Mahalaya Amavasya: ಮಹಾಲಯ ಅಮಾವಾಸ್ಯೆ ಪೂರ್ವಜರ ಶ್ರಾದ್ಧಕ್ಕೆ ಮೀಸಲು. ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಏನೆಲ್ಲ ಮಾಡ್ಬೇಕು? ಸೂರ್ಯಗ್ರಹಣ ಕೂಡ ಮಹಾಲಯ ಅಮವಾಸ್ಯೆ ದಿನವೇ ಬಂದಿರೋದ್ರಿಂದ ಶ್ರಾದ್ಧ ಮಾಡಲು ಯಾವುದು ಉತ್ತರ ಸಮಯ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನಾಳೆ ಅಂದ್ರೆ ಸೆಪ್ಟೆಂಬರ್ 21 ರಂದು ಪಿತೃ ಪಕ್ಷ (pitru paksh)ದ ಕೊನೆಯ ದಿನ. ಮಹಾಲಯ ಅಮಾವಾಸ್ಯೆ (Mahalaya Amavasya). ಜನರು ತಮ್ಮ ಪೂರ್ವಜರ ಆತ್ಮ ಶಾಂತಿಗಾಗಿ ಶ್ರಾದ್ಧ ಮಾಡ್ತಾರೆ, ತರ್ಪಣ ಬಿಡ್ತಾರೆ. ಈ ದಿನ ಪೂರ್ವಜರನ್ನು ಸಂತೋಷಗೊಳಿಸಿದ್ರೆ ಪಿತೃ ದೋಷ ನಿವಾರಣೆಯಾಗುತ್ತದೆ. ಎಲ್ಲ ಕಷ್ಟಗಳು ದೂರವಾಗಿ, ಪೂರ್ವಜರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ಮಹತ್ವದ ಸ್ಥಾನವಿದೆ. ಶುದ್ಧ ಮನಸ್ಸಿನಿಂದ ಸರಿಯಾದ ವಿಧಾನದಲ್ಲಿ ಪೂರ್ವಜರಿಗೆ ತರ್ಪಣ ಬಿಡೋದು ಇಲ್ಲಿ ಮುಖ್ಯ. ಈ ಬಾರಿ ಮಹಾಲಯ ಅಮಾವಾಸ್ಯೆ ದಿನವೇ ವರ್ಷದ ಕೊನೆಯ ಸೂರ್ಯಗ್ರಹಣ ಕೂಡ ಬಂದಿದೆ. ಹಾಗಾಗಿ ಮಹಾಲಯ ಅಮಾವಾಸ್ಯೆ ದಿನ ಏನು ಮಾಡ್ಬೇಕು, ಯಾವಾಗ ತರ್ಪಣ ಬಿಡ್ಬೇಕು ಎನ್ನುವ ಪ್ರಶ್ನೆ ಕಾಡೋದು ಸಾಮಾನ್ಯ.
ಮಹಾಲಯ ಅಮಾವಾಸ್ಯೆಯಂದು ಪಿಂಡ ದಾನಕ್ಕೆ ಇದು ಒಳ್ಳೆ ಮುಹೂರ್ತ : ಬೆಳಿಗ್ಗೆ 11.50 ರಿಂದ ಮಧ್ಯಾಹ್ನ 12.38 ರವರೆಗೆ ಕುತುಪ ಮುಹೂರ್ತವಿರಲಿದೆ. ನಂತ್ರ ಮಧ್ಯಾಹ್ನ 12.38 ರಿಂದ ಮಧ್ಯಾಹ್ನ 1.27 ರವರೆಗೆ ರೋಹಿಣಿ ಮುಹೂರ್ತ ಇರಲಿದೆ. ಶಾಸ್ತ್ರಗಳ ಪ್ರಕಾರ, ಪಿಂಡದಾನ ಮಾಡಲು ಇದು ಒಳ್ಳೆಯ ಮುಹೂರ್ತವಾಗಿದೆ. ನಾಳೆ ಸೂರ್ಯಗ್ರಹಣವಿದ್ರೂ ಭಾರತದಲ್ಲಿ ಅದು ಗೋಚರಿಸುವುದಿಲ್ಲ. ಹಾಗಾಗಿ ಭಾರತೀಯರು ಸೂತಕ ಆಚರಿಸುವುದಿಲ್ಲ. ಪಿಂಡದಾನ, ಶ್ರಾದ್ಧ ಮಾಡುವವರು ಈ ಮುಹೂರ್ತದಲ್ಲಿ ಮಾಡಬಹುದು.
