- Home
- Entertainment
- TV Talk
- ನಾನು ಮಾಡೋ ಸನಾತನ ಧರ್ಮದ Contentನಿಂದ ಯಾರಿಗಾದ್ರು ಉರಿದ್ರೆ… Unfollow ಮಾಡಿ.. ಖಡಕ್ ವಾರ್ನಿಂಗ್ ಕೊಟ್ಟ ಕಾವ್ಯಾ ಶಾಸ್ತ್ರಿ
ನಾನು ಮಾಡೋ ಸನಾತನ ಧರ್ಮದ Contentನಿಂದ ಯಾರಿಗಾದ್ರು ಉರಿದ್ರೆ… Unfollow ಮಾಡಿ.. ಖಡಕ್ ವಾರ್ನಿಂಗ್ ಕೊಟ್ಟ ಕಾವ್ಯಾ ಶಾಸ್ತ್ರಿ
ಕನ್ನಡ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ ಸನಾತನ ಧರ್ಮದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. Unfollow ಮಾಡಿ ಎಂದು ಸಹ ಎಚ್ಚರಿಸಿದ್ದಾರೆ.

ಕನ್ನಡ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ (Kavya Shastry) ಕನ್ನಡದ ಹಲವು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಕೊನೆಯದಾಗಿ ರಾಧಿಕಾ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಕಾವ್ಯಾ ಅದರಿಂದ ಅರ್ಧದಲ್ಲೇ ಹೊರ ನಡೆದಿದ್ದರು.
ಸೀರಿಯಲ್ ನಿಂದ ಹೊರ ನಡೆದಿದ್ದಕ್ಕೆ ಕಾರಣವನ್ನೂ ತಿಳಿಸಿದ್ದರು. ಇದಾದ ಬಳಿಕ ಸ್ಟಾರ್ ಸುವರ್ಣದ ಧಾರಾವಾಹಿ ಒಂದರಲ್ಲಿ ವಿಲನ್ ಆಗಿ ನಟಿಸಿದ್ದರು. ಆದರೆ ಆ ಧಾರಾವಾಹಿ ಕೆಲವೇ ತಿಂಗಳಲ್ಲಿ ಕೊನೆಗೊಂಡಿತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಧ್ಯಾತ್ಮಿಕತೆಯನ್ನು ಹರಡುತ್ತಿದ್ದಾರೆ.
ಸುಮಾರು ವರ್ಷಗಳಿಂದ ಕಾವ್ಯಾ ಆಧ್ಯಾತ್ಮಿಕತೆಯಲ್ಲಿ ವಾಲಿದ್ದಾರೆ. ಹೆಚ್ಚಾಗಿ, ದೇವಸ್ಥಾನಗಳಿಗೆ ಭೇಟಿ ನೀಡುವುದು, ಧ್ಯಾನ, ಪೂಜೆಗಳನ್ನು ಮಾಡುವ ಕಾವ್ಯಾ, ಸೋಶಿಯಲ್ ಮೀಡಿಯಾದಲ್ಲೂ ತಮಗೆ ಗೊತ್ತಿರುವಂತಹ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದರು.
ಆದರೆ ಇತ್ತೀಚೆಗೆ ಯಾರೋ ನಟಿಯ ಆಧ್ಯಾತ್ಮಿಕ ಹಾಗೂ ಸನಾತನ ಧರ್ಮಕ್ಕೆ ಸಂಬಂಧಿಸಿದಂತಹ ಕಂಟೆಂಟ್ ಹಾಗೂ ರೀಲ್ಸ್ ಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದಂತೆ. ನಟಿ ತಮ್ಮ ಕಂಟೆಂಟ್ ವಿರುದ್ಧ ಮಾತನಾಡಿದವರಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದು, ಅದನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಾನು ನನ್ನ ಧರ್ಮದ ಪರವೇ ಹೊರತು ಇನ್ನಾವ ಧರ್ಮದ ವಿರೋಧಿಯೂ ಅಲ್ಲ. ನನಗೆ ನನ್ನ ಧರ್ಮವನ್ನ ಆರಾಧಿಸುವ- ಅದರ ಪರ ಮಾತಾಡುವ ಎಲ್ಲಾ ಹಕ್ಕು ಇದೆ. ನಾನು ಯಾರ ಆಚರಣೆಯ ಬಗ್ಗೆ ಕೀಳಾಗಿ ಈ ವರೆಗೂ ಮಾತಾಡಿಲ್ಲ. ನನ್ನ ಧರ್ಮದ ಬಗ್ಗೆ ಅವಹೇಳನ ಮಾಡಿದ್ರೆ ಅವರಿಗೆ ಮರ್ಯಾದೆ ಕೊಡೋ ಅಗತ್ಯವೂ ಇಲ್ಲ.
ನನ್ನ ಅಕೌಂಟಲ್ಲಿ ನಾನು ಮಾತನಾಡೋದೆ ದೇವರು -ಧರ್ಮ- ಆಚರಣೆ - ಮಹತ್ವದ ಬಗ್ಗೆ. ನನ್ನ ಸನಾತನ ಧರ್ಮದ ಕಂಟೆಂಟ್ ಯಾರಿಗಾದ್ರೂ ಉರಿದ್ರೆ, Unfollow ಮಾಡಿ. ನನ್ನ ರೀಲ್ಸ್ ನೋಡಿ ಕಲಿಯೋ, ಪ್ರೀತಿ ಹಂಚೋ ಸಾಕಷ್ಟು ಸನಾತನಿಗಳಿದ್ದಾರೆ.
ಧರ್ಮ, ದೇವರು, ಆಚರಣೆ ಬಗ್ಗೆ ನಂಬಿಕೆ ಇಲ್ಲದೇ ಕೀಳಾಗಿ, ಅತಿ ಮೇಧಾವಿತನದಿಂದ ಮಾತನಾಡುವವರಿಗೆ ನನ್ನ ಪ್ರೊಫೈಲ್ ಅಲ್ಲಿ ಕೆಲಸ ಇಲ್ಲ. ಎಲ್ಲರನ್ನೂ ಮೆಚ್ಚಿಸೋದಕ್ಕೆ ನನ್ನ ಧರ್ಮ ದೇಶ ಭಾಷೆಯನ್ನು ಧೈರ್ಯವಾಗಿ ಬೆಂಬಲಿಸದೇ ಇರೋದಕ್ಕೆ ನನಗಾಗಲ್ಲ. ವಂದೇ ಮಾತರಂ, ಜೈ ಶ್ರೀರಾಂ, ಜೈ ಭಾರತಾಂಬೆ ಎಂದು ಬರೆದುಕೊಂಡಿದ್ದಾರೆ.