ರಂಗಾಯಣ ರಘು, ಸಿದ್ದು ಮೂಲಿಮನಿ ನಟನೆಯ 'ಅಜ್ಞಾತವಾಸಿ' ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲಿದೆ. ಎಲ್ಲಿ? ಯಾವಾಗ ಈ ಸಿನಿಮಾವನ್ನು ನೋಡಬಹುದು? 

ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ರಂಗಾಯಣ ರಘು ನಟಿಸಿರುವ ಕುತೂಹಲಭರಿತ ಸಿನಿಮಾ 'ಅಜ್ಞಾತವಾಸಿ' ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಮರ್ಡರ್ ಮಿಸ್ಟರಿ 'ಅಜ್ಞಾತವಾಸಿ' ಸಿನಿಮಾವು ಅತ್ಯುತ್ತಮ ಅಭಿನಯ, ಅಮೋಘವಾದ ಕ್ಯಾಮರಾ ಕೈಚಳಕದಿಂದ ಜನರ ಮನ ಸೆಳೆಯುವುದರಲ್ಲಿ ಎರಡನೇ ಮಾತಿಲ್ಲ.

ಈ ಸಿನಿಮಾದಲ್ಲಿನ ಕಥೆಯೇನು?

ಕಾಫಿ ನಾಡಿನ ದಟ್ಟವಾದ ಕಾಡಿನಲ್ಲಿ ಒಂದು ಪೊಲೀಸ್ ಸ್ಟೇಷನ್. ಆ ಪೊಲೀಸ್ ಸ್ಟೇಷನ್ ಶುರು ಆಗಿ 25 ವರುಷಗಳಾಗಿದ್ದರೂ ಯಾವುದೇ ಒಂದು ಕೇಸ್ ರೆಜಿಸ್ಟರ್ ಆಗಿರುವುದಿಲ್ಲ. ಕೊಲೆ, ಸುಲಿಗೆ ಬಿಟ್ಟು ಒಂದು ಚಿಕ್ಕ ಕೇಸ್ ಈ ಪೊಲೀಸ್ ಸ್ಟೇಷನ್ ಮೆಟ್ಟಿಲವರೆಗೂ ಬಂದಿಲ್ಲ. ಆದರೆ ಒಂದು ದಿನ ಇದ್ದಕ್ಕಿದ್ದ ಹಾಗೆ ಎಸ್ಟೇಟ್ ಮಾಲೀಕನೊಬ್ಬನ ಕೊಲೆ ನಡೆಯುತ್ತದೆ ಮತ್ತು ಅವನ ಮಗ ಮನೆ ಬಿಟ್ಟು ಹೋಗಿರುತ್ತಾನೆ. ಸಾಯುವ ವಯಸ್ಸಾಗಿದ್ದರೂ ಇದು ಸಹಜ ಸಾವಲ್ಲ ಎಂದು ಪೊಲೀಸ್ ಇನ್ಸ್ಪೆಕ್ಟರ್ ಗೆ ತಿಳಿಯುತ್ತದೆ. ಕೊಲೆ ಮಾಡಿದವರು ಯಾರು? ಕಂಪ್ಯೂಟರ್, ಪೋಸ್ಟ್ ಮ್ಯಾನ್, ಇಂಟರ್ನೆಟ್ ಈ ಕಥೆಯ ಮುಖ್ಯ ಹಂದರ!

ಈ ಸಿನಿಮಾದ ಪಾತ್ರಧಾರಿಗಳು ಯಾರು?

ಈ ಚಿತ್ರದಲ್ಲಿ ರಂಗಾಯಣ ರಘು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದು ಅವರ ನಟನೆ ಚಿತ್ರದ ಬಹುದೊಡ್ಡ ಅಂಶ! ಸಿದ್ದು ಮೂಲಿಮನಿ ಅವರು ರೋಹಿತ್‌ ಪಾತ್ರದಲ್ಲಿ ನಟಿಸಿದ್ದಾರೆ. ಊರಿನ ಎಲ್ಲರಿಗೂ ಇಮೇಲ್ ಮಾಡುವ ಪಾತ್ರ ಇದಾಗಿದೆ. ಸಿದ್ದು ಅವರ ನಟನೆ ಎಲ್ಲರ ಗಮನ ಸೆಳೆದಿದೆ. ಪಾವನ ಗೌಡ ಅವರು ಪಂಕಜಾ ಆಗಿ ಎಲ್ಲರಿಗೂ ಇಷ್ಟ ಆಗ್ತಾರೆ. ಅಷ್ಟೇ ಅಲ್ಲದೆ, ಗುರುಮೂರ್ತಿ ಅವರ ಅತ್ಯುತ್ತಮವಾದ ಸಿನಿಮಾಟೋಗ್ರಫಿ ಜನಮನ ಸೆಳೆಯುತ್ತದೆ. ಕೊಲೆ ಮಾಡಿದವರ್ಯಾರು? ಅರುಣನ ಪ್ರೇಮ ಸಕ್ಸಸ್ ಆಗುತ್ತಾ? ಇವೆಲ್ಲದಕ್ಕೂ ಉತ್ತರ ಇದೇ ಭಾನುವಾರ ಸಂಜೆ 3:30 ಕ್ಕೆ ಜೀ಼ ಕನ್ನಡದಲ್ಲಿ ದೊರಕಲಿದೆ. ಇದೇ ಭಾನುವಾರ ಸಂಜೆ 3:30 ಕ್ಕೆ ಜೀ಼ ಕನ್ನಡ ನೋಡೋದು ಮರೆಯಬೇಡಿ!

ʼಸಪ್ತಸಾಗರದಾಚೆ ಎಲ್ಲೋʼ ಸಿನಿಮಾ ನಿರ್ದೇಶಕ ಹೇಮಂತ್‌ ರಾವ್‌ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕರಾಗಿ ಅವರ ಮೊದಲ ಪ್ರಯತ್ನವಿದು.