ಸ್ಪಂದನಾ ಜೊತೆಗಿನ ಜಗಳದ ವೇಳೆ ಸತ್ಯ ಬಿಚ್ಚಿಟ್ರಾ ಧ್ರುವಂತ್?
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿಗಳಾದ ಧ್ರುವಂತ್ ಮತ್ತು ಸ್ಪಂದನಾ ಸೋಮಣ್ಣ ನಡುವೆ ತೀವ್ರ ಜಗಳ ನಡೆದಿದೆ. ಒಳ್ಳೆಯವನಂತೆ ನಾಟಕವಾಡುತ್ತಿದ್ದೆ, ಇನ್ನು ಮುಂದೆ ನನ್ನ ನಿಜವಾದ ಮುಖವನ್ನು ತೋರಿಸುತ್ತೇನೆ ಎಂದು ಧ್ರುವಂತ್ ಸ್ಪಂದನಾಗೆ ಸವಾಲು ಹಾಕಿದ್ದಾರೆ.

ಸ್ಪರ್ಧಿ ಧ್ರುವಂತ್
ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಳ ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೊದಲ ಫಿನಾಲೆಗೆ ಫೈನಲಿಸ್ಟ್ ಆಗಿದ್ದಾರೆ. ಬಿಗ್‌ಬಾಸ್ ಶೋ ಆರಂಭದ ಮೊದಲ ದಿನದಿಂದಲೂ ಸ್ಪರ್ಧಿ ಧ್ರುವಂತ್, ತುಂಬಾನೇ ಬ್ಯಾಲೆನ್ಸ್ ಆಗಿ ಆಟವಾಡಿಕೊಂಡು ಬರುತ್ತಿದ್ದಾರೆ. ವೀಕೆಂಡ್‌ನಲ್ಲಿಯೂ ದೇವರಂತ ವ್ಯಕ್ತಿ ಎಂದು ಸುದೀಪ್ ಸಹ ತಮಾಷೆ ಮಾಡಿದ್ದರು.
ಧ್ರುವಂತ್ ಸವಾಲು
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಮನೆಯ ವಿಚಾರಕ್ಕಾಗಿ ಸ್ಪಂದನಾ ಸೋಮಣ್ಣ ಮತ್ತು ಧ್ರುವಂತ್ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರು ಪರಸ್ಪರ ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಒಳ್ಳೆಯವನಂತೆ ನಾಟಕ ಆಡ್ತಿದ್ದನ್ನಲ್ಲಾ ಇವಾಗ ನಾನು ಏನು ಎಂದು ತೋರಿಸುತ್ತೇನೆ ಎಂದು ಸ್ಪಂದನಾ ಸೋಮಣ್ಣಗೆ ಧ್ರುವಂತ್ ಸವಾಲು ಹಾಕಿದ್ದಾರೆ.
ಇಬ್ಬರ ಮಾತಿನ ಚಕಮಕಿ
ಸ್ಪಂದನಾ ಮತ್ತು ಮಾಳು ಕಿಚನ್ ಏರಿಯಾಗೆ ಬರುತ್ತಿದ್ದಂತೆ ಅಲ್ಲಿಯೇ ಕುಳಿತಿದ್ದ ಧ್ರುವಂತ್, ಆ ಕುರ್ಚಿ ಅಲ್ಲಿಡಬೇಕೆಂದು ಆರ್ಡರ್ ಮಾಡುತ್ತಾರೆ. ಯಾವ ಕುರ್ಚಿ ಎಂದು ಸ್ಪಂದನಾ ಮರುಪ್ರಶ್ನೆ ಮಾಡುತ್ತಾರೆ. ಮಾಳುಗೆ ಹೇಳಿದ್ದೀನಿ, ಮತ್ತೊಮ್ಮೆ ಹೇಳಲ್ಲ. ನನ್ನ ಪ್ರಕಾರ ಇಬ್ಬರೂ ಒಂದೇ ಎಂದು ಧ್ರುವಂತ್ ಹೇಳುತ್ತಾರೆ. ಇಷ್ಟಕ್ಕೆ ಇಬ್ಬರ ಮಾತಿನ ಚಕಮಕಿ ನಿಲ್ಲಲ್ಲ.
ಸ್ಪಂದನಾ ಎಚ್ಚರಿಕೆ
ಮರ್ಯಾದೆ ಕೊಟ್ಟು ಮಾತನಾಡಿ ಇಲ್ಲಾಂದ್ರೆ ಸರಿ ಇರಲ್ಲ ಎಂದು ಸ್ಪಂದನಾ ಎಚ್ಚರಿಕೆ ನೀಡುತ್ತಾರೆ. ಕೇವಲ ಮೇಕಪ್ ಮಾಡಿಕೊಂಡು ಓಡಾಡೋದಲ್ಲ. ಇನ್ಮುಂದೆ ಈ ಧ್ರುವಂತ್ ಯಾರು ಎಂದು ತೋರಿಸುವೆ ಅಂತಾ ಧ್ರುವಂತ್ ಹೇಳಿದ್ದಾರೆ.
ಇದನ್ನೂ ಓದಿ: 'ನಾನು ನಂದಿನಿ' ಹಾಡು ಹಿಟ್ ಆಗಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ವಿಕಿಪಿಡಿಯಾ
ಪ್ರೋಮೋ
ಬೆಳಗಿನ ಪ್ರೋಮೋ ನೋಡಿದ ನೆಟ್ಟಿಗರು, ಹಾಗಾದ್ರೆ ಇಷ್ಟುದಿನ ಧ್ರುವಂತ್ ಒಳ್ಳೆತನದ ಮುಖವಾಡ ಹಾಕಿಕೊಂಡಿದ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೂರನೇ ವಾರ ಒಬ್ಬರಿಗಿಂತ ಹೆಚ್ಚು ಸ್ಪರ್ಧಿಗಳು ಮನೆಯಿಂದ ಹೊರ ಹೋಗ್ತಾರೆ ಎಂದು ಸುದೀಪ್ ಸುಳಿವು ನೀಡಿದ್ದಾರೆ. ಆದ್ದರಿಂದ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಳ್ಳಲು ಏನೆಲ್ಲಾ ಕಸರತ್ತು ಮಾಡ್ತಾರೆ ಎಂಬುವುದು ಈ ವಾರ ಗೊತ್ತಾಗಲಿದೆ.
ಇದನ್ನೂ ಓದಿ: ಬಿಗ್‌ಬಾಸ್ 7ರಲ್ಲಿ ದೀಪಿಕಾ ದಾಸ್ ತುಟಿಗೆ ಕಿಸ್ ಕೊಟ್ಟಿದ್ಯಾರು? ಅಚ್ಚರಿಯ ದೃಶ್ಯ ವೈರಲ್!