ಮಹಿಳೆಯೊಬ್ಬಳ ಚಾಕೊಲೇಟ್ ಕಥೆ ಅಚ್ಚರಿ ಹುಟ್ಟಿಸುವಂತಿದೆ. ಆಕೆ ಒಂದು ಚಾಕೊಲೇಟ್ ಪ್ಯಾಕ್ ಖರೀದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾಳೆ. 24 ಗಂಟೆಗಳ ಪ್ರಯಾಣ ಮುಗಿಸಿದ ಆಕೆ ಪ್ರೀತಿಯ ಚಾಕೊಲೇಟ್‌ ಡಬ್ಬ ಹಿಡಿದು ಸಂಭ್ರಮಿಸಿದ್ದಾಳೆ. 

ಸ್ವೀಟ್ ಕ್ರೇವ್ (Sweet Crave) ಶುರುವಾದ್ರೆ ಅದನ್ನು ತಡೆಯೋದು ಕಷ್ಟ. ಕೆಲವರು ತಿಂಡಿ ಆದ್ಮೇಲೆ ಮತ್ತೆ ಕೆಲವರು ಊಟ ಆದ್ಮೇಲೆ ಸಿಹಿ ತಿಂತಾರೆ. ಮನೆಯಲ್ಲಿ ಒಂದಲ್ಲ ಒಂದು ಸ್ವೀಟ್ ಇರ್ಲೇಬೇಕು ಎನ್ನುವವರಿದ್ದಾರೆ. ಏನೂ ಇಲ್ಲ ಎಂದಾಗ ಬೆಲ್ಲ ತಿಂದು ತಮ್ಮ ಕ್ರೇವ್ ತೀರಿಸಿಕೊಳ್ಳುವವರುಂಟು. ಇನ್ನು ಕೆಲವರು ಊಟವಾದ್ಮೇಲೆ ಬೇಕು ಅಂತಾನೇ ಚಾಕೊಲೇಟ್ ತಂದಿಟ್ಟುಕೊಳ್ತಾರೆ. ಮನೆಯಲ್ಲಿ ಏನೂ ಇಲ್ಲ ಅಂದಾಗ ಹತ್ತಿರ ಇರುವ ಅಂಗಡಿಗೆ ಹೋಗೋದು ಮಾಮೂಲಿ. ಸಿಹಿ ಯಾವುದಾದ್ರೂ ಓಕೆ ಎನ್ನುವವರಿಗೆ ತೊಂದ್ರೆ ಇಲ್ಲ. ಆದ್ರೆ ಪರ್ಟಿಕ್ಯುಲರ್ ಇದೇ ಸಿಹಿ ಬೇಕು ಅಂದ್ರೆ ಕಷ್ಟ. ಇಂಥ ಚಟಕ್ಕೆ ಬಿದ್ದ ಮಹಿಳೆಯೊಬ್ಬಳು, ಸಿಹಿ ಆಸೆಗೆ ಲಂಡನ್ ನಿಂದ ರೊಮೇನಿಯಾಗೆ ತೆರಳಿದ್ದಾಳೆ.

ಸಿಹಿ ತಿಂಡಿಗಾಗಿ ವಿದೇಶಿ ಪ್ರಯಾಣ : ಇದು ವಿಚಿತ್ರ ಅನ್ನಿಸ್ಬಹುದು. ಆದ್ರೆ ಸತ್ಯ. ಬ್ರಿಟನ್ ಮಹಿಳೆಯೊಬ್ಬಳು ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ. ಆಕೆ ಹೆಸರು ಕೇಟ್ ಟಕಾಕ್ಸ್. 34 ವರ್ಷದ ಕೇಟ್ ಟಕಾಕ್ಸ್ ಗೆ ಇಷ್ಟದ ಚಾಕೊಲೇಟ್ ತಿನ್ನುವ ಆಸೆಯಾಗಿತ್ತು. ಹಾಗಾಗಿ ಬ್ರಿಟನ್ನಿಂದ ರೋಮೇನಿಯಾಗೆ ಪ್ರಯಾಣ ಬೆಳೆಸಲು ಮುಂದಾದ್ಲು. ಆಕೆ 2400 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾಳೆ.

ಪ್ರತಿದಿನ ಕೆಂಪು ಮಾಂಸ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ: ಹೊಸ ಸಂಶೋಧನೆ ವರದಿ ಎಚ್ಚರಿಕೆ

ಕೇಟ್ ಟಕಾಕ್ಸ್ ಗೆ ಕಾಡಿತ್ತು ಚಾಕೊಲೇಟ್ ತಿನ್ನುವ ಆಸೆ : ಕೇಟ್, ಸೆಪ್ಟೆಂಬರ್ 15 ರಂದು ಲಂಡನ್ನಿಂದ ರೊಮೇನಿಯಾದ ಕ್ಲೂಜ್-ನಪೋಕಾಗೆ ಪ್ರಯಾಣ ಬೆಳೆಸಿದ್ದಳು. ಅಲ್ಲಿ ಫೆರೆರೊ ರೋಚರ್ ಪಾಕೆಟ್ ಕಾಫಿ ಚಾಕೊಲೇಟ್ (Ferrero Rocher Pocket Coffee Chocolate)ಗಳನ್ನು ಖರೀದಿಸಿದ್ದಳು. ಇದರಲ್ಲಿ ಸ್ವೀಟ್ ಎಸ್ಪ್ರೆಸೊದ ಶಾಟ್ ಕೂಡ ಇತ್ತು. ಕೆಲ್ಸ ಮುಗಿಸಿ ರಾತ್ರಿ 10 ಗಂಟೆಗೆ ಕೇಟ್ ಟಕ್ಸಾಕ್ಸ್ ವಿಮಾನ ಏರಿದ್ದಳು. ಅಲ್ಲಿನ ಸಮಯ ಸುಮಾರು 3.15ಕ್ಕೆ ಆಕೆ ಲ್ಯಾಂಡ್ ಆಗಿದ್ದಾಳೆ. ಇಡೀ ದಿನವನ್ನು ಅವಳು, ತಾನು ಹುಟ್ಟಿದ್ದ ಕ್ಲೂಜ್ನಲ್ಲಿ ಕಳೆದಿದ್ದಾಳೆ. ನಂತ್ರ ತನಗಿಷ್ಟವಾದ ಸ್ವೀಟ್ಸ್ ಮತ್ತು ಚಾಕೊಲೇಟ್ ಖರೀದಿ ಮಾಡಿದ್ದಾಳೆ. ಅಲ್ಲಿ ಇಲ್ಲಿ ಸುತ್ತಾಡಿದ ಕೇಟ್, ಫ್ರೀಜ್ ಮ್ಯಾಗ್ನೆಟ್ ಕೂಡ ಖರೀದಿ ಮಾಡಿದ್ಲು.

ಮರುದಿನ ರಾತ್ರಿ 1 ಗಂಟೆಗೆ ಲಂಡನ್ ವಾಪಸ್ : ಕೇಟ್ ಟಕಾಕ್ಸ್ ತನ್ನೆಲ್ಲ ಕೆಲ್ಸ ಮುಗಿಸಿ ರಾತ್ರಿ 10 ಗಂಟೆಗೆ ಮತ್ತೆ ವಿಮಾನ ಹತ್ತಿದ್ದಾಳೆ. ರಾತ್ರಿ 1 ಗಂಟೆಗೆ ವಾಪಸ್ ಲಂಡನ್ ತಲುಪಿದ್ದಾಳೆ. ಎಲ್ಲ ಖರ್ಚು, ವಿಮಾನ ಹಾರಾಟ ಸೇರಿ ಆಕೆ 150 ಡಾಲರ್ ಅಂದರೆ 13 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ.

ನೀರಿನಿಂದಲ್ಲ ಬಿಯರ್‌ನಿಂದ ಸ್ನಾನ; ಪ್ರವಾಸಿಗರನ್ನು ಆಕರ್ಷಿಸುತ್ತಿದೆ ನ್ಯೂ ಟ್ರೆಂಡ್

ಕೇಟ್ ಟಕಾಕ್ಸ್ ಈ ಕೆಲ್ಸಕ್ಕೆ ಕಾರಣ ಏನು? : ಕೇಟ್ ಟಕಾಕ್ಸ್ ದೇಶ ಸುತ್ತೋದನ್ನು ಇಷ್ಟಪಡ್ತಾಳೆ. ಆಕೆ ಲಂಡನ್ ನಿಂದ ರೊಮೇನಿಯಾಗೆ ಹೋಗಿ ಖರೀದಿ ಮಾಡಿದ್ದು ಒಂದೇ ಚಾಕೊಲೇಟ್ ಡಬ್ಬವನ್ನು. ಇದನ್ನು ಕೇಳಿದ ಆಕೆ ಸ್ನೇಹಿತರು ದಂಗಾಗಿದ್ದಾರೆ. ಆದ್ರೆ ಇದಕ್ಕೂ ಕಾರಣವಿದೆ ಎನ್ನುತ್ತಾಳೆ ಕೇಟ್ ಟಕಾಕ್ಸ್. ಆಕೆ ಪ್ರಕಾರ, ಲಂಡನ್ ನಲ್ಲಿರುವ ರೊಮೇನಿಯಾ ಶಾಪ್ ನಲ್ಲಿಯೂ ಸಿಹಿ ತಿಂಡಿ ಸಿಗುತ್ತದೆ. ಆದ್ರೆ ಫೆರೆರೊ ರೋಚರ್ ಪಾಕೆಟ್ ಕಾಫಿ ಚಾಕೊಲೇಟ್ ಇಲ್ಲಿ ಸಿಗೋದಿಲ್ಲ. ಅದ್ರ ಚಾಕೊಲೇಟ್ ಟೇಸ್ಟ್ ಮಾಡಿ ನೋಡಿ, ಬಿಡೋದಿಲ್ಲ ಎನ್ನುತ್ತಾಳೆ ಕೇಟ್ ಟಕಾಕ್ಸ್. ಕೇವಲ ತಿಂಡಿ ತಿನ್ನಲು ವಿದೇಶಕ್ಕೆ ಹೋಗುವವರಲ್ಲಿ ಕೇಟ್ ಮೊದಲಿನವಳಲ್ಲ. ಅನೇಕರು ಇಂಥ ಹವ್ಯಾಸ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂಥವರ ಸಂಖ್ಯೆ ಹೆಚ್ಚಾಗ್ತಿದೆ.