- Home
- Entertainment
- Sandalwood
- ಬಿಗ್ ಬಾಸ್ ಸಿಂಹಿಣಿ ಸಂಗೀತ ಶೃಂಗೇರಿ ಕಿವಿಗೆ ಹೂ ಇಟ್ಟೋರು ಯಾರು?.... ಕಾರ್ತಿಕ್ ಅಂತಿದ್ದಾರಲ್ಲ ಫ್ಯಾನ್ಸ್!
ಬಿಗ್ ಬಾಸ್ ಸಿಂಹಿಣಿ ಸಂಗೀತ ಶೃಂಗೇರಿ ಕಿವಿಗೆ ಹೂ ಇಟ್ಟೋರು ಯಾರು?.... ಕಾರ್ತಿಕ್ ಅಂತಿದ್ದಾರಲ್ಲ ಫ್ಯಾನ್ಸ್!
ಕನ್ನಡ ಕಿರುತೆರೆ, ಹಿರಿತೆರೆ ಮತ್ತು ಬಿಗ್ ಬಾಸ್ ಸೀಸನ್ 10 ರ ಮೂಲಕ ಸದ್ದು ಮಾಡಿದ ಚೆಲುವೆ ಸಂಗೀತ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಹೂ ಹಿಡಿದಿರುವ ಫೋಟೊ ಶೇರ್ ಮಾಡಿ, ಯಾರು ಹೂ ಕೊಟ್ಟಿರೋದು ಗೆಸ್ ಮಾಡಿ ಎಂದಿದ್ದಾರೆ. ಇದಕ್ಕೆಅಭಿಮಾನಿಗಳ ಕಾಮೆಂಟ್ ಏನಿತ್ತು ನೋಡಿ.

ಬಿಗ್ ಬಾಸ್ ಸಿಂಹಿಣಿ
ಬಿಗ್ ಬಾಸ್ ಸೀಸನ್ 10 (Bigg Boss Season 10)ರಲ್ಲಿ ಉಳಿದ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆ ನೀಡಿ, ಅದು ಟಾಸ್ಕ್ ಆದರೂ ಸರಿ, ಮಾತು ಆದರೂ ಸರಿ ಎಲ್ಲದರಲ್ಲೂ ಎದುರಾಳ ಬೆವರಿಳಿಸಿದ ನಟಿ ಸಂಗೀತ ಶೃಂಗೇರಿ. ಆಕೆಯ ಪವರ್ ಫುಲ್ ಸ್ಪರ್ಧೆಗಳಿಂದಾಗಿಯೇ ಅಭಿಮಾನಿಗಳು ಪ್ರೀತಿಯಿಂದ ನಟಿಯನ್ನು ಸಿಂಹಿಣಿ ಎಂದು ಕರೆದರು.
ಸಂಗೀತ ಶೃಂಗೇರಿ
ಕನ್ನಡ ಕಿರುತೆರೆ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಸಂಗೀತ ಶೃಂಗೇರಿ (Sangeetha Sringeri) ಸತಿಯಾಗಿ ಮಿಂಚಿದ್ದರು. ಬಳಿಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 777 ಚಾರ್ಲಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು ಆಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮಾರಿ ಗೋಲ್ಡ್ ಸಿನಿಮಾದಲ್ಲೂ ನಟಿಸಿದ್ದರು.
ಸೋಶಿಯಲ್ ಮೀಡಿಯಾ ಕ್ವೀನ್
ಸಂಗೀತ ಶೃಂಗೇರಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಫೋಟೊ ಶೂಟ್, ವರ್ಕ್ ಔಟ್ ವಿಡಿಯೋ, ಶೂಟಿಂಗ್ ವಿಡೀಯೋ, ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದರ ಜೊತೆಗೆ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ ಶೃಂಗೇರಿಯ ಚೆಲುವೆ. ಆದರೆ ಯಾವುದೇ ಸಿನಿಮಾದಲ್ಲಿ ನಟಿಸುವ ಕುರಿತು ಮಾತ್ರ ಮಾಹಿತಿ ಸಿಕ್ಕಿಲ್ಲ.
ಸಂಗೀತ ಕಿವಿಯಲ್ಲಿ ಹೂವು
ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ ನಟಿ ಹೊಸದಾಗಿ ದಾಸವಾಳ ಹೂವೊಂದನ್ನು ಕೈಯಲ್ಲಿ ಹಿಡಿದು, ಕಿವಿ ಮೇಲೆ ಇಟ್ಟುಕೊಂಡಿರುವಂತಹ ಒಂದಷ್ಟು ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದು, ಅದರ ಜೊತೆಗೆ ಈ ಹೂವು ಯಾರು ಕೊಟ್ಟದ್ದು ಗೆಸ್ ಮಾಡಿ ಎಂದು ಹೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಒಕ್ಕೋರಲಿನಿಂದ ಕಾರ್ತಿಕ್ ಹೆಸರು ಹೇಳಿದ್ದಾರೆ.
ಕಾರ್ತಿಕ್ -ಸಂಗೀತಾ
ಬಿಗ್ ಬಾಸ್ ಮನೆಯಲ್ಲಿ ಆರಂಭದ ದಿನಗಳಲ್ಲಿ ಕಾರ್ತಿ ಮಹೇಶ್ (Karthik Mahesh) ಮತ್ತು ಸಂಗೀತ ಉತ್ತಮ ಜೋಡಿಗಳಾಗಿದ್ದರು. ಜನ ಈ ಜೋಡಿಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇವರಿಬ್ಬರ ಕೆಮೆಷ್ಟ್ರಿ ಸಿಕ್ಕಾಪಟ್ಟೆ ವರ್ಕ್ ಔಟ್ ಆಗಿತ್ತು. ಆದರೆ ದಿನ ಕಳೆದಂತೆ ಬಂದಂತಹ ಟಾಸ್ಕ್ ಗಳು, ಹಾಗೂ ಇನ್ನಿತರ ಸಂದರ್ಭಗಳು ಇಬ್ಬರನ್ನೂ ದೂರ ಮಾಡಿತ್ತು. ಆದರೆ ಇಂದಿಗೂ ಜನ ಮಾತ್ರ ಈ ಜೋಡಿಯನ್ನು ಇಷ್ಟಪಡುತ್ತಿದ್ದಾರೆ.
ಹೊಸ ಸಿನಿಮಾ ಮಾಡ್ತಿದ್ದಾರ ಬ್ಯೂಟಿ
ಇತ್ತೀಚೆಗೆ ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಾಫಿ ಎಸ್ಟೇಟ್ ನಲ್ಲಿ ಕ್ಯಾಮೆರಾ ಮುಂದೆ ಕೈ ಮುಗಿದು ನಿಂತಿರುವ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ನನ್ನ ಹೊಸ ಸಿನಿಮಾದ ಗ್ಲಿಂಪ್ಸ್ ಎಂದಿದ್ದಾರೆ. ಆದರೆ ಇದು ಯಾವ ಸಿನಿಮಾ? ಯಾರು ನಾಯಕ? ಯಾರು ನಿರ್ದೇಶಕರು ಅನ್ನೋದು ಮಾತ್ರ ತಿಳಿದು ಬಂದಿಲ್ಲ.