MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Multi-Grain Adai Dosa Recipe: ರುಚಿಕರ, ಆರೋಗ್ಯಕರವಾದ ಹಳ್ಳಿ ಶೈಲಿಯ ಅಡೆ ದೋಸೆ ಮಾಡುವ ವಿಧಾನ

Multi-Grain Adai Dosa Recipe: ರುಚಿಕರ, ಆರೋಗ್ಯಕರವಾದ ಹಳ್ಳಿ ಶೈಲಿಯ ಅಡೆ ದೋಸೆ ಮಾಡುವ ವಿಧಾನ

ಅಡೆ ದೋಸೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ. ಮದುವೆ ಸಮಾರಂಭಗಳಲ್ಲಿ ಇದು ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಈ ಲೇಖನದಲ್ಲಿ ರುಚಿಕರವಾದ ಅಡೆ ದೋಸೆ ಮಾಡುವ ವಿಧಾನವನ್ನು ವಿವರಿಸಲಾಗಿದೆ.

2 Min read
Author : Mahmad Rafik
Published : Sep 07 2025, 01:33 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Social Media

ಇತ್ತೀಚಿನ ದಿನಗಳಲ್ಲಿ ಅಡೆ ದೋಸೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತದೆ. ಅಡೆ ದೋಸೆ ಸವಿಯಲು ಬೆಂಗಳೂರಿನ ಜನರು ನಿರ್ಧಿಷ್ಟ ಹೋಟೆಲ್‌ಗೆ ತೆರಳುತ್ತಾರೆ. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ ಅಡೆ ದೋಸೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುತ್ತದೆ.

26
Image Credit : Social Media

ಹಲವು ಧಾನ್ಯಗಳನ್ನು ಬಳಸಿ ಈ ಅಡೆ ದೋಸೆಯನ್ನು ಮಾಡಲಾಗುತ್ತದೆ. ಅಡೆ ದೋಸೆಯಲ್ಲಿ ಉಪ್ಪು-ಖಾರ ಮಿಕ್ಸ್ ಆಗಿರೋದರಿಂದ ಸೈಡ್‌ಗೆ ಚಟ್ನಿಯ ಅವಶ್ಯಕತೆಯೂ ಇರಲ್ಲ. ಒಮ್ಮೆ ಅಡೆ ದೋಸೆ ರುಚಿ ನೋಡಿದವರು ಮತ್ತೆ ಮತ್ತೆ ಕೇಳುತ್ತಾರೆ. ಈ ಲೇಖನದಲ್ಲಿ ರುಚಿಯಾದ ಅಡೆದೋಸೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

Related Articles

Related image1
ಅಚ್ಚರಿಯಾದ್ರೂ ಸತ್ಯವಂತೆ, ಉಳಿದ ಇಡ್ಲಿ, ದೋಸೆ ಹಿಟ್ಟನ್ನು ಹೀಗೂ ಬಳಕೆ ಮಾಡ್ತಾರಂತೆ!
Related image2
ನೀವು ದೋಸೆ ಪ್ರಿಯರೇ? ಹಾಗಿದ್ರೆ ನಮ್ಮ ಬೆಂಗಳೂರಿನ ಈ ಜಾಗಗಳಲ್ಲಿ ದೋಸೆ ಟ್ರೈ ಮಾಡ್ಲೇಬೇಕು!
36
Image Credit : Social Media

ಅಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

  • ದೋಸೆ ಅಕ್ಕಿ: 2 ಕಪ್, ತೊಗರಿ ಬೇಳೆ: 1 ಕಪ್,
  • ಕಡಲೆ ಬೇಳೆ: 1 ಕಪ್, ಹೆಸರುಬೇಳೆ: ಅರ್ಧ ಕಪ್
  • ಉದ್ದಿನಬೇಳೆ: 3 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್
  • ಬ್ಯಾಡಗಿ ಮೆಣಸಿನಕಾಯಿ: 7 ರಿಂದ 8, ಹಸಿ ತೆಂಗಿನಕಾಯಿ ತುರಿ: 1 ಕಪ್
  • ಉಪ್ಪು: ರುಚಿಗೆ ತಕ್ಕಷ್ಟು, ತುಪ್ಪ ಅಥವಾ ಎಣ್ಣೆ: ದೋಸೆ ಮೇಲೆ ಸವರಲು
46
Image Credit : Social Media