ನಾಳೆ ಸೂರ್ಯ ಗ್ರಹಣದಂದು ಸೂರ್ಯ ಮತ್ತು ಶನಿಯಿಂದ ದೊಡ್ಡ ಯೋಗ, ಈ ರಾಶಿಗೆ ಅದೃಷ್ಟ, ಸಂಪತ್ತು
ಸರಿಯಾದ ವಿಧಾನದಲ್ಲಿ ಪಿಂಡದಾನ : ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಪಿಂಡದಾನ, ಶ್ರಾದ್ಧ, ತರ್ಪಣ ಬಿಡುವ ಕೆಲಸ ಶಾಸ್ತ್ರೋಕ್ತವಾಗಿ ನಡೆಯಬೇಕು. ನೀವು, ಅರ್ಹ ಬ್ರಾಹ್ಮಣರ ನೇತೃತ್ವದಲ್ಲಿ ಇದನ್ನು ಮಾಡಬೇಕು. ತೀರ್ಥ ಸ್ಥಳದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಶ್ರದ್ಧಾ ಮತ್ತು ಪಿಂಡ ದಾನ ಮಾಡಬಹುದು. ಬ್ರಾಹ್ಮಣರಿಗೆ ಗೌರವಯುತವಾಗಿ ಊಟ ಹಾಕಿ ಮತ್ತು ದಕ್ಷಿಣೆ ನೀಡಿ. ಇದ್ರಿಂದ ಪೂರ್ವಜರ ಆತ್ಮ ಶಾಂತವಾಗಲಿದೆ.
ಮಹಾಲಯ ಅಮಾವಾಸ್ಯೆಯಂದು ಈ ಕೆಲ್ಸ ಮಾಡಿ :
• ಮಹಾಲಯ ಅಮಾವಾಸ್ಯೆ, ಸೂರ್ಯಗ್ರಹಣ ಹಾಗೂ ಭಾನುವಾರ ಎಲ್ಲವೂ ಒಟ್ಟಿಗೆ ಬಂದಿದ್ದು, ಈ ದಿನ ತುಳಸಿ ಎಲೆಗಳನ್ನು ಕೀಳಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮಹಾಲಯ ಅಮಾವಾಸ್ಯೆ ದಿನ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ. ದೀಪ ಹಚ್ಚಿದ ನಂತ್ರ ತುಳಸಿ ಗಿಡವನ್ನು ಪ್ರದಕ್ಷಿಣೆ ಹಾಕಿ. ತುಳಸಿ ಗಿಡವನ್ನು 7 ಅಥವಾ 11 ಬಾರಿ ಪ್ರದಕ್ಷಿಣೆ ಹಾಕಿ. ಲಕ್ಷ್ಮಿ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ.
• ಮಹಾಲಯ ಅಮಾವಾಸ್ಯೆಯಂದು ಹಸುವಿಗೆ ಹಸಿರು ಮೇವು ತಿನ್ನಿಸಿ. ನಾಯಿಗೆ ಆಹಾರ ನೀಡಿ. ಪಕ್ಷಿಗಳು ಮತ್ತು ಕಾಗೆಗಳಂತಹ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ನೀಡಿ. ಹಿಟ್ಟಿನ ಉಂಡೆಗಳನ್ನು ಮಾಡಿ, ಕೊಳ ಅಥವಾ ನದಿಯಲ್ಲಿರುವ ಮೀನುಗಳಿಗೆ ಹಾಕಿ.
• ಪಿತೃ ಅಮಾವಾಸ್ಯೆಯಂದು ನಿರ್ಗತಿಕರಿಗೆ ದಾನ ಮಾಡಬೇಕು. ಬಡವರಿಗೆ ಆಹಾರ, ಧಾನ್ಯಗಳು ಮತ್ತು ಬಟ್ಟೆಗಳನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ.
ಹುಡುಗಿಯರ ಅದೃಷ್ಟವನ್ನೇ ಬದಲಾಯಿಸುತ್ತಾರೆ ಈ ದಿನಾಂಕದಂದು ಜನಿಸಿದ ಹುಡುಗರು
• ಈ ದಿನ ಬ್ರಾಹ್ಮಣರು ಊಟಕ್ಕೆ ಬರಲು ಸಾಧ್ಯವಾಗದಿದ್ದರೆ, ಎಣ್ಣೆ, ತುಪ್ಪ, ಬೇಳೆ, ಅಕ್ಕಿ, ಉಪ್ಪು, ಮೆಣಸಿನಕಾಯಿ ಮತ್ತು ಅರಿಶಿನದಂತಹ ಹಸಿ ಆಹಾರವನ್ನು ಒಂದು ತಟ್ಟೆಯಲ್ಲಿ ಇರಿಸಿ ಬ್ರಾಹ್ಮಣರಿಗೆ ದಾನ ಮಾಡಿ. ಇದ್ರ ಜೊತೆ ಹಣವನ್ನು ಇಡಬೇಕು.
• ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಇದನ್ನು ವಿಷ್ಣುವಿನ ಜೊತೆಗೆ ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅಮವಾಸ್ಯೆಯಂದು ಅರಳಿ ಮರಕ್ಕೆ ನೀರು ಅರ್ಪಿಸಿ. ಇದರಿಂದ ಪಿತೃ ದೋಷ ಕಡಿಮೆ ಆಗುತ್ತದೆ.
