- Home
- Karnataka Districts
- Bengaluru Urban
- ಡಾ.ಕೃತಿಕಾ ರೆಡ್ಡಿ ಪ್ರಕರಣಕ್ಕೆ ಟ್ವಿಸ್ಟ್; ಅಕ್ರಮ ಸಂಬಂಧದ ಕರಾಳ ನೆರಳು?
ಡಾ.ಕೃತಿಕಾ ರೆಡ್ಡಿ ಪ್ರಕರಣಕ್ಕೆ ಟ್ವಿಸ್ಟ್; ಅಕ್ರಮ ಸಂಬಂಧದ ಕರಾಳ ನೆರಳು?
Twist in Doctor Krithika Reddy case: ಆರೋಗ್ಯ ಸಮಸ್ಯೆ ಮರೆಮಾಚಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದ ಡಾ.ಮಹೀಂದ್ರ ರೆಡ್ಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾರತಹಳ್ಳಿ ಪೊಲೀಸರು ಅಕ್ರಮ ಸಂಬಂಧದ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಡಾ.ಕೃತಿಕಾ ರೆಡ್ಡಿ ಪ್ರಕರಣ
ಗಂಡನಿಂದಲೇ ಕೊ*ಲೆಯಾದ ಡಾ.ಕೃತಿಕಾ ರೆಡ್ಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಕೃತಿಕಾ ತಮ್ಮ ಆರೋಗ್ಯ ಸಮಸ್ಯೆಗಳನ್ನು (ಅಜೀರ್ಣ, ಗ್ಯಾಸ್ಟಿಕ್ ಮತ್ತು ಲೋ ಶುಗರ್) ಮರೆಮಾಡಿ ಮದುವೆಯಾಗಿದ್ದರು. ಇದರಿಂದ ಗಂಡ ಡಾ.ಮಹೀಂದ್ರ ರೆಡ್ಡಿ ಇಂಜೆಕ್ಷನ್ ನೀಡಿ ಪತ್ನಿಯನ್ನು ಕೊ*ಲೆಗೈದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದೀಗ ಪ್ರಕರಣದ ಹಿಂದೆ ಅಕ್ರಮ ಸಂಬಂಧದ ನೆರಳು ಇತ್ತಾ ಎಂಬುದರ ಬಗ್ಗೆ ಅನುಮಾನ ಮೂಡಿದೆ.
ಡಾ.ಕೃತಿಕಾ ರೆಡ್ಡಿ ಮತ್ತು ಡಾ.ಮಹೀಂದ್ರ ರೆಡ್ಡಿ
ಡಾ.ಕೃತಿಕಾ ರೆಡ್ಡಿ ಮತ್ತು ಡಾ.ಮಹೀಂದ್ರ ರೆಡ್ಡಿ ಇಬ್ಬರು ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರು. ಆಗರ್ಭ ಶ್ರೀಮಂತೆಯಾಗಿದ್ದ ಕೃತಿಕಾ ರೆಡ್ಡಿ ತಂದೆ ಮುನಿರೆಡ್ಡಿಯವರು ಮಾರತಹಳ್ಳಿ ಭಾಗದಲ್ಲಿ ಅನೇಕ ವಾಣಿಜ್ಯ ಮಳಿಗೆಗಳ ಮಾಲೀಕರಾಗಿದ್ದಾರೆ. ಮಾಹಿತಿ ಪ್ರಕಾರ, ಮುನಿರೆಡ್ಡಿ ಅವರು ತಿಂಗಳಿಗೆ 10 ರಿಂದ 15 ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಾರೆ. ಮಗಳಿಗೆ ದೊಡ್ಡದಾದ ಕ್ಲಿನಿಕ್ ಆರಂಭಕ್ಕೆ ಮುನಿರೆಡ್ಡಿ ಹಣಕಾಸಿನ ನೆರವು ಸಹ ನೀಡಿದ್ದರು.
ಅಕ್ರಮ ಸಂಬಂಧ
ಪ್ರಕರಣ ದಾಖಲಿಸಿಕೊಂಡಿರುವ ಮಾರತಹಳ್ಳಿ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಗಳ ಸಾವಿನ ಬಗ್ಗೆ ಮುನಿರಡ್ಡಿ ದೂರು ದಾಖಲಿಸಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಅಕ್ರಮ ಸಂಬಂಧದ ಬಗ್ಗೆ ಮುನಿರೆಡ್ಡಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಯುವತಿಯರ ಜೊತೆ ಸಂಪರ್ಕ
ಅಳಿಯ ಡಾ.ಮಹೀಂದ್ರ ರೆಡ್ಡಿ ಹಲವು ಯುವತಿಯರ ಜೊತೆ ಸಂಪರ್ಕ ಹೊಂದಿದ್ದನು. ಅವರೊಂದಿಗೆ ಮಹೀಂದ್ರಗೆ ನಿಕಟವಾದ ಸಂಬಂಧವಿತ್ತು ಎಂದು ಮುನಿರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ನಿಗೆ ಅಕ್ರಮ ಸಂಬಂಧ ವಿಷಯ ಗೊತ್ತಾಗಿದ್ದರಿಂದ ಮಹೀಂದ್ರ ರೆಡ್ಡಿ ಕೊ*ಲೆ ಮಾಡಿದನಾ ಎಂಬುದರ ಬಗ್ಗೆಯೂ ಅನುಮಾನ ಮೂಡಿದೆ. ಈ ಆಯಾಮದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ
ಮಹೀಂದ್ರ ರೆಡ್ಡಿ ಬೆಂಗಳೂರು ಹೊರವಲಯದ ನಿವಾಸಿಯಾಗಿದ್ದು, ಶ್ರೀಮಂತ ಕುಟುಂಬದ ಮಗನಾಗಿದ್ದನು. ಹಾಗಾಗಿ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಡಾ. ಮಹೇಂದ್ರ ರೆಡ್ಡಿ (ಜನರಲ್ ಸರ್ಜನ್) ಮತ್ತು ಡಾ. ಕೃತಿಕಾ ರೆಡ್ಡಿ (ಡರ್ಮೆಟಾಲಜಿಸ್ಟ್) ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೇ ವರ್ಷ ಏಪ್ರಿಲ್ 23ರಂದು ಇಬ್ಬರ ಮದುವೆ ನಡೆದಿತ್ತು.
ಇದನ್ನೂ ಓದಿ: ವಿಜಯಪುರ: ಮದ್ಯ ಸೇವಿಸಿದ ಬಳಿಕ ಮೂವರ ನಡುವೆ ಜಗಳ: ಇಬ್ಬರು ಸೇರಿ ಓರ್ವನ ಹ*ತ್ಯೆ!