Egg freshness test: ಮೊಟ್ಟೆ ಫ್ರೆಶ್ ಆಗಿದೆಯೋ, ಹಾಳಾಗಿದೆಯೋ? ಹೀಗೆ ಪತ್ತೆ ಹಚ್ಚಿ
ಅನೇಕ ಜನರು ಮೊಟ್ಟೆಗಳ ಫ್ರೆಶ್‌ನೆಸ್ ಬಗ್ಗೆ ಗಮನ ಹರಿಸುವುದಿಲ್ಲ. ಅಂದರೆ ಗೊತ್ತೊ, ಗೊತ್ತಿಲ್ಲದೆಯೋ ಕೆಟ್ಟ ಮೊಟ್ಟೆಗಳನ್ನು ತಿನ್ನುತ್ತಾರೆ. ಇದು ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಗಂಭೀರ ಫುಡ್ ಪಾಯಿಸನ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಮನೆಯಲ್ಲಿಯೇ ಸುಲಭವಾಗಿ ಪರಿಶೀಲಿಸಿ
ಮೊಟ್ಟೆ ಎಷ್ಟೇ ದುಬಾರಿಯಾದ್ರೂ ಅದನ್ನ ಇಷ್ಟಪಟ್ಟು ಕೊಂಡು ತಿನ್ನುವ, ದಿನಾ ತಿನ್ನುವ ಜನರೂ ನಮ್ಮ ನಡುವೆ ಇದ್ದಾರೆ. ಆದರೆ ನಾವು ಹೀಗೆ ಪ್ರೀತಿಯಿಂದ ತಿನ್ನುವ ಮೊಟ್ಟೆಯನ್ನ ಪರೀಕ್ಷಿಸದೆ ತಿನ್ನುವುದು ಎಷ್ಟು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?. ಅನೇಕ ಜನರು ಮೊಟ್ಟೆಗಳ ಫ್ರೆಶ್‌ನೆಸ್ ಬಗ್ಗೆ ಗಮನ ಹರಿಸುವುದಿಲ್ಲ. ಅಂದರೆ ಗೊತ್ತೊ, ಗೊತ್ತಿಲ್ಲದೆಯೋ ಕೆಟ್ಟ ಮೊಟ್ಟೆಗಳನ್ನು ತಿನ್ನುತ್ತಾರೆ. ಇದು ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಗಂಭೀರ ಫುಡ್ ಪಾಯಿಸನ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಈ ಅಪಾಯ ಹೆಚ್ಚಾಗುತ್ತದೆ. ಗುಡ್ ನ್ಯೂಸ್ ಅಂದ್ರೆ ಮೊಟ್ಟೆ ಫ್ರೆಶ್ ಆಗಿದೆಯಾ, ಕೆಟ್ಟಿದೆಯಾ ಎಂಬುದನ್ನು ಮನೆಯಲ್ಲಿಯೇ ಸುಲಭವಾಗಿ ಪರಿಶೀಲಿಸಬಹುದು.
ನೀರಿನ ಪರೀಕ್ಷೆ
ಮೊಟ್ಟೆಯ ತಾಜಾತನವನ್ನು ತಿಳಿದುಕೊಳ್ಳಲು ಸುಲಭವಾದ ಮಾರ್ಗವೆಂದರೆ ನೀರಿನ ಪರೀಕ್ಷೆ. ಇದಕ್ಕಾಗಿ ಒಂದು ಬಟ್ಟಲು ಅಥವಾ ಪಾತ್ರೆಯನ್ನು ನೀರಿನಿಂದ ತುಂಬಿಸಿ. ಅದರಲ್ಲಿ ಮೊಟ್ಟೆಯನ್ನು ಹಾಕಿ. ಮೊಟ್ಟೆ ಸಂಪೂರ್ಣವಾಗಿ ಮುಳುಗಿದರೆ, ಅದು ಸಂಪೂರ್ಣವಾಗಿ ತಾಜಾವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಮೊಟ್ಟೆ ನೇರವಾಗಿ ನಿಂತಿದ್ದರೆ ಅದು ಸ್ವಲ್ಪ ಹಳೆಯದಾಗಿರುತ್ತದೆ. ಆದರೆ ಅದನ್ನು ನೀವು ಬಳಸಬಹುದು. ಮತ್ತೊಂದೆಡೆ, ಮೊಟ್ಟೆಯು ನೀರಿನ ಮೇಲ್ಮೈಯಲ್ಲಿ ತೇಲಲು ಪ್ರಾರಂಭಿಸಿದರೆ ಅದು ಸಂಪೂರ್ಣವಾಗಿ ಹಾಳಾಗಿದೆ ಎಂದರ್ಥ. ಆಗ ತಕ್ಷಣವೇ ಎಸೆಯಬೇಕು.
ಹಳದಿ ಲೋಳೆ ಹೀಗಿರಬೇಕು
ಮೊಟ್ಟೆಯನ್ನು ಒಡೆದು ಅದರ ಹಳದಿ ಲೋಳೆ ಮತ್ತು ಬಿಳಿ ಬಣ್ಣದ ಬಣ್ಣವನ್ನು ಪರಿಶೀಲಿಸುವುದು ಸಹ ತಾಜಾತನವನ್ನು ಸೂಚಿಸುತ್ತದೆ. ಹಳದಿ ಲೋಳೆಯಲ್ಲಿ ಕೆಂಪು ಕಲೆಗಳು, ಕಪ್ಪು ಅಥವಾ ಹಸಿರು ಗುರುತುಗಳು ಕಂಡುಬಂದರೆ, ಅದು ಕೆಟ್ಟ ಮೊಟ್ಟೆ ಮತ್ತು ಅದನ್ನು ತಿನ್ನಬಾರದು. ಮತ್ತೊಂದೆಡೆ, ಹಳದಿ ಲೋಳೆಯ ಬಣ್ಣ ಸಾಮಾನ್ಯವಾಗಿದ್ದು, ಬಿಳಿ ಬಣ್ಣವು ಸ್ಪಷ್ಟ ಮತ್ತು ದಪ್ಪವಾಗಿ ಕಂಡುಬಂದರೆ ಈ ಮೊಟ್ಟೆ ಸುರಕ್ಷಿತ ಮತ್ತು ತಿನ್ನಲು ಯೋಗ್ಯವಾಗಿದೆ.
ವಾಸನೆ ಪರೀಕ್ಷೆ
ಮೊಟ್ಟೆಯ ಗುಣಮಟ್ಟವನ್ನು ಅದರ ವಾಸನೆಯಿಂದಲೂ ಕಂಡುಹಿಡಿಯಬಹುದು. ಹೇಗೆಂದರೆ ಮೊಟ್ಟೆಯನ್ನು ಒಡೆದು ಅದರ ವಾಸನೆಯನ್ನು ನೋಡಿ. ಅದು ಸಿಕ್ಕಾಪಟ್ಟೆ ವಾಸನೆ ಅಂದರೆ ವಿಚಿತ್ರವಾದ ವಾಸನೆಯನ್ನು ಹೊಂದಿದ್ದರೆ ಮೊಟ್ಟೆ ಕೆಟ್ಟುಹೋಗಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಮತ್ತೊಂದೆಡೆ, ತಾಜಾ ಮೊಟ್ಟೆಗಳು ಯಾವುದೇ ವಾಸನೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಅಂತಹ ಮೊಟ್ಟೆಗಳನ್ನು ಸೇವಿಸುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಶೇಕ್ ಟೆಸ್ಟ್
ಶೇಕ್ ಟೆಸ್ಟ್ ಇನ್ನೊಂದು ಸುಲಭ ವಿಧಾನ. ಮೊಟ್ಟೆಯನ್ನು ನಿಮ್ಮ ಕಿವಿಯ ಬಳಿ ಇಟ್ಟು ಸ್ವಲ್ಪ ಅಲ್ಲಾಡಿಸಿ. ಅದರಿಂದ ನೀರಿನಂತಹ ಶಬ್ದ ಬಂದರೆ ಆ ಮೊಟ್ಟೆ ಹಾಳಾಗಿದೆ ಎಂದರ್ಥ. ಮತ್ತೊಂದೆಡೆ ತಾಜಾ ಮೊಟ್ಟೆಯನ್ನು ಅಲ್ಲಾಡಿಸಿದಾಗ ಯಾವುದೇ ಶಬ್ದ ಬರುವುದಿಲ್ಲ. ಅದರ ಬಿಳಿ ಭಾಗ ಮತ್ತು ಹಳದಿ ಭಾಗ ದಪ್ಪವಾಗಿರುತ್ತದೆ ಮತ್ತು ಒಳಗಿನಿಂದ ಬಿಗಿಯಾಗಿರುತ್ತದೆ.
ಫ್ರಿಡ್ಜ್‌ನಲ್ಲಿ ಇಟ್ರೆ ಫ್ರೆಶ್ ಅಂತಲ್ಲ!
ಸಾಮಾನ್ಯವಾಗಿ ಜನರು ಮೊಟ್ಟೆಗಳನ್ನು ಖರೀದಿಸಿ ಫ್ರಿಡ್ಜ್‌ನಲ್ಲಿ ಹಲವಾರು ದಿನಗಳವರೆಗೆ ಇಡುತ್ತಾರೆ. ಅವಧಿ ಮುಗಿದೆದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸದೆ ಬಳಸುತ್ತಾರೆ. ಕೆಟ್ಟ ಮೊಟ್ಟೆಗಳನ್ನು ತಿನ್ನುವುದರಿಂದ ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಫುಡ್ ಪಾಯಿಸನ್‌ನಂತಹ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿಯೇ ತಜ್ಞರು ಯಾವಾಗಲೂ ಮೊಟ್ಟೆಗಳನ್ನು ತಿನ್ನುವ ಮೊದಲು ನೀರಿನ ಪರೀಕ್ಷೆ, ಹಳದಿ ಲೋಳೆ ಪರೀಕ್ಷೆ ಮತ್ತು ವಾಸನೆ ಪರೀಕ್ಷೆ, ಮತ್ತು ಶೇಕ್ ಟೆಸ್ಟ್ ಮೂಲಕ ಅವುಗಳ ತಾಜಾತನವನ್ನು ಪರೀಕ್ಷಿಸಲು ಸಲಹೆ ನೀಡುತ್ತಾರೆ.