95 KG ಇಂದ 65 KG: ಸರಳ ಟಿಪ್ಸ್ ಫಾಲೋ ಮಾಡಿ 30 KG ತೂಕ ಇಳಿಸಿದ ಮಹಿಳೆ
ಸರಳ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಮಹಿಳೆಯೊಬ್ಬರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಮಹಿಳೆ ಅನುಸರಿಸಿದ ಸರಳ ವಿಧಾನಗಳು ಏನು ಎಂಬುದನ್ನು ನೋಡೋಣ ಬನ್ನಿ.

ವೇಟ್ ಲಾಸ್ ಗೆ ಸಿಂಪಲ್ ಲೈಫ್ ಸ್ಟೈಲ್ ಚೇಂಜ್
ಅಂಶಿ ಶೆಟ್ಟಿ ಅನ್ನೋರು ತಮ್ಮ ತೂಕ 95 kg ಇಂದ 65 kg ಗೆ ಇಳಿಸಿಕೊಂಡಿದ್ದಾರೆ. ಸಿಂಪಲ್ ಲೈಫ್ ಸ್ಟೈಲ್ ಚೇಂಜಸ್ ಮೂಲಕ ಇದು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ. ಅಂಶಿ ಶೆಟ್ಟಿ ಅವರು ಒಂದು ತಿಂಗಳಲ್ಲಿ 4 ರಿಂದ 6 ಕೆಜಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳುತ್ತಾರೆ.
ವೇಟ್ ಲಾಸ್ ಗೆ ಮನೆಯಲ್ಲಿ ವ್ಯಾಯಾಮ
ಅಂಶಿ ಶೆಟ್ಟಿ ಅವರು ಮನೆಯಲ್ಲಿಯೇ ಸ್ಟ್ರೆಚಿಂಗ್, ಜಂಪಿಂಗ್ ಜಾಕ್, ವಾಕಿಂಗ್, ಚಕ್ಕಿ ಚಲನ, ಲೆಗ್ ರೈಸ್ ಮಾದರಿ ವ್ಯಾಯಾಮ ಮಾಡ್ತಿದ್ರಂತೆ. ಜೊತೆಗೆ ಜಿಮ್ ಗೆ ಹೋಗ್ತಿದ್ರಂತೆ. ನೀವು ಜಿಮ್ ಗೆ ಹೋಗದಿದ್ದರೆ, ಬೆಳಗ್ಗೆ ಮಾಡಿದ ವ್ಯಾಯಾಮವನ್ನ ಸಾಯಂಕಾಲ ಮತ್ತೆ ಮಾಡಬೇಕು ಎಂದು ಹೇಳುತ್ತಾರೆ.
ಚೀಸ್ ಇಲ್ಲದೆ ಕ್ರೀಮಿ ಪಾಸ್ತಾ
ಅಂಶಿ ಶೆಟ್ಟಿ ತೂಕ ಇಳಿಸಿಕೊಳ್ಳುವಾಗ ಪಾಸ್ತಾ ತಿನ್ನಬೇಕು ಅಂತ ಅನಿಸಿದಾಗ ಚೀಸ್ ಬಳಸದೆ, ಮಶ್ರೂಮ್, ಹಾಲು ಮತ್ತು ಪನೀರ್ ಬಳಸಿ ಪಾಸ್ತಾ ಮಾಡ್ತಿದ್ರಂತೆ.
ಇನ್ನಷ್ಟು ಓದಿ: ತೂಕ ಇಳಿಸುವ ವ್ಯಾಯಾಮಗಳು: ಸರಳ ವ್ಯಾಯಾಮಗಳಿಂದ ಮಹಿಳೆ 21 ಕೆಜಿ ತೂಕ ಇಳಿಸಿಕೊಂಡರು, 10 ವ್ಯಾಯಾಮಗಳು ಸಹಾಯಕ
ಫ್ರೈಡ್ ಫುಡ್ಸ್ ಬೇಡ
ತೂಕ ಇಳಿಸಿಕೊಳ್ಳುವಾಗ ಫ್ರೈಡ್ ಫುಡ್ಸ್ ತಿಂದ್ರೆ ತೂಕ ಹೆಚ್ಚಾಗುತ್ತದೆ. ಹಣ್ಣು, ತರಕಾರಿ, ಪ್ರೋಟೀನ್ ಯುಕ್ತ ಆಹಾರ ತಿನ್ನಬೇಕು ಎಂದು ಅಂಶಿ ಶೆಟ್ಟಿ ಹೇಳುತ್ತಾರೆ.
ಹೆಲ್ದಿ ಬ್ರೇಕ್ ಫಾಸ್ಟ್
ಅಂಶಿ ಬೆಳಗಿನ ಉಪಹಾರಕ್ಕೆ ಪ್ರೋಟೀನ್ ಯುಕ್ತ ಆಹಾರಗಳಾದ ಚನಾ ಚಾಟ್, ಬೇಸನ್ ಚಿಲ್ಲಾ, ಅವಕಾಡೊ ಟೋಸ್ಟ್, ಮೂಂಗ್ ದಾಲ್ ಪಾಲಕ್ ಚಿಲ್ಲಾ, ಪನೀರ್ ಸ್ಯಾಂಡ್ವಿಚ್ ತಿಂತಿದ್ರಂತೆ. ಇಂತಹ ಆರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದಿಂದಾಗಿ 30 ಕೆಜಿ ತೂಕವನ್ನು ಇಳಸಿಕೊಂಡಿದ್ದಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.