ಮನಸ್ಸಿಗೆ ಮುದ, ಹೃದಯಕ್ಕೆ ಹತ್ತಿರವಾಗುವ ಚೆಂದದ ಸಿನಿಮಾಗಳು
ನೀವು ಸುಂದರವಾದ, ಮನಸ್ಸಿಗೆ ಮುದ ನೀಡುವ, ಹೃದಯಕ್ಕೆ ಹತ್ತಿರವಾಗುವ ಒಂದಷ್ಟು ಸಿನಿಮಾಗಳು ಇಲ್ಲಿವೆ. ಇವುಗಳನ್ನು ನೋಡಿದ್ರೆ ನೀವು ಖಂಡಿತವಾಗಗಿಯೂ ಖುಷಿ ಪಡುತ್ತೀರಿ.

ಗಮಕ್ ಗರ್: ಒಂದು ಫ್ಯಾಮಿಲಿ ತಮ್ಮ ಕುಟುಂಬದ ಮನೆಗೆ ವರ್ಷಕ್ಕೊಮ್ಮೆ ಭೇಟಿಯಾಗುತ್ತಾರೆ. ಇಲ್ಲಿ ಏನೂ ಆಗೋದೆ ಇಲ್ಲ, ಆದರೆ ಎಲ್ಲವೂ ಬದಲಾಗುತ್ತದೆ.
ರೈನ್ ಕೋಟ್ : ಇಬ್ಬರು ಮಾಜಿ ಪ್ರೇಮಿಗಳು ಒಂದು ಮಳೆಗಾಲದ ಸಂಜೆಯಲ್ಲಿ ಭೇಟಿಯಾಗುತ್ತಾರೆ. ಸಮಯ ಸ್ಥಬ್ಧವಾಗುತ್ತದೆ. ನಂತರ ಪ್ರೀತಿ, ನೆನಪುಗಳು ಎಲ್ಲವೂ ಸಾಗುತ್ತದೆ.
ದಿ ಜಪಾನೀಸ್ ವೈಫ್ : ಈ ಕಥಾವಸ್ತುವು ಒಬ್ಬ ಬಂಗಾಳಿ ವ್ಯಕ್ತಿ ಮತ್ತು ಅವನ ಜಪಾನಿನ ಲೆಟರ್ ಫ್ರೆಮ್ಡ್ ನಡುವಿನ ಅಸಾಮಾನ್ಯ ಸಂಬಂಧದ ಸುತ್ತ ಸುತ್ತುತ್ತದೆ. ಅವರು ಪರಸ್ಪರ ನೋಡದೆ ಪತ್ರಗಳ ಮೂಲಕ ಮದುವೆಯ ಪ್ರತಿಜ್ಞೆ ತೆಗೆದುಕೊಳ್ಳುತ್ತಾರೆ.
ಧೋಬಿ ಘಾಟ್ : ಜೀವನದ ವಿವಿಧ ಹಂತಗಳಲ್ಲಿ ನಾಲ್ವರು ಜನರು ಪರಸ್ಪರ ಕನೆಕ್ಟ್ ಆಗುತ್ತಾರೆ. ಈ ನಾಲ್ಕು ಜನರ ಕಥೆ ಮುಂದೆ ಏನೆಲ್ಲಾ ತಿರುವು ಕಾಣುತ್ತದೆ ಅನ್ನೋದೆ ಕಥೆ.
ಹಮೀದ್ : ತನ್ನ ಮೃತ ತಂದೆಯೊಂದಿಗೆ ಮಾತನಾಡಲು, ಬಾಲಕ ಹಮೀದ್ 786 ಗೆ ಕರೆ ಮಾಡುವ ಮೂಲಕ ದೇವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾನೆ, ಅದು ದೇವರ ಸಂಖ್ಯೆ ಎಂದು ಅವನು ನಂಬುತ್ತಾನೆ. ಅವನ ಕರೆಗೆ ಉತ್ತರ ಸಿಕ್ಕಾಗ ಅವನ ಜೀವನವು ತಿರುವು ಪಡೆಯುತ್ತದೆ.
ಏಬ್ ಅಲಾಯ್ ಓ : ಮಂಗ ಹಿಡಿಯುವವನಾಗಿ ನೇಮಕಗೊಂಡ ಯುವ ವಲಸೆ ಕಾರ್ಮಿಕ ಅಂಜನಿ, ಸರ್ಕಾರಿ ಕಟ್ಟಡಗಳ ಹೊರಗೆ ನಿಯೋಜಿಸಲಾದ ತನ್ನ ತಂಡದ ಹೊಸ ಸದಸ್ಯರಾದ ನಂತರ ದೆಹಲಿಯ ಜೀವನಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾನೆ. ಅಲ್ಲೇನು ಆಗುತ್ತೆ ಅನ್ನೋದು ಕಥೆ.
ಫೈರ್ ಇನ್ ದಿ ಮೌಂಟೈನ್ : ಹಿಮಾಲಯದ ಪರ್ವತ ಪ್ರದೇಶದಲ್ಲಿರುವ ಹಳ್ಳಿಯಲ್ಲಿ ತನ್ನ ಮಗನನ್ನು ಫಿಸಿಯೋ ಥೆರಪಿ ಕರೆದೊಯ್ಯಲು ರಸ್ತೆ ನಿರ್ಮಿಸಲು ತಾಯಿಯೊಬ್ಬರು ಹಣ ಉಳಿಸಲು ಶ್ರಮಿಸುತ್ತಾರೆ. ಆದರೆ ಶಾಮನಿಕ್ ಆಚರಣೆಯೇ ಪರಿಹಾರ ಎಂದು ನಂಬುವ ಆಕೆಯ ಪತಿ ಆಕೆಯ ದಾರಿಗೆ ಅಡ್ಡಿಯಾಗುತ್ತಾನೆ.
ಪೆಬಲ್ಸ್ : ಕುಡುಕ ಮತ್ತು ದೌರ್ಜನ್ಯ ಎಸಗುವ ಗಂಡನೊಬ್ಬ ತನ್ನ ಚಿಕ್ಕ ಮಗನನ್ನು ಎಳೆದುಕೊಂಡು ಹೋಗಿ ತನ್ನನ್ನು ತೊರೆದು ಹೋದ ಹೆಂಡತಿಯನ್ನು ಮರಳಿ ಕರೆತರುತ್ತಾನೆ. ಈ ಪ್ರವಾಸವು ಅವರ ಜೀವನವನ್ನು ತೀವ್ರವಾಗಿ ಬದಲಾಯಿಸುತ್ತದೆ.
ತ್ರಿ ಆಫ್ ಅಸ್ : ಆರಂಭದಲ್ಲಿಯೇ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ತನ್ನ ಊರಿಗೆ ಭೇಟಿ ನೀಡಿದಾಗ, ಸಮಾಧಿಯಾದ ನೆನಪುಗಳು ಮತ್ತು ಹಿಂದಿನ ಪ್ರೀತಿಯು ಯಾವ ರೀತಿ ತೆರೆದುಕೊಳ್ಳುತ್ತದೆ ಅನ್ನೋದು ಕಥೆ.
ಐಸೇ ಹೀ : ಒಬ್ಬ ವಯಸ್ಕ ವಿಧವೆ ಮಹಿಳೆ, ಸಮಾಜದ ಆಚರಣೆಗಳನ್ನು ತಿರಸ್ಕರಿಸಿ, ತನಗೆ ಬೇಕಾದಂತೆ ಜೀವಿಸಲು ಪ್ರಾರಂಭಿಸುತ್ತಾಳೆ. ಇದು ಜೀವನದ ಬಗ್ಗೆ ತಿಳಿಸುವ ಸುಂದರ ಸಿನಿಮಾ.