'ನಾನು ನಂದಿನಿ' ಹಾಡು ಹಿಟ್ ಆಗಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ವಿಕಿಪಿಡಿಯಾ
VickyPedia's Naanu Nandini viral reel story: "ನಾನು ನಂದಿನಿ, ಬೆಂಗಳೂರಿಗೆ ಬಂದೀನಿ" ಎಂಬ ವೈರಲ್ ರೀಲ್ಸ್ ಸೃಷ್ಟಿಕರ್ತ, ಚಿತ್ರದುರ್ಗದ ವಿಕಾಸ್ ಅದರ ಯಶಸ್ಸಿನ ಹಿಂದಿನ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಆ ಕಾರಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ

ನಾನು ನಂದಿನಿ, ಬೆಂಗಳೂರಿಗೆ ಬಂದೀ
ನಾನು ನಂದಿನಿ, ಬೆಂಗಳೂರಿಗೆ ಬಂದೀನಿ, ಪಿಜಿಯಲ್ಲರ್ತೀನಿ ಎಂಬ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈವರೆಗೆ ನಾನು ನಂದಿನಿ ರೀಲ್ಸ್ ಯುಟ್ಯುಬ್‌ನಲ್ಲಿ 10 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಈ ಹಾಡಿಗೆ ಸ್ಟಾರ್‌ಗಳಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳು ಸಹ ರೀಲ್ಸ್ ಮಾಡಿದ್ದರು. VickyPedia Kannada ಪೇಜ್‌ನಲ್ಲಿ ಅತ್ಯಧಿಕ ವ್ಯೂವ್ ಪಡೆದ ವಿಡಿಯೋಗಳಲ್ಲಿ ಇದಾಗಿದೆ.
ಚಿತ್ರದುರ್ಗ ಮೂಲದ ವಿಕಾಸ್
ಚಿತ್ರದುರ್ಗ ಮೂಲದ ವಿಕಾಸ್ ಐಟಿ ಕ್ಷೇತ್ರದಲ್ಲಿನ ಕೆಲಸ ಬಿಟ್ಟು ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ವಿಕಿಪೆಡಿಯಾ ತಂಡದಿಂದ ಬಂದ "ನಾನು ನಂದಿನಿ, ಬೆಂಗಳೂರಿಗೆ ಬಂದೀನಿ" ರೀಲ್ಸ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ಬಾರ್ಬಿ ಮ್ಯೂಸಿಕ್‌ಗೆ ಕನ್ನಡದ ಸಾಲುಗಳನ್ನು ರಚಿಸಿ ವಿಕಿಪೆಡಿಯಾ ತಂಡ ಸಾಮಾಜಿಕ ಜಾಲತಾಣವನ್ನು ಆವರಿಸಿಕೊಂಡಿತ್ತು. ಈ ಹಾಡು ಹೇಗೆ ಹಿಟ್ ಆಯ್ತು ಎಂಬುದರ ಬಗ್ಗೆ ವಿಕಾಸ್ ಉರ್ಫ್ ವಿಕಿಪೆಡಿಯಾ ಹೇಳಿದ್ದಾರೆ.
ನಾನು ನಂದಿನಿ ಹಿಟ್
ನಾನು ನಂದಿನಿ ಹಿಟ್ ಬಗ್ಗೆ ವಿಕಾಸ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಕಂಟೆಂಟ್ ಏಕೆ ಹಿಟ್ ಆಯ್ತು ನನಗೂ ಅಷ್ಟು ಗೊತ್ತಿಲ್ಲ. ಹಾಡಿನ ಲಿರಿಕ್ಸ್ ಸಹ ಯಶಸ್ಸಿಗೆ ಒಂದು ಕಾರಣ ಅಂತ ಹೇಳಬಹುದು. ಹೀಗೆ ನಾಲ್ಕೈದು ಕಾರಣಗಳನ್ನ ನೀಡಬಹುದು ಎಂದು ವಿಕಾಸ್ ಹೇಳುತ್ತಾ
ನಂದಿನಿ ತುಂಬಾ ಚಿರಪರಿಚಿತ ಹೆಸರು
ನಂದಿನಿ ಅನ್ನೋದು ಫೇಮಸ್ ಆಗಿರುವ ಹೆಸರು. ನಂದಿನಿ ಅನ್ನೋ ಹೆಸರಿನವರಿಗೆ ಇದು ಮೊದಲು ರೀಚ್ ಆಯ್ತು. ನಂತರ ಜನರು ತಮಗೆ ಪರಿಚಯವಿರೋ ನಂದಿನಿ ಅನ್ನೋರಿಗೆ ಟ್ಯಾಗ್ ಮಾಡಲು ಶುರು ಮಾಡಿದರು. ವಿಷ್ಣುವರ್ಧನ್ ಅವರ ಬಂಧನ ಸಿನಿಮಾದಿಂದ ಮುಂಗಾರುಮಳೆ ಸಿನಿಮಾದವರೆಗೂ ನಂದಿನಿ ಫೇಮಸ್. ಹಾಗಾಗಿ ನಂದಿನಿ ತುಂಬಾ ಚಿರಪರಿಚಿತ.
ಈ ಸಾಂಗ್ ನನ್ನ ಸ್ಟೋರಿ
ಈ ಸಾಂಗ್ ನನ್ನ ಸ್ಟೋರಿ. ಬೆಂಗಳೂರಿಗೆ ಬಂದಾಗ ಇಂಗ್ಲಿಷ್ ಮಾತನಾಡಲು ಕಷ್ಟವಾಗುತ್ತಿತ್ತು. ಪಿಜಿಯಲ್ಲಿದ್ದು ಅಲ್ಲಿಯ ಆಹಾರ ಬೇಸರವಾಗಿತ್ತು. ಪಿಜಿಯಲ್ಲಿರ್ತಿನಿ ಎಂಬ ಸಾಲು ಬಹುತೇಕರಿಗೆ ರಿಲೇಟ್ ಆಯ್ತು. ಇನ್ನು ಈ ಹಾಡು ಮಕ್ಕಳಿಗೆ ಇಷ್ಟವಾಯ್ತು. ಮಕ್ಕಳಲ್ಲಿ ನಮ್ಮ ಕಂಟೆಂಟ್ ಹಿಟ್ ಆದ್ರೆ ಅದುವೇ ದೊಡ್ಡ ಪ್ಲಸ್ ಪಾಯಿಂಟ್. ಮಕ್ಕಳಿಂದ ಪೋಷಕರಿಗೆ, ಪೋಷಕರಿಂದ ಅವರ ಫ್ರೆಂಡ್ಸ್‌ಗೆ ತಲುಪುತ್ತದೆ ಎಂದು ವಿಕಾಸ್ ಹೇಳುತ್ತಾರೆ.
ನಂದಿನಿಯ ಸಕ್ಸಸ್ ಸೀಕ್ರೆಟ್
ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳಿದುಕೊಂಡು ಐಟಿ ಕೆಲಸ ಮಾಡೋದು ನನ್ನ ಅನುಭವವಾಗಿತ್ತು. ಆದ್ರೆ ಈ ಸಾಲು ಇಷ್ಟು ದೊಡ್ಡಮಟ್ಟದಲ್ಲಿ ಜನರಿಗೆ ರಿಲೇಟ್ ಆಗುತ್ತೆ ಎಂದು ತಿಳಿದಿರಲಿಲ್ಲ. ಎಲ್ಲಾ ನಮ್ಮ ತಂಡದ ಪರಿಶ್ರಮ ಎಂದು ನಾನು ನಂದಿನಿಯ ಸಕ್ಸಸ್ ಸೀಕ್ರೆಟ್‌ನ್ನು ವಿಕಾಸ್ ಹಂಚಿಕೊಂಡರು.