆ, ಅಶ್ವಿನಿ ಗೌಡ ಕೇಳಿದ ಪ್ರಶ್ನೆಗಳಿಗೆ ಹಾಸ್ಯ ಕಲಾವಿದ ಗಿಲ್ಲಿ ನಟ ನೀಡಿದ ಚಾಣಾಕ್ಷ ಮತ್ತು ವ್ಯಂಗ್ಯಭರಿತ ಉತ್ತರಗಳು ಎಲ್ಲರ ಗಮನ ಸೆಳೆದವು.

ಪತ್ರಿಕಾಗೋಷ್ಠಿಯ ಮಾದರಿಯ ಚಟುವಟಿಕೆ
ಸೀಸನ್ 12ರ ಮೊದಲ ಫಿನಾಲೆಗೂ ಮುನ್ನವೇ ಮನೆಯಲ್ಲಿ ಪತ್ರಿಕಾಗೋಷ್ಠಿಯ ಮಾದರಿಯ ಚಟುವಟಿಕೆಯನ್ನು ಬಿಗ್‌ಬಾಸ್ ನೀಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಫೈನಲಿಸ್ಟ್ ಆಗಿರುವ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಸುಧಿ ಮತ್ತು ಮಾಳು ನಿಪನಾಳ ಅವರು ಮಾಧ್ಯಮದ ಪ್ರತಿನಿಧಿಗಳಾಗಿದ್ದಾರೆ. ಈ ನಾಲ್ವರು ಇನ್ನುಳಿದ ಎಲ್ಲಾ ಸ್ಪರ್ಧಿಗಳನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಉತ್ತರಿಸಿದ ವೈಖರಿಯನ್ನು ನೋಡುಗರು ಮೆಚ್ಚಿಕೊಂಡಿದ್ದಾರೆ.
ನಾಲ್ವರು ಫೈನಲಿಸ್ಟ್
ನಾಲ್ವರು ಫೈನಲಿಸ್ಟ್‌ಗಳು ಯಾರು, ಯಾರಿಗೆ ಮತ್ತು ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ಸಿದ್ಧವಾಗಿದ್ದರು. ಪ್ರಾಪರ್ಟಿ ಹಾಸ್ಯ ಕಲಾವಿದ ಗಿಲ್ಲಿ ನಟ ಅವರನ್ನು ಪ್ರಶ್ನೆ ಮಾಡುವ ಸಂದರ್ಭದಲ್ಲಿ ಅಶ್ವಿನಿ ಗೌಡ ಪ್ರಶ್ನೆ ಮಾಡುವ ಅವಕಾಶವನ್ನು ವೈಯಕ್ತಿಕವಾಗಿ ತೆಗೆದುಕೊಂಡಂತೆ ಕಾಣಿಸಿತು. ಅಶ್ವಿನಿ ಗೌಡ ಕೇಳಿದ ಒಂದೊಂದು ಪ್ರಶ್ನೆಗೂ ಗಿಲ್ಲಿ ನಟ ತಮ್ಮದೇ ಶೈಲಿಯಲ್ಲಿ ಅವರೇ ಅವರನ್ನು ಪ್ರಶ್ನಿಸಿಕೊಳ್ಳುವಂತೆ ಉತ್ತರ ನೀಡಿದರು.
ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಪತ್ರಿಕಾಗೋಷ್ಠಿ ಹೀಗಿತ್ತು!
ಅಶ್ವಿನಿ ಗೌಡ: ಈ ಮನೆಯೊಳಗೆ ನೀನು ಏನು ದಬ್ಬಾಕಿದ್ದೀಯಾ ಹೇಳು?
ಗಿಲ್ಲಿ ನಟ: ಸ್ನಾನ ಮಾಡಿ ಬಕೆಟ್ ದಬ್ಬಾಕಿದ್ದೀನಿ. ಎಲ್ಲರದ್ದೂ ಇಲ್ಲಿ ಬೇರೆ ಆಟ ಇರುತ್ತೆ. ಈ ಮನೆಯಲ್ಲಿ ಸುಧಿ ಅಣ್ಣ ಅಂತಾ ಒಬ್ಬರಿದ್ದಾರೆ. ಅವರು ಎಲ್ಲರ ವಾಟರ್ ಬಾಟೆಲ್ ಮೇಲೆ ಹೆಸರು ಬರೆದುಕೊಡ್ತಾರೆ. ಅದು ಅವರ ಕೆಲಸ. ಅದು ಅವರ ಸ್ಟ್ರೆಂಥ್. ನಾನು ಒಬ್ಬ ಹಾಸ್ಯ ಕಲಾವಿದ. ನಾನು ಎಲ್ಲೆಲ್ಲಿ ಕಾಮಿಡಿ ಮಾಡಬಹುದೋ ಅದನ್ನು ಮಾಡುತ್ತೇನೆ. ನಾನು ಮಾತನಾಡಿದ್ರೆ ಕಾಮಿಡಿ ಆಗುತ್ತೆ ಅಷ್ಟೇ.
ಒಂದೊಂದು ಸ್ಟ್ರೆಂಥ್
ಬಿಗ್‌ಬಾಸ್ ಮನೆಯೊಳಗಡೆ ಅಶ್ವಿನಿ ಗೌಡ ಮೇಡಂ ಅಂತಾ ಒಬ್ಬರಿದ್ದಾರೆ. ಚೆನ್ನಾಗಿ ಮಾತನಾಡೋದು ಅವರ ಮಾತುಗಾರಿಕೆ. ಯಾರಾದ್ರು ಜಗಳ ಮಾಡ್ತಿದ್ರೆ ಅವರ ಮಧ್ಯೆಕ್ಕೆ ಹೋಗ್ತಾರೆ ಅದು ಅವರ ಸ್ಟ್ರೆಂಥ್. ಹೀಗೆ ಎಲ್ಲರದ್ದೂ ಒಂದೊಂದು ಸ್ಟ್ರೆಂಥ್. ಬಹುಶಃ ನಾನು ಕಾಮಿಡಿ ಮಾಡೋದು ಹೈಲೈಟ್ ಆಗಿ ಕಾಣಬಹುದು.
ಗಿಲ್ಲಿ ಅಂದ್ರೆ ಸಿಲ್ಲಿ
ಕಾಕ್ರೋಚ್ ಸುಧಿ: ಗಿಲ್ಲಿ ಅಂದ್ರೆ ಸಿಲ್ಲಿ ಅನ್ನೋ ಮಾತಿಗೆ ನಿಮ್ಮ ಅಭಿಪ್ರಾಯ ಏನು?
ಗಿಲ್ಲಿ ನಟ: ನಾನೇನು ಅಂತ ನನಗೆ ಗೊತ್ತಿರಬೇಕು. ಮನೆಯಲ್ಲಿ ಸುಧಿ ಅಣ್ಣಾ ಅಂತಾ ಒಬ್ಬರಿದ್ದಾರೆ. ಅವರಿಗೆ ಅಸುರ ಅಂತ ಮಾಡ್ತಾರೆ. ವಿಡಿಯೋದಲ್ಲಿ ಆಕಡೆ, ಈಕಡೆ ಓಡಾದೋದನ್ನು ತೋರಿಸಿ ಕಾಮಿಡಿ ಮಾಡ್ತಾರೆ. ಹಾಗಂತ ಅವರನ್ನು ಕಾಮಿಡಿ, ಸಿಲ್ಲಿ ಅಂತ ಕರೆಯಲು ಗೊತ್ತಾ? ಆದ್ರೆ ಸುಧಿ ತಮ್ಮನ್ನು ತಾವು ಬಿಟ್ಟುಕೊಡಲಿಲ್ಲ. ಮಾತನಾಡೋದು ಮಾತಾಡ್ತಾ ಇರ್ತಾರೆ ಅಷ್ಟೆ.
ಅಶ್ವಿನಿ ಗೌಡ: ಮನೆಯಲ್ಲಿ ಬನಿಯನ್ ಹಾಕೊಂಡು ತುಂಬಾ ಓಡಾಡ್ತಾ ಇದ್ದೀರಾ? ಯಾವುದಾದರೂ ಬ್ರ್ಯಾಂಡ್‌ಗೆ ಕೊಲ್ಯಾಬ್ರೇಷನ್ ಮಾಡಿಕೊಂಡಿದ್ದೀರಾ?