ಅಡೆ ದೋಸೆ ಮಾಡುವ ವಿಧಾನ

ಮೊದಲಿಗೆ ಅಕ್ಕಿ, ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆ ಎರಡರಿಂದ ಮೂರು ಲೋಟ ನೀರು ಸೇರಿಸಿ 6 ರಿಂದ 7 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ರಾತ್ರಿ ನೆನೆಸಿಟ್ಟು ಬೆಳಗ್ಗೆ ರುಬ್ಬಿಕೊಳ್ಳಬಹುದು.

56
Image Credit : Social Media

ಎಲ್ಲಾ ಕಾಳು, ಜೀರಿಗೆ ಮತ್ತು ಬ್ಯಾಡಗಿ ಮೆಣಸಿನಕಾಯಿ 6 ರಿಂದ 7 ಗಂಟೆಗಳ ಕಾಲ ನೆನೆಸಿದ ಬಳಿಕ ಎರಡ್ಮೂರು ನೀರಿನಿಂದ ವಾಶ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ 1 ಕಪ್‌ನಷ್ಟು ಹಸಿ ತೆಂಗಿನಕಾಯಿ ತುರಿ ಸೇರಿಸಿಕೊಳ್ಳಬೇಕು. ತದನಂತರ ಎಲ್ಲವನ್ನು ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು.

66
Image Credit : Social Media

ಈಗ ಒಲೆ ಆನ್ ಮಾಡ್ಕೊಂಡು ಕಾವಲಿಟ್ಟುಕೊಳ್ಳಿ. ಕಾವಲಿ ಬಿಸಿಯಾಗ್ತಿದ್ದಂತೆ ಹಿಟ್ಟನ್ನು ತೆಳುವಾಗಿ ಹರಡಿ ಎರಡೂ ಬದಿಯಲ್ಲಿ ಬೇಯಿಸಿಕೊಳ್ಳಿ. ದೋಸೆ ಹಾಕುವಾಗ ತುಪ್ಪ ಅಥವಾ ಎಣ್ಣೆ ಬಳಸಬೇಕು. ಇದರಿಂದ ದೋಸೆ ಗರಿಗರಿಯಾಗಿರುತ್ತದೆ. ತೆಂಗಿನಕಾಯಿ/ಕಡಲೆಕಾಯಿ/ಕೆಂಪು ಮೆಣಸಿನಕಾಯಿ ಜೊತೆ ಅಡ ದೋಸೆ ಸವಿಯಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರೆಸಿಪಿ
ಆಹಾರ
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
ನಾಳಿನ ಬ್ರೇಕ್ ಫಾಸ್ಟ್ ಏನು? ಟೆನ್ಷನ್ ಬೇಡ ಹೈ ಪ್ರೋಟೀನ್ ರೆಸಿಪಿ ಇಲ್ಲಿದೆ
Recommended image2
ಮೀನಿನ ವಾಸನೆ, ಜಿಗುಟು ಅಡುಗೆ ಹಾಳು ಮಾಡ್ತಿದ್ಯಾ? ರುಚಿ ಹೆಚ್ಚಿಸುವ ಕ್ಲೀನಿಂಗ್ ಸೀಕ್ರೆಟ್ಸ್ ಇವೇ ನೋಡಿ
Recommended image3
Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​: ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ
Related Stories
Recommended image1
ಅಚ್ಚರಿಯಾದ್ರೂ ಸತ್ಯವಂತೆ, ಉಳಿದ ಇಡ್ಲಿ, ದೋಸೆ ಹಿಟ್ಟನ್ನು ಹೀಗೂ ಬಳಕೆ ಮಾಡ್ತಾರಂತೆ!
Recommended image2
ನೀವು ದೋಸೆ ಪ್ರಿಯರೇ? ಹಾಗಿದ್ರೆ ನಮ್ಮ ಬೆಂಗಳೂರಿನ ಈ ಜಾಗಗಳಲ್ಲಿ ದೋಸೆ ಟ್ರೈ ಮಾಡ್ಲೇಬೇಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved