ನೀರಿನಿಂದಲ್ಲ ಬಿಯರ್‌ನಿಂದ ಸ್ನಾನ; ಪ್ರವಾಸಿಗರನ್ನು ಆಕರ್ಷಿಸುತ್ತಿದೆ ನ್ಯೂ ಟ್ರೆಂಡ್
ನೀರಿನಿಂದಲ್ಲ ಬಿಯರ್‌ನಿಂದ ಸ್ನಾನ: ಯುರೋಪ್‌ನಲ್ಲಿ ಬಿಯರ್ ಸ್ಪಾ ಎಂಬ ಹೊಸ ಟ್ರೆಂಡ್ ಜನಪ್ರಿಯವಾಗುತ್ತಿದೆ. ಇದರಲ್ಲಿ ಜನರು ಬಿಯರ್ ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಾರೆ, ಇದು ಚರ್ಮದ ಆರೋಗ್ಯ ಮತ್ತು ಮಾನಸಿಕ ವಿಶ್ರಾಂತಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ವಿಚಿತ್ರ ಆಕ್ಟಿವಿಟಿ
ಜಗತ್ತಿನಲ್ಲಿಂದು ಆರೋಗ್ಯಕ್ಕೆ ಸಂಬಂಧಿಸಿದ ವಿಚಿತ್ರ ಆಕ್ಟಿವಿಟಿಗಳು ಟ್ರೆಂಡಿಂಗ್‌ನಲ್ಲಿರುತ್ತವೆ. ಇದೀಗ ವಿಭಿನ್ನವಾದ ಟ್ರೆಂಡ್ ಆರಂಭಗೊಂಡಿದ್ದು, ಜನರನ್ನು ಆಕರ್ಷಿಸುತ್ತಿದೆ. ದೇಶವೊಂದರ ಜನರು ಆರೋಗ್ಯ ವೃದ್ಧಿಗಾಗಿ ನೀರಿನಿಂದಲ್ಲ ಬಿಯರ್‌ನಿಂದ ಸ್ನಾನ ಮಾಡುತ್ತಿದ್ದಾರೆ.
ಬಿಯರ್‌ನಿಂದ ಸ್ನಾನ ಮಾಡುವ ಟ್ರೆಂಡ್
ಯುರೋಪ್‌ನಲ್ಲಿ ಬಿಯರ್‌ನಿಂದ ಸ್ನಾನ ಮಾಡುವ ಟ್ರೆಂಡ್ ಚಾಲ್ತಿಯಲ್ಲಿದೆ. ಇದನ್ನು Beer Spa ಎಂದು ಕರೆಯಲಾಗುತ್ತದೆ. ಈ ಸ್ಪಾದಲ್ಲಿ ಜನರು ಬಿಯರ್ ತುಂಬಿದ ಟಬ್‌ನಲ್ಲಿ ಕುಳಿತು ರಿಲ್ಯಾಕ್ಸ್ ಮಾಡುತ್ತಾರೆ. ಈ ವೇಳೆ ಒಂದೊಂದೇ ಗುಟುಕು ಬಿಯರ್ ಹೀರುತ್ತಾರೆ. ಹೀಗೆ ಮಾಡೋದರಿಂದ ದೈಹಿಕ ಮತ್ತು ಮಾನಸಿಕವಾಗಿ ಹಲವು ಆರೋಗ್ಯಕರ ಲಾಭಗಳಿವೆ ಎಂದು ವರದಿಯಾಗಿದೆ.
ಪ್ರವಾಸಿಗರ ಆಕರ್ಷಣೆಯ ಕೇಂದ್ರ
ಈ ಟ್ರೆಂಡ್ ಶುರುವಾದಾಗಿನಿಂದ ಬಿಯರ್ ಕುಡಿಯಲು ಮಾತ್ರವಲ್ಲ ಸ್ನಾನ ಮಾಡೋದಕ್ಕೂ ಬಳಕೆ ಮಾಡಲಾಗುತ್ತಿದೆ. ಈ ರೀತಿಯ ವಿಧಾನ ಯುರೋಪ್‌ನಲ್ಲಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಿಯರ್ ಬಾತ್ ಅಥವಾ ಬಿಯರ್ ಸ್ಪಾ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಬಿಯರ್ ಸ್ಪಾ ಲಾಭಗಳು
ಬಿಯರ್‌ನಿಂದ ಸ್ನಾನ ಮಾಡೋದರಿಂದ ದೈಹಿಕ ಮತ್ತು ಮಾನಸಿಕವಾಗಿ ಹಲವು ಆರೋಗ್ಯಕರ ಲಾಭಗಳಿವೆ. ಬಿಯರ್‌ನಲ್ಲಿರುವ ಯೀಸ್ಟ್, ವಿಟಮಿನ್ ಬಿ ಚರ್ಮದ ಕಾಂತಿಯನ್ನು ಹೆಚ್ಚಳ ಮಾಡುತ್ತಿದೆ. ಬಿಯರ್‌ನಿಂದ ಫೇಸ್‌ವಾಶ್ ಮಾಡೋದರಿಂದ ಮುಖದ ಗ್ಲೋ ಹೆಚ್ಚಾಗುತ್ತೆ ಎಂದು ಸ್ಪಾ ಆಯೋಜಕರು ಹೇಳುತ್ತಾರೆ.
ರಕ್ತ ಸಂಚಾರದಲ್ಲಿ ಸುಧಾರಣೆ
ಬಿಸಿಯಾದ ಬಿಯರ್ ತುಂಬಿರುವ ಟಬ್‌ನಲ್ಲಿ ದೀರ್ಘ ಸಮಯದವರೆಗೆ ಕುಳಿತುಕೊಳ್ಳೋದರಿಂದ ರಕ್ತ ಸಂಚಾರದಲ್ಲಿ ಸುಧಾರಣೆ ಕಂಡು ಬರುತ್ತದೆ. ಬಿಯರ್‌ನಲ್ಲಿರುವ ನ್ಯಾಚುರಲ್ ಇಂಗ್ರಿಡಿಯೆನ್ಸ್‌ನಿಂದ ಶರೀರದಿಂದ ಟಾಕ್ಸಿನ್ಸ್ ಹೊರಗೆ ಹೋಗುತ್ತದೆ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಎಂದು ವರದಿಯಾಗಿದೆ.
ಬಿಯರ್ ಸ್ಪಾನತ್ತ ಆಕರ್ಷಿತರಾಗುತ್ತಿರುವ ಪ್ರವಾಸಿಗರು
ಯುರೋಪ್‌ಗೆ ಭೇಟಿ ನೀಡುವ ಪ್ರವಾಸಿಗರು ಬಿಯರ್ ಸ್ಪಾನತ್ತ ಆಕರ್ಷಿತರಾಗುತ್ತಿದ್ದಾರೆ. ಚೆಕ್ ರಿಪಬ್ಲಿಕ್, ಆಸ್ಟ್ರಿಯಾ, ಜರ್ಮನಿ ಮತ್ತು ಪೋಲೆಂಡ್‌ಗಳಲ್ಲಿ ಬಿಯರ್ ಸ್ಪಾ ಟ್ರೆಂಡಿಂಗ್ ಬ್ಯುಸಿನೆಸ್ ಐಡಿಯಾ ಆಗಿದೆ. ದೊಡ್ಡದಾದ ಕಟ್ಟಿಗೆಯ ಟಬ್‌ನಲ್ಲಿ ಬಿಯರ್ ತುಂಬಿಸಲಾಗುತ್ತದೆ. ಈ ಟಬ್‌ನಲ್ಲಿ ಗ್ರಾಹಕರು ಗಂಟೆಗಟ್ಟಲೇ ಕುಳಿತು ರಿಲ್ಯಾಕ್ಸ್ ಮಾಡಬಹುದಾಗಿದೆ.
ವೈದ್ಯಕೀಯ ತಜ್ಞರ ಅಭಿಪ್ರಾಯ
ವೈದ್ಯಕೀಯ ತಜ್ಞರ ಪ್ರಕಾರ, ಬಿಯರ್ ಸ್ಪಾದಿಂದ ಹೆಚ್ಚಿನ ಆರೋಗ್ಯಕರ ಲಾಭಗಳಿಲ್ಲ. ಕೆಲಸದ ಒತ್ತಡ ಅಥವಾ ಇನ್ಯಾವುದೇ ಒತ್ತಡದಲ್ಲಿರೋರಿಗೆ ಬಿಯರ್ ಬಾತ್ ನಿರಾಳತೆಯನ್ನುಂಟು ಮಾಡಬಹುದು. ಒತ್ತಡ ನಿವಾರಣೆಗೆ ಇದು ಒಳ್ಳೆಯ ಆಯ್ಕೆ ಎಂದು ಹೇಳಲು ಸಾಧ್ಯವಿಲ್ಲ. ಬಿಯರ್‌ನಲ್ಲಿ ಅತ್ಯಧಿಕ ಕೆಮಿಕಲ್ ಇರೋದರಿಂದ ಸೈಡ್ ಎಫೆಕ್ಟ್ ಅಪಾಯವೂ ಇದರಲ್ಲಿದೆ ಎಂದು ಹೇಳುತ್ತಾರೆ.
ಬಿಯರ್ ಕುಡಿಯುವ ದೇಶ
ಜೆಕ್ ಗಣರಾಜ್ಯವನ್ನು ವಿಶ್ವದ ಅತಿದೊಡ್ಡ ಬಿಯರ್ ಕುಡಿಯುವ ದೇಶವೆಂದು ಕರೆಯಲಾಗುತ್ತದೆ ಮತ್ತು ಸ್ಪಾ ಸಂಸ್ಕೃತಿಯೊಂದಿಗೆ ಬಿಯರ್ ಬಾತ್ ಸಹ ಇಲ್ಲಿ ಟ್ರೆಂಡ್ ಆಗುತ್ತಿದೆ. ಈ ಪ್ರವೃತ್ತಿ ಯುರೋಪಿನ ಇತರ ದೇಶಗಳಿಗೆ ಹಾಗೂ ಏಷ್ಯಾ ಮತ್ತು ಅಮೆರಿಕದ ಕೆಲವು ಐಷಾರಾಮಿ ಸ್ಪಾ ರೆಸಾರ್ಟ್‌ಗಳಿಗೆ ಈ ಟ್ರೆಂಡ್ ವ್ಯಾಪಿಸಿದೆ.
ವಿಶ್ರಾಂತಿ
ಈ ಸ್ನಾನದಲ್ಲಿ ಜನರು ಸಾಮಾನ್ಯವಾಗಿ ವಿಶ್ರಾಂತಿಗಾಗಿ ಆರಾಮದಾಯಕವಾದ ಕುರ್ಚಿಯಂತಹ ಟಬ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಬಿಯರ್ ಕುಡಿಯುವ ಸೌಲಭ್ಯ
ಈ ಸ್ಪಾದಲ್ಲಿ ನೇರವಾಗಿ ಬಿಯರ್ ಕುಡಿಯುವ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ. ಆದ್ದರಿಂದ, ಈ ಪರಿಕಲ್ಪನೆಯು ಆರೋಗ್ಯಕ್ಕೆ ಮಾತ್ರವಲ್ಲದೆ ಪ್ರವಾಸೋದ್ಯಮ ಮತ್ತು ಐಷಾರಾಮಿ ಅನುಭವಕ್ಕೂ ಸಂಬಂಧಿಸಿದೆ.