ಗಿಲ್ಲಿ ನಟ: ಮನೆಯಲ್ಲಿ ಕೆಲವರು ಸೀರೆ ಹಾಕಿಕೊಂಡು ಓಡಾಡುತ್ತಿರುತ್ತಾರೆ. ಹಾಗಂತ ಅವರು ಯಾವುದೋ ರೇಷ್ಮೆ ಸೀರೆಗೆ ಕೊಲ್ಯಾಬ್ರೇಷನ್ ಆಗಿದ್ದಾರೆ ಅಂತ ಹೇಳೋಕೆ ಸಾಧ್ಯವಿಲ್ಲ.
ಫೈನಲಿಸ್ಟ್ ಆಗಲು ಅರ್ಹ ಯಾಕೆ?
ರಾಶಿಕಾ ಶೆಟ್ಟಿ: ನೀವ್ಯಾಕೆ ಫೈನಲಿಸ್ಟ್ ಆಗಲು ಅರ್ಹರು?
ಗಿಲ್ಲಿ ನಟ: ಹೊರಗೆ ಜನರು ನನ್ನನ್ನು ಹೇಗೆ ಇಷ್ಟಪಡುತ್ತಿದ್ರೋ, ಹಾಗೆಯೇ ಮನೆಯೊಳಗೂ ಇದ್ದೀನಿ ಅನ್ನೋದು ನನ್ನ ನಂಬಿಕೆ. ಜನರು ನನ್ನನ್ನು ಕೈ ಬಿಡಲ್ಲ ಎಂಬ ನಂಬಿಕೆ ನನಗಿದೆ. ಜನರು ಟಿವಿ ಮುಂದೆ ಕುಳಿತಾಗ ನನ್ನ ಕಾಮಿಡಿ ನೋಡಿದಾಗ ನಗುತ್ತಾರೆ ಅನ್ನೋದು ನನ್ನ ನಂಬಿಕೆ.
ಇದನ್ನೂ ಓದಿ: ಕೆಬಿಸಿಯ ಇಶಿತ್ ಭಟ್, ವಿರಾಟ್ ಅಯ್ಯರ್ ಬೆನ್ನಲ್ಲೇ ಸಮೀರ್ ಆಚಾರ್ಯ ಹಳೆ ವಿಡಿಯೋ ವೈರಲ್
ಗೆಜ್ಜೆ ಸೌಂಡ್ ಪ್ರಸ್ತಾಪ
ಅಶ್ವಿನಿ ಗೌಡ: ನಿಮ್ಮ ಮನೆಯಲ್ಲಿ ಜಗಳ ಆಗ್ತಿದ್ರೆ ಟಿವಿ ನೋಡುತ್ತಾ ಎಂಜಾಯ್ ಮಾಡ್ತೀರಾ?
ಗಿಲ್ಲಿ ನಟ: ಇಬ್ಬರ ಜಗಳದ ನಡುವೆ ಹೋದ್ರೆ ನೀನ್ಯಾಗೆ ಮಧ್ಯೆ ಬಂದೆ ಅಂತ ಪ್ರಶ್ನೆ ಮಾಡ್ತಾರೆ. ಏನು ಬೇಡ ಅಂತ ದೂರ ಕುಳಿತ್ರೆ, ಸೈಡ್‌ನಲ್ಲಿ ಕುಳಿತ ಅಂತ ಹೇಳ್ತಾರೆ. ಅದಕ್ಕೆ ಸುಮ್ಮನೆ ಕುಳಿತುಕೊಳ್ಳುತ್ತೀನಿ. ಜಗಳ ನಿಂತ್ಮೇಲೆ ಮಾತನಾಡೋಣ ಅನ್ನೋದು ನನ್ನ ಅಭಿಪ್ರಾಯ.
ಇಬ್ಬರ ಮಧ್ಯೆ ಹೋದ್ರೆ ಜಗಳ ನಿಲ್ಲಲ್ಲ. ಅದು ಇಡೀ ಮನೆ ತುಂಬಾ ಆವರಿಸುತ್ತೆ. ಎರಡು ವಾರದಲ್ಲಿ ನೋಡಿರೋದು ಅದೇ. ಕೈಯಲ್ಲಿ ಹಿಡಿದುಕೊಂಡು ಗೆಜ್ಜೆ ಸೌಂಡ್ ಮಾಡೋದು. ಕೇಳಿದ್ರೆ ನಾನು ಅದನ್ನು ಮಾಡೇ ಇಲ್ಲ ಅಂತ ಸುಳ್ಳು ಹೇಳೋದು. ಕಣ್ಣಾರೆ ನೋಡುವುದು ಹೋಗಲಿ, ಮನೆಯಲ್ಲಿ ಕ್ಯಾಮೆರಾ ಇರೋದು ಗೊತ್ತಿದ್ದರೂ ಸುಳ್ಳು ಹೇಳುವುದನ್ನು ನೋಡಿ ನನಗೆ ಬೇಸರ ಆಗುತ್ತದೆ.
ಇದನ್ನೂ ಓದಿ: ವಿನಯ್-ಸಂಗೀತಾಗೆ ಆಟ, ನಮ್ರತಾಗೆ ಪ್ರಾಣ ಸಂಕಟ; ಬಿಗ್‌ಬಾಸ್ ಸೀಸನ್ 10ರ ಈ ದೃಶ್ಯ ನೆನಪಿದೆಯಾ?
ಕಾಮಿಡಿ ಎಂದರೇನು?
ಅಶ್ವಿನಿ ಗೌಡ: ನೀವು ಮಾಡಿದ್ರೆ ಕಾಮಿಡಿ. ಇನ್ನೊಬ್ಬರು ಏನೇ ಮಾಡಿದ್ರೂ ಅದು ಕಾಮಿಡಿ ಅಲ್ಲವಾ? ಅದು ಅವರ ಸ್ಟ್ರಾಟಜಿ ಆಗಲ್ಲವಾ? ಅದು ಸೀಕ್ರೆಟ್ ಟಾಸ್ಕ್ ಆಗಿರಬುಹುದು ಅಲ್ಲವಾ?
ಗಿಲ್ಲಿ ನಟ: ಟಾಸ್ಕ್ ಒಂದು ಕಡೆಯಾದ್ರೆ, ಮನೆಯಲ್ಲಿ ಹೇಗಿರುತ್ತೀರಾ ಅನ್ನೋದು ಮತ್ತೊಂದು ತೂಕವಾಗಿರುತ್ತದೆ. ಗೇಮ್‌ನಲ್ಲಿ ಗೆದ್ದ, ಸೋತಾ ವಿಷಯದ ಬದಲಾಗಿ ಅವನು ಅಥವಾ ಅವಳು ಯಾಕೆ ಹಾಗೆ ಮಾಡಿದ್ರು ಎಂದು ಮಾತನಾಡುತ್ತಾರೆ. ಜನರು ಗೇಮ್ ಬದಲಾಗಿ ವ್ಯಕ್ತಿತ್ವ ನೋಡುತ್ತಾರೆ.
ಅಶ್ವಿನಿ ಗೌಡ: ಪ್ರತಿಬಾರಿ ಸೀಬೆಕಾಯಿ, ಜಾಕೆಟ್, ಮೇಕಪ್ ಕಿಟ್ ಮುಚ್ಚಿಡೋದು ಅಲ್ಲ. ಜನರು ಚೇಂಜ್ ಕೇಳ್ತಾರೆ?
ಗಿಲ್ಲಿ ನಟ: ಅದು ತಪ್ಪು ಮೇಡಂ. ಪದೇ ಪದೇ ಸೀಬೆಕಾಯಿ ಅಂತೀರಾ? ಸೇಬು ಸಹ ಮುಂದೆಬಿಡಿ. ನಮಗೆ ಸೀಕ್ರೆಟ್ ಟಾಸ್ಕ್ ಅನ್ನೋದು ನಮಗೆ ಗೊತ್ತಿಲ್ಲ. ಮುಗೀತಾ? ನಿಮ್ಮಲ್ಲಿಯ ಪ್ರಶ್ನೆಗಳು ಮುಗೀತಾ ಎಂದು ವ್ಯಂಗ್ಯ ಮಾಡಿ ಪತ್ರಿಕಾಗೋಷ್ಠಿಯಿಂದ ಹೋಗುತ್ತಾರೆ.
ಇದನ್ನೂ ಓದಿ: ಮಾಡೋದೆಲ್ಲಾ ಮಾಡ್ಬಿಟ್ಟು ಹ್ಹಿ, ಹ್ಹೀ ನಕ್ಕಬಿಟ್ರು: ಇಬ್ಬರಿಗೂ ಈ ವಾರ ಕ್ಲಾಸ್ ತೆಗೆದುಕೊಳ್ಳಬೇಕಲೇ ಬೇಕು